Top Newsಮನರಂಜನೆರಾಜ್ಯಸುದ್ದಿ

ಬಿಗ್ ಬಾಸ್ ಮನೆಯಲ್ಲಿ ಕಣ್ಣೀರ ಧಾರೆ; ಸುಸ್ತಾಗಿ ಹೋದ ಶೋಭಾ ಶೆಟ್ಟಿ

ಶೋಭಾ ಶೆಟ್ಟಿ ಅವರು ತೆಲುಗು ಬಿಗ್ ಬಾಸ್​ನಲ್ಲಿ ಸಾಕಷ್ಟು ಆವೇಶದಿಂದ ಆಟ ಆಡಿದ್ದರು. ಈಗ ಅವರು ಕನ್ನಡ ಬಿಗ್ ಬಾಸ್​ಗೆ ಬಂದಿದ್ದಾರೆ. ಇದನ್ನು ನೋಡಿ ಅನೇಕರು ಅವರು ಇದೇ ಆಟವನ್ನು ಇಲ್ಲಿಯೂ ಮುಂದುವರಿಸಬಹುದು ಎಂದುಕೊಂಡಿದ್ದರು.ಶೋಭಾ ಶೆಟ್ಟಿ ಬಿಗ್ ಬಾಸ್​ಗೆ ಬಂದ ಮೊದಲ ವಾರ ಕೂಗಾಡಿದ್ದರು. ಮಂಜು ವಿರುದ್ಧ ಅವರು ಭರ್ಜರಿ ವಾದ ನಡೆಸಿದ್ದರು. ಇದನ್ನು ನೋಡಿ ಅನೇಕರು ಅಚ್ಚರಿಗೊಂಡಿದ್ದರು. ಅದೇ ಕೊನೆ ಆದಾಗ ಬಳಿಕ ಶೋಭಾ ಥಂಡ್ ಆಗಿದ್ದಾರೆ.

ಮೊದಲ ಟಾಸ್ಕ್​ನಲ್ಲಿ ಇಂಜುರಿ ಹಾಗೂ ಸೋಲಿನ ಕಾರಣಕ್ಕೆ ಶೋಭಾ ಕಣ್ಣೀರು ಹಾಕಿದ್ದರು. ಈಗ ಅವರು ಮತ್ತೆ ಅತ್ತಿದ್ದಾರೆ. ಶೋಭಾ ಶೆಟ್ಟಿ ಅಳುವಿನ ಹಿಂದೆ ಸಾಕಷ್ಟು ನೋವಿದೆ. ಅವರ ಉಗ್ರ ಸ್ವರೂಪ ಎಲ್ಲಿ ಹೋಯಿತು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.ಬಿಗ್ ಬಾಸ್ ಟಾಸ್ಕ್ ಒಂದನ್ನು ನೀಡಿದ್ದರು. ಈ ಟಾಸ್ಕ್​ನಲ್ಲಿ ಎರಡನೇ ರೌಂಡ್​ನಲ್ಲಿ ಶೋಭಾಗೆ ಅವಕಾಶ ಕೊಡೋದಾಗಿ ಅವರ ತಂಡದ ನಾಯಕಿ ಮೋಕ್ಷಿತಾ ಹೇಳಿದ್ದರು. ಆದರೆ ಆ ಬಳಿಕ ಆಟವೇ ರದ್ದಾಗಿ ಹೋಯಿತು.

ಇದು ಶೋಭಾಗೆ ಬೇಸರ ಮೂಡಿಸಿದೆ. ಆಡೋಕೆ ಅವಕಾಶ ಸಿಗಲಿಲ್ಲವಲ್ಲ ಎಂದು ಅವರು ಕಣ್ಣೀರು ಹಾಕಿದ್ದಾರೆ.

Comments (0)

Your email address will not be published. Required fields are marked *

Back to top button