ಕ್ರೈಂ ಸ್ಟೋರಿಸುದ್ದಿ

ಜ್ಯೋತಿಷಿ ಕೇಸ್‌ನಲ್ಲಿ ಮೃತರ ಪತ್ನಿಯಿಂದ ಶಾಕಿಂಗ್ ಸತ್ಯ ಬಯಲು..!

ಜ್ಯೋತಿಷಿ ಕಮಲಾಕರ ಭಟ್ ಮತ್ತು ಸುಚಿತ್ರಾ ನಾಯ್ಕ್ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಅನ್ಯಾಯವಾಗಿ ಪ್ರಾಣ ಕಳೆದುಕೊಂಡ ವಸಂತ್ ಅವರ ಪತ್ನಿ ಸ್ಫೋಟಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಸುಚಿತ್ರಾ ನಾಯ್ಕ್ ಅವರ ಪತಿ ಮಹೇಶ್ ಅವರ ಸಹೋದರನಾದ ವಸಂತ್ ಅವರು ಈ ಪ್ರಕರಣಕ್ಕೆ ಯಾವುದೇ ನೇರ ಸಂಬಂಧ ಹೊಂದಿರಲಿಲ್ಲ. ಕೇವಲ ಸುಚಿತ್ರಾ ಅವರ ಮಗಳ ಆಸರೆಗೆ ನಿಂತ ಕಾರಣಕ್ಕೆ ಅವರು ತಮ್ಮ ಪ್ರಾಣವನ್ನೇ ಬಲಿ ಕೊಡಬೇಕಾಯಿತು ಎಂದು ವಸಂತ್ ಪತ್ನಿ ಕಣ್ಣೀರಿಡುತ್ತಾ ಇಂಚಿಂಚು ಮಾಹಿತಿಯನ್ನು ರಿವೀಲ್ ಮಾಡಿದ್ದಾರೆ.

ಸುಚಿತ್ರಾ ಅಲ್ಪ ಹಣಕ್ಕಾಗಿ ಕಂಡಕಂಡವರ ಜೊತೆ ಹಾಸಿಗೆ ಹಂಚಿಕೊಳ್ಳುತ್ತಿದ್ದಳು, ಆದರೆ ಕೋಟ್ಯಧೀಶ್ವರ ಜ್ಯೋತಿಷಿ ಕಮಲಾಕರ ಭಟ್ ಸಂಪರ್ಕಕ್ಕೆ ಬಂದ ಮೇಲೆ ಅವಳ ವರ್ತನೆ ಪೂರ್ಣವಾಗಿ ಬದಲಾಗಿತ್ತು. ಸುಚಿತ್ರಾ ನೀಡುತ್ತಿದ್ದ ಮಾನಸಿಕ ಹಿಂಸೆ ತಾಳಲಾರದೆ ಆಕೆಯ ಪತಿ ಮಹೇಶ್ ಬೆಂಗಳೂರಿಗೆ ತೆರಳಿ ನೆಲೆಸಿದ್ದರು. ವಿಪರ್ಯಾಸವೆಂದರೆ, ಮಹೇಶ್ ಅವರ ಕುಟುಂಬದ ಜೊತೆ ವಸಂತ್ ಅವರಿಗೆ ಅಷ್ಟಾಗಿ ಒಡನಾಟವೇ ಇರಲಿಲ್ಲ ಮತ್ತು ಸುಚಿತ್ರಾಳ ಮಗಳನ್ನು ಸಹ ವಸಂತ್ ಪತ್ನಿ ಈ ಹಿಂದೆ ಎಂದೂ ನೋಡಿರಲಿಲ್ಲ.

ಘಟನೆಯ ದಿನ ಸುಚಿತ್ರಾ ಮಗಳು ತನ್ನ ತಾಯಿ ಮತ್ತು ಕಮಲಾಕರ ಭಟ್ ನೀಡುತ್ತಿದ್ದ ಕಿರುಕುಳದ ಬಗ್ಗೆ ಬೆಂಗಳೂರಿನಲ್ಲಿದ್ದ ತಂದೆ ಮಹೇಶ್‌ಗೆ ಸಂದೇಶ ಕಳಿಸಿದ್ದಳು. ಅಲ್ಲಿರಲು ಅಸಾಧ್ಯವಾದ ಕಾರಣ ತನ್ನನ್ನು ಕರೆದೊಯ್ಯುವಂತೆ ಆಕೆ ವಿನಂತಿಸಿದಾಗ, ಮಹೇಶ್ ಅವರು ವಸಂತ್‌ಗೆ ಕರೆ ಮಾಡಿ ಮಗಳನ್ನು ಕರೆದುಕೊಂಡು ಬಂದು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳುವಂತೆ ಕೇಳಿಕೊಂಡಿದ್ದರು. ಅದೇ ಮೊದಲ ಬಾರಿಗೆ ವಸಂತ್ ಮನೆಗೆ ಬಂದಿದ್ದ ಆ ಹೆಣ್ಣುಮಗಳು ವಸಂತ್ ಪತ್ನಿಯನ್ನು ‘ದೊಡ್ಡಮ್ಮ’ ಎಂದು ಕರೆದಿದ್ದಳು. ಆದರೆ ಆ ಮಗಳ ರಕ್ಷಣೆಗೆ ನಿಂತಿದ್ದೇ ವಸಂತ್ ಪಾಲಿಗೆ ಮುಳುವಾಗಿ, ಕೆಲವೇ ನಿಮಿಷಗಳಲ್ಲಿ ನಡೆದ ಹೈಡ್ರಾಮಾದಲ್ಲಿ ಅವರು ಜೀವ ಕಳೆದುಕೊಳ್ಳುವಂತಾಯಿತು ಎಂದು ವಿವರಿಸಿದ್ದಾರೆ.

Comments (0)

Your email address will not be published. Required fields are marked *

Back to top button