ರಾಜಕೀಯ

ನಿಮ್ಮ ಸಾಧನೆ ಒಂದು ತೋರಿಸಿ ಸಿದ್ದಾಮಣ್ಣ : ನಿಖಿಲ್​ ಕುಮಾರಸ್ವಾಮಿ

ಬೆಂಗಳೂರು : ಈ ಸಾಧನೆ ಮಾಡೋದಕ್ಕೆ ನೀವೇ ಬೇಕಾ..? ಇಂಥ ಬಜೆಟ್​ ಮಂಡಿಸೋದಕ್ಕೆ ನೀವೇಬೇಕಾ..? 16ನೇ ಬಜೆಟ್​ ಮಂಡಿಸಿದ್ದೇನೆ ಅಂತಿರಲ್ಲ, ನಿಮ್ಮ ಸಾಧನೆ ಒಂದೇ ಒಂದು ಸಾಧನೆ ತೋರಿಸಿ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಮಗ ಮತ್ತು ಜೆಡಿಎಸ್​ ಯುವ ನಾಯಕ ನಿಖಿಲ್​ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಲ್ಲಿರುವ ಜೆಡಿಎಸ್​ ಮುಖ್ಯ ಕಚೇರಿ ಜೆಪಿ ಭವನದಲ್ಲಿ ಮಾತಾಡಿದ ನಿಖಿಲ್​ ಕುಮಾರಸ್ವಾಮಿ, ಬಜೆಟ್​​ನಲ್ಲಿ 2 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದೀರಾ..? ನಿಮ್ಮ ಮಕ್ಕಳು, ನಮ್ಮ ಮಕ್ಕಳ ಮೇಲೂ ಸಾಲ ಇದೆ. ಕಾಕಾ ಪಾಟೀಲ್​, ಮಹದೇವಪ್ಪ ಮಕ್ಕಳ ಮೇಲೂ ಸಾಲ ಇದೆ. ಯಾರು ಸಾಲ ತೀರಿಸಬೇಕು ಎಂದು ನಿಖಿಲ್​ ಕುಮಾರಸ್ವಾಮಿ ಪ್ರಶ್ನಿಸಿದರು.

ಕಾಂಗ್ರೆಸ್​ ಹೈಕಮಾಂಡ್​ ಡಮ್ಮಿ ಹೈಕಮಾಂಡ್

ಜಾತಿ ಗಣತಿ ವಿರುದ್ಧವಾಗಿ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಮಗ ನಿಖಿಲ್​ ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿದ್ದಾರೆ. ನಿಮ್ಮ ದೆಹಲಿ ಹೈಕಮಾಂಡ್​ ಡಮ್ಮಿ ಹೈಕಮಾಂಡ್​. ನೀವು ಅಧಿಕಾರ ಉಳಿಸಿಕೊಳ್ಳಲು ಜಾತಿ ಗಣತಿ ವರದಿ ಜಾರಿಗೆ ತಂದಿದ್ದೀರಾ..? ನಿಮ್ಮನ್ನು ನೀವು ಸಮಾಜವಾದಿ ಎಂದು ಹೇಳುತ್ತೀರಿ. ವಕೀಲರಾಗಿ ನೀವು ಸಾಕಷ್ಟು ತಿಳಿದುಕೊಂಡಿದ್ದೀರಿ. ಆದ್ರೆ ವಕೀಲರಾಗಿ ನೀವು ಯಾವ ತತ್ವ ಆದರ್ಶಗಳನ್ನ ಕಡೆಗಣಿಸಿದ್ದೀರಿ.ಈಗಾಗಲೇ ಎರಡು ಬಾರಿ ಸಿಎಂ ಆಗಿದ್ದೀರಿ. ನಿಮ್ಮ ಪಕ್ಷದ ವೇದಿಕೆಯಲ್ಲಿ ಎಷ್ಟು ದಿನ ಸಿಎಂ ಆಗಬೇಕು ಅಂತ ತೀರ್ಮಾನ ಆಗಿದೆ ಎಂದು ನಿಖಿಲ್​ ಕುಮಾರಸ್ವಾಮಿ ಪ್ರಶ್ನಿಸಿದರು. ಕಾಂತರಾಜು ಅವರೂ ಸೂಕ್ತವಾಗಿ ವರದಿ ಸಂಗ್ರಹಿಸಿಲ್ಲ. ಕಾಂತರಾಜು ವರದಿ ಸದಸ್ಯ ಕಾರ್ಯದರ್ಶಿ ಸಹಿ ಇರಲಿಲ್ಲ. ಜಾತಿ ಗಣತಿ ವರದಿ ಬಗ್ಗೆ ಕಾಂತರಾಜು ಅವರಿಗೆ ಆತ್ಮವಿಶ್ವಾಸ ಕುಗ್ಗಿತ್ತು ಎಂದು ನಿಖಿಲ್​ ಕುಮಾರಸ್ವಾಮಿ ಹೇಳಿದ್ದಾರೆ.

Comments (0)

Your email address will not be published. Required fields are marked *

Back to top button