ಕ್ರೈಂ ಸ್ಟೋರಿಸುದ್ದಿ

ಭೀಕರ ಅಪಘಾತ: 24 ಗಂಟೆಯಲ್ಲಿ ರಾಜ್ಯದ 51 ಮಂದಿ ದಾರುಣ ಸಾವು

ಬೆಂಗಳೂರು: ಇತ್ತೀಚೆಗೆ ರಾಜ್ಯದ ಹಲವೆಡೆ ಸಂಭವಿಸುತ್ತಿರುವ ಅಪಘಾತಗಳು ಭಯಾನಕವಾಗಿವೆ. ಸಾಲು, ಸಾಲು ದುರಂತಗಳು ರಸ್ತೆಯಲ್ಲಿ ರಕ್ತ ಚೆಲ್ಲುವಂತೆ ಮಾಡಿದೆ. ಏನೂ ಅರಿಯದ ಮಕ್ಕಳು ಭೀಕರ ಅಪಘಾತದಲ್ಲಿ ಕಣ್ಮುಚ್ಚಿ ಪ್ರಾಣ ಬಿಡುತ್ತಿವೆ.

ರಾಜ್ಯದಲ್ಲಿ ಸಂಭವಿಸುತ್ತಿರುವ ಭೀಕರ ಅಪಘಾತ ಹಾಗೂ ಸಾವಿನ ಸಂಖ್ಯೆ ಏರಿಕೆಯ ಬಗ್ಗೆ ರಾಜ್ಯ ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ

ಸೋಷಿಯಲ್ ಮೀಡಿಯಾ X ಖಾತೆಯಲ್ಲಿ ಪೋಸ್ಟ್ ಮಾಡಿರುವ ಎಡಿಜಿಪಿ ಅಲೋಕ್ ಕುಮಾರ್ ಅವರು ಕಳೆದ 24 ಗಂಟೆಯಲ್ಲಿ ಸಂಭವಿಸಿರುವ ರಸ್ತೆ ಅಪಘಾತದಲ್ಲಿ 51 ಜನ ಸಾವನ್ನಪ್ಪಿದ್ದಾರೆ. ಇದು ಇತ್ತೀಚಿಗೆ ಸಂಭವಿಸಿದ ಅತ್ಯಧಿಕ ಸಾವಿನ ಸಂಖ್ಯೆ. ಹಲವು ಅಪಘಾತಗಳಿಗೆ ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣವಾಗಿದೆ. ರಸ್ತೆ ಸುರಕ್ಷತೆಯನ್ನು ಜವಾಬ್ದಾರಿಯುತವಾಗಿ ಪಾಲಿಸುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದ್ದಾರೆ.

ಎಡಿಜಿಪಿ ಅಲೋಕ್ ಕುಮಾರ್ ಅವರು ನೀಡಿದ ಈ ಆಘಾತಕಾರಿ ವರದಿ ಬೆಚ್ಚಿ ಬೀಳಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಯಾಗಿದ್ದು, ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button