#Exclusive NewsTop Newsಮನರಂಜನೆರಾಜ್ಯಸಿನಿಮಾಸುದ್ದಿ

ಶಿವಣ್ಣನಿಗೆ ಇಂದು ಸರ್ಜರಿ…ರಾಜ್ಯದ ಹಲವೆಡೆ ಅಭಿಮಾನಿಗಳಿಂದ ಪೂಜೆ…!

ಶಿವರಾಜ್​ಕುಮಾರ್ ಅವರು ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಇಂದು (ಡಿಸೆಂಬರ್ 24) ಅಮೆರಿಕದ ಮಿಯಾಮಿಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅವರಿಗೆ ಸರ್ಜರಿ ನಡೆಯಲಿದೆ. ಸರ್ಜರಿ ಯಶಸ್ವಿ ಕಾಣಲಿ ಎಂದು ಫ್ಯಾನ್ಸ್ ಕೋರಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ರಾಜ್ಯದ ಹಲವು ಕಡೆಗಳಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದಾರೆ.

ಡಿಸೆಂಬರ್ 18ರಂದು ಶಿವರಾಜ್​ಕುಮಾರ್ ಅವರು ಪತ್ನಿ ಗೀತಾ ಶಿವರಾಜ್​ಕುಮಾರ್ ಜೊತೆ ಅಮೆರಿಕ ತೆರಳಿದರು. ಅಮೆರಿಕಕ್ಕೆ ಹೋಗುವುದಕ್ಕೂ ಮೊದಲು ಅನೇಕ ಗಣ್ಯರು ಶಿವರಾಜ್​ಕುಮಾರ್ ಅವರನ್ನು ಭೇಟಿ ಮಾಡಿ ವಿಶ್ ತಿಳಿಸಿದ್ದಾರೆ. ಅವರಿಗೆ ಸರ್ಜರಿ ಯಶಸ್ಸು ಕಾಣಲಿ ಎಂದು ಹಾರೈಸಿದ್ದಾರೆ. ಈಗ ಅವರ ಅಭಿಮಾನಿಗಳು ಕೂಡ ಒಳ್ಳೆಯದಾಗಲಿ ಎಂದು ಹಾರೈಸುತ್ತಿದ್ದಾರೆ. ಚಾಮರಾಜನಗರದ ಶಿವಣ್ಣ ಅಭಿಮಾನಿಗಳಿಂದ ಇಂದು ಈಶ್ವರನಿಗೆ ವಿಶೇಷ ಪೂಜೆ ನಡೆದಿದೆ. ಮೈಸೂರಿನ ವಿದ್ಯಾರ್ಥಿಗಳು ಕೂಡ ಶಿವಣ್ಣ ಅರೋಗ್ಯ ಗುಣ ಮುಖ ಆಗಲಿ ಎಂದು ವಿಶೇಷ ಪ್ರಾರ್ಥನೆ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button