ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ಶುಭ್ಮನ್ ಗಿಲ್(Shubman Gill).. ಗುಜರಾತ್ ಟೈಟಾನ್ಸ್ (Gujarat Totans)ತಂಡದ ಯುವ ಆಟಗಾರರೊಬ್ಬರ ತಂದೆಗೆ ಸರ್ಪ್ರೈಸ್ ನೀಡಿದ್ದಾರೆ. ಏರ್ಪೋರ್ಟ್ನಲ್ಲಿ ಸೆಕ್ಯೂರಿಟಿ ಗಾರ್ಡ್ (Security Guard) ಆಗಿ ಕೆಲಸ ಮಾಡುತ್ತಿರುವ ಅವರನ್ನು ಆತ್ಮೀಯವಾಗಿ ಮಾತನಾಡಿಸಿ ಕುಶಲ ವಿಚಾರಿಸಿದ್ದಾರೆ. ಇ
ದಕ್ಕೆ ಸಂಬಂಧಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಯಾರು ಆ ಪ್ಲೇಯರ್? ಆವರ ತಂದೆ ಯಾರು?
ರಾಂಚಿ ಟೆಸ್ಟ್ ಪಂದ್ಯದ ಗೆಲುವಿನಲ್ಲಿ ಒನ್ಡೌನ್ ಬ್ಯಾಟರ್ ಶುಭ್ಮನ್ ಗಿಲ್ ಮಹತ್ವದ ಪಾತ್ರ ವಹಿಸಿದ್ರು. ಎರಡನೇ ಇನ್ನಿಂಗ್ಸ್ನಲ್ಲಿ ಯುವ ವಿಕೆಟ್ ಕೀಪರ್ ಧ್ರುವ್ ಜುರೇಲ್ ಜೊತೆಗೂಡಿ ಟೀಂ ಇಂಡಿಯಾವನ್ನು ವಿಜಯ ತೀರಕ್ಕೆ ಸೇರಿಸಿದ್ರು ಈ ಪಂಜಾಬಿ ಬ್ಯಾಟರ್.
ರಾಂಚಿ ಟೆಸ್ಟ್ ಮುಗಿಸಿಕೊಂಡು ಅಲ್ಲಿನ ಬಿರ್ಸಾ ಮುಂಡಾ ಏರ್ಪೋರ್ಟ್ಗೆ ಬಂದ ಶುಭ್ಮನ್ ಗಿಲ್ ಓರ್ವ ಸೆಕ್ಯೂರಿಟಿ ಗಾರ್ಡ್ ಅನ್ನು ಮಾತನಾಡಿಸಿದರು. ಅವರ ಹೆಸರು ಫ್ರಾನ್ಸಿಸ್ ಜೇವಿಯರ್ ಮಿಂಜ್..
https://twitter.com/CricCrazyJohns/status/1762814559172383026
20 ಲಕ್ಷ ಮೂಲ ಬೆಲೆ.. ಸೇಲ್ ಆಗಿದ್ದು 3.6 ಕೋಟಿಗೆ..
ಇತ್ತೀಚಿಗೆ ನಡೆದ ಐಪಿಎಲ್ ಮಿನಿ ಬಿಡ್ಡಿಂಗ್ನಲ್ಲಿ (IPL 2024)ಗುಜರಾತ್ ಟೈಟಾನ್ಸ್ ಫ್ರಾಂಚೈಸಿ 3.6 ಕೋಟಿ ಕೊಟ್ಟು ಖರೀದಿಸಿದ ಯುವ ಆಟಗಾರ ರಾಬಿನ್ ಮಿಂಜ್ (Robin Minz)ಅವರ ತಂದೆಯೇ ಈ ಸೆಕ್ಯೂರಿಟಿ ಗಾರ್ಡ್ ಫ್ರಾನ್ಸಿಸ್ ಜೇವಿಯರ್ ಮಿಂಜ್..
ಐಪಿಎಲ್ ಚರಿತ್ರೆಯಲ್ಲಿಯೇ ಸೇಲ್ ಆದ ಮೊದಲ ಬುಡಕಟ್ಟು ಸಮುದಾಯದ ಕ್ರಿಕೆಟರ್ ಆಗಿ ರಾಬಿನ್ ಮಿಂಜ್ ದಾಖಲೆ ಬರೆದಿದ್ರು.
ದೇಶಿಯ ಟೂರ್ನಿಗಳಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಮಿಂಚಿದ ರಾಬಿನ್ ಮಿಂಜ್ ಐಪಿಎಲ್ ಮಿನಿ ಬಿಡ್ಡಿಂಗ್ನಲ್ಲಿ 20 ಲಕ್ಷ ಮೂಲ ಬೆಲೆಗೆ ಪಾಲ್ಗೊಂಡಿದ್ರು. ಆದರೆ, ಗುಜರಾತ್ ಟೈಟಾನ್ಸ್ ಫ್ರಾಂಚೈಸಿ 3.6 ಕೋಟಿ ಕೊಟ್ಟು ರಾಬಿನ್ ಮಿಂಜ್ರನ್ನು ಖರೀದಿಸಿತ್ತು.
ರಾಬಿನ್ ಮಿಂಜ್ ತಂದೆ ಈ ಹಿಂದೆ ಸೇನೆಯಲ್ಲಿ ಕೆಲಸ ಮಾಡಿದ್ದರು ಸದ್ಯ ಬಿರ್ಸಾ ಮುಂಡಾ ಏರ್ಪೋರ್ಟ್ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ.
ಇತ್ತೀಚಿಗೆ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ಗೆ ವಾಪಸ್ ಆದ ಹಿನ್ನೆಲೆಯಲ್ಲಿ ಗುಜರಾತ್ ಟೈಟಾನ್ಸ್ ನಾಯಕರಾಗಿ ಶುಭ್ಮನ್ ಗಿಲ್ ನೇಮಕಗೊಂಡಿದ್ದರು.


