Thursday, November 20, 2025
19.9 C
Bengaluru
Google search engine
LIVE
ಮನೆಕ್ರೈಂ ಸ್ಟೋರಿಶಾಪಿಂಗ್​ ವಿಚಾರಕ್ಕೆ ಗಲಾಟೆ; ಪತ್ನಿ ಕತ್ತು ಹಿಸುಕಿ ಕೊಲೆಗೈದ ಪತಿ

ಶಾಪಿಂಗ್​ ವಿಚಾರಕ್ಕೆ ಗಲಾಟೆ; ಪತ್ನಿ ಕತ್ತು ಹಿಸುಕಿ ಕೊಲೆಗೈದ ಪತಿ

ಬೆಂಗಳೂರು: ಗಂಡ-ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಆದರೆ ಇಲ್ಲೊಂದು ದಂಪತಿಗಳ ಜಗಳ ಕೊಲೆಯಲ್ಲಿ ಮುಕ್ತಾಯವಾಗಿದೆ. ಪತ್ನಿ ಶಾಪಿಂಗ್​ಗೆ ಹೋಗಿದ್ದಕ್ಕೆ ಸಿಟ್ಟಿಗೆದ್ದ ಪತಿ ಕಾಲಿನಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ.

ಶ್ರೀನಿವಾಸಪುರ ಮೂಲದ ಪದ್ಮಜಾ (29) ಕೊಲೆಯಾದ ಮಹಿಳೆ. ಪತಿ ಹರೀಶ್​ ಕೊಲೆ ಆರೋಪಿಯಾಗಿದ್ದಾನೆ.  ಬಿಇ ವ್ಯಾಸಂಗ ಮುಗಿಸಿದ್ದ ದಂಪತಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ರು.

ಕೆಲ ತಿಂಗಳ ಹಿಂದೆ ಆರೋಪಿ ಹರೀಶ್​ ಕೆಲಸ ಬಿಟ್ಟಿದ್ದಾನೆ. ಪತ್ನಿಯ ಜೊತೆ ಸಂಸಾರಿಕ ಜೀವನ ನಡೆಸದೆ ಪ್ರತಿ ದಿನ ಗಲಾಟೆ ಮಾಡಿದ್ದಾನೆ. ಜೂನ್​ 7 ರಂದು ಪತ್ನಿ ಶಾಪಿಂಗ್​ ಹೋಗಿದ್ದಕ್ಕೆ ಗಲಾಟೆ ಮಾಡಿದ್ದಾನೆ. ಈ ವಿಚಾರಕ್ಕೆ ಸಿಟ್ಟಿಗೆದ್ದ ಹರೀಶ್​​ ಪತ್ನಿಯ ಕುತ್ತಿಗೆ ಹಿಸುಕಿ ಹಲ್ಲೆ ಮಾಡಿ ಬಳಿಕ ನೆಲಕ್ಕೆ ಬೀಳಿಸಿ ಪದ್ಮಜಾ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಕೊಲೆ ಮಾಡಿದ್ದಾನೆ.

ಆದರೆ ತನ್ನ ಪತ್ನಿ ಪ್ರಜ್ಞೆ ತಪ್ಪಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರ ಬಳಿ ಹರೀಶ್​ ಹೇಳಿದ್ದ.  ಪೊಲೀಸರಿಗೆ ಹರೀಶ್​ ಮಾತಿನ ಮೇಲೆ ಅನುಮಾನ ಮೂಡಿದ್ದು ವಿಚಾರಣೆ ನಡೆಸಿದಾಗ ನಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಘಟನೆ ಸಂಬಂಧ ಬೊಮ್ಮನಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಹರೀಶ್​ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments