ಹೊಟ್ಟೆಯ ಕೊಬ್ಬು ಹೆಚ್ಚಾಗಲು ಕಾರಣವೇನು ಎಂದು ನಾವು ಮೊದಲು ತಿಳಿದುಕೊಳ್ಳಬೇಕು. ಆ್ ಮಾತ್ರ ತೂಕವನ್ನು ಇಳಿಸಿಕೊಳ್ಳಲು ಸುಲಭವಾಗುತ್ತದೆ. ಅದರಲ್ಲಿಯೂ ಕೆಲ ಕೆಟ್ಟ ಅಭ್ಯಾಸಗಳು ನಮ್ಮ ದೇಹ ತೂಕ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದ್ದು, ಅವುಗಳನ್ನು ಬಿಡುವುದು ತುಂಬಾ ಅನಿವಾರ್ಯ. ಹಾಗಾದರೆ ಆ ಕೆಟ್ಟ ಅಭ್ಯಾಸಗಳು ಯಾವುವು ಅಂತೀರಾ..?
ಇತ್ತೀಚಿನ ದಿನಗಳಲ್ಲಿ ತೂಕ ಅನೇಕ ಮಂದಿಗೆ ತಲೆ ನೀವಾಗಿದೆ. ಅದರಲ್ಲಿಯೂ ಇದು ಆರೋಗ್ಯಕ್ಕೆ ಬಹಳಷ್ಟು ಹಾನಿಯನ್ನುಂಟುಮಅಡುತ್ತದೆ. ಬಹುತೇಕ ಮಂದಿ ಇದನ್ನು ದೊಡ್ಡ ರೋಗದಂತೆ ಭಾವಿಸುತ್ತಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ನಮ್ಮ ತಪ್ಪಾದ ಆಹಾರ ಪದ್ಧತಿ ಮತ್ತು ಅನಾರೋಗ್ಯಕರ ಜೀವನಶೈಲಿ.
ಹೊಟ್ಟೆಯ ಕೊಬ್ಬು ಹೆಚ್ಚಾಗಲು ಕಾರಣವೇನು ಎಂದು ನಾವು ಮೊದಲು ತಿಳಿದುಕೊಳ್ಳಬೇಕು. ಆಗ ಮಾತ್ರ ತೂಕವನ್ನು ಇಳಿಸಿಕೊಳ್ಳಲು ಸುಲಭವಾಗುತ್ತದೆ. ಅದರಲ್ಲಿಯೂ ಕೆಲ ಕೆಟ್ಟ ಅಭ್ಯಾಸಗಳು ನಮ್ಮ ದೇಹ ತೂಕ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದ್ದು , ಅವುಗಳನ್ನು ಬಿಡುವುದು ತುಂಬಾ ಅನಿವಾರ್ಯ.
ದೈಹಿಕ ಚಟುವಟಿಕೆ ಮಾಡದಿರುವುದು: ಅನೇಕ ಮಂದಿ ಯಾವಾಗಲೂ ಅರಾಮಾಗಿರಲು ಇಷ್ಟಪಡುತ್ತಾರೆ. ಹೆಚ್ಚು ಹೊತ್ತು ಕುಳಿತುಕೊಳ್ಳುವುದು ಅಥವಅ ಮಲಗಲು ಇಷ್ಟಪಡುತ್ತಾರೆ. ಇಂತಹವರು ದೈಹಿಕ ಚಟುವಟಿಕೆಗಳನ್ನು ಮಅಡುವುದು ಬಹಳ ಕಡಿಮೆ. ಇದರಿಂದ ದೇಹದಲ್ಲಿ ಕೊಬ್ಬು ಸಂಗ್ರಹಗೊಳ್ಳುತ್ತದೆ.
ತೂಕ ಹೆಚ್ಚಳದಿಂದ ತಪ್ಪಿಸಿಕೊಳ್ಳಲು ವಾಕಿಂಗ್, ಲಿಫ್ಟ್ ಬದಲಿಗೆ ಮೆಟ್ಟಿಲುಗಳನ್ನು ಬಳಸುವುದು, ಓಡುವುದು, ಜಅಗಿಂಗ್ , ಭಾರವಾದ ವಸ್ತುಗಳನ್ನು ಎತ್ತುವುದು ಮತ್ತು ಈಜುವುದು ಕೆಲವು ಕಠಿಣ ಕೆಲಸವನ್ನು ಮಾಡಬೇಕಾಗುತ್ತದೆ. ಹೀಗೆ ನಿಮ್ಮ ಜೀವನಶೈಲಿಯನ್ನು ಬದಲಾಯಿಸುವ ಮೂಲಕ ತೂಕವನ್ನು ಇಳಿಸಿಕೊಳ್ಳಲು ಸಾಧ್ಯವಾಗುತ್ತದೆ.
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಎಲ್ಲರಿಗೂ ತಿಳಿದಿದೆ. ಆದರೆ ನಿಯಮಿತವಾಗಿ ಕುಡಿಯುವ ಚಟ ಹೊಂದಿರುವವರ ಹೊಟ್ಟೆ ಮತ್ತು ಸೊಂಟದ ಸುತ್ತಲೂ ಕೊಬ್ಬು ಸಂಗ್ರಹಗೊಳ್ಳುತ್ತದೆ. ನಂತರ ಅದು ದೊಡ್ಡದಾಗುತ್ತದೆ.ಮದ್ಯಪಾನ ಮಾಡುವ ಅಭ್ಯಾಸವನ್ನು ಬಿಟ್ಟುಬಿಡಿ. ಇಲ್ಲದಿದ್ದರೆ ಬೊಜ್ಜು ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ.