#Exclusive News
ತುರುವೇಕೆರೆ ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಶೃತಿ ಮೋಹನ್ ಆಯ್ಕೆ




ತುರುವೇಕೆರೆ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಶ್ರುತಿ ಮೋಹನ್ ಆಯ್ಕೆಯಾಗಿದ್ದಾರೆ. ಒಕ್ಕಲಿಗರ ಸಂಘದ ಜತೆ ಶ್ರುತಿ ಕುಟುಂಬ ಹಲವು ವರ್ಷಗಳಿಂದ ಗುರುತಿಸಿಕೊಂಡಿದೆ. ಶ್ರುತಿ ಅವರ ಆಯ್ಕೆ ಮೂಲಕ ಒಕ್ಕಲಿಗರ ಸಂಘಕ್ಕಾಗಿ ಮತ್ತಷ್ಟು ಸೇವೆ ಮಾಡಲು ಇವರಿಗೆ ಅವಕಾಶ ಸಿಕ್ಕಿದೆ. ಜುಲೈ 27ರಂದು ಸಂಘಕ್ಕೆ ಚುನಾವಣೆ ನಡೆದಿತ್ತು. ಚುನಾವಣೆ ಅಧಿಕಾರಿಗಳಾದ ಮಂಜೇಗೌಡ ಅವರು ಶೃತಿ ಅವರ ಪತಿಯಾದ ಮೋಹನ್ ಅವರಿಗೆ ಪ್ರಮಾಣ ಪತ್ರವನ್ನು ನೀಡಿದರು. ಶ್ರುತಿ ಅವರಿಗೆ ನಿರ್ದೇಶಕರಾಗಿ ಅವಕಾಶ ಸಿಕ್ಕಿದ್ದಕ್ಕೆ ಸಂಘದ ಪದಾಧಿಕಾರಿಗಳು ಹಾಗೂ ಹಿತೈಷಿಗಳು ಸಂತಸ ವ್ಯಕ್ತಪಡಿಸಿದ್ದಾರೆ.



