Top Newsಮನರಂಜನೆರಾಜ್ಯಸಿನಿಮಾಸುದ್ದಿ

ಶಿವಣ್ಣ ಎಂಟ್ರಿಗೆ ‘ಸರಿಗಮಪ’ ಶೋ ಕಲರ್ ಫುಲ್!

ಶಿವರಾಜ್​ಕುಮಾರ್ ಅವರ ಚೈತನ್ಯ ಎಲ್ಲರಿಗೂ ಮಾದರಿ. ಇದು ಅನೇಕರಿಗೆ ಗೊತ್ತಿದೆ. ಅವರು ಇತ್ತೀಚೆಗೆ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಅಮೆರಿಕಕ್ಕೆ ಹೋಗಿ ಚಿಕಿತ್ಸೆ ಪಡೆದು ಬಂದ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ. ಅವರು ‘ಸರಿಗಮಪ’ ವೇದಿಕೆ ಏರಿದ್ದಾರೆ. ಈ ಸಂದರ್ಭದ ಪ್ರೋಮೋನ ಜೀ ಕನ್ನಡ ವಾಹಿನಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದನ್ನು ನೋಡಿದ ಶಿವಣ್ಣ ಫ್ಯಾನ್ಸ್ ಸಂಭ್ರಮಿಸಿದ್ದಾರೆ.

ಶಿವರಾಜ್​ಕುಮಾರ್ ಅವರಿಗೆ ಜೀ ಕನ್ನಡದ ಜೊತೆ ಒಳ್ಳೆಯ ಒಡನಾಟ ಇದೆ. ಈ ಮೊದಲು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋಗೆ ಅವರು ಜಡ್ಜ್ ಆಗಿದ್ರು. ಇದು ಪೂರ್ಣಗೊಳ್ಳುತ್ತಿದ್ದಂತೆ ಶಿವಣ್ಣ ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದರು. ಕೆಲ ದಿನಗಳ ಹಿಂದೆ ಅವರು ಬೆಂಗಳೂರಿಗೆ ಮರಳಿದ್ದಾರೆ. ವಿಶೇಷ ಎಂದರೆ ಅವರು ‘ಸರಿಗಮಪ’ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಜೀ ಕನ್ನಡ ವಾಹಿನಿ ಇದರ ಪ್ರೋಮೋ ರಿಲೀಸ್ ಮಾಡಿದೆ.

 

View this post on Instagram

 

A post shared by Zee Kannada (@zeekannada)

ಸರಿಗಮಪ’ ಶೋ ಇತ್ತೀಚೆಗೆ ಆರಂಭ ಆಗಿದೆ. ಈ ವೇದಿಕೆ ಮೇಲೆ ಶಿವರಾಜ್​ಕುಮಾರ್, ಗೀತಾ ಶಿವರಾಜ್​ಕುಮಾರ್ ಆಗಮಿಸಿದ್ದಾರೆ. ‘ಜೀವನವನ್ನು ಗೆದ್ದು ಬಂದತಹ ನಿಜವಾದ ಗೆಲುವಿನ ಸರದಾರರು’ ಎಂದು ಅನುಶ್ರೀ ಅವರು ಶಿವಣ್ಣನ ಎಂಟ್ರಿಗೆ ಡೈಲಾಗ್ ಹೊಡೆದಿದ್ದಾರೆ. ಶಿವರಾಜ್​ಕುಮಾರ್ ಅವರು ಆಗಮಿಸುತ್ತಿದ್ದಂತೆ ವೇದಿಕೆ ಮೇಲಿದ್ದ ತಾರಾ, ಶ್ರುತಿ ಆ್ಯಂಕರ್​ ಅನುಶ್ರೀ ಕಣ್ಣೀರು ಹಾಕಿದ್ದಾರೆ. ಅವರನ್ನು ತಬ್ಬಿ ಸ್ವಾಗತಿಸಿದ್ದಾರೆ. ಅವರ ಆರೋಗ್ಯ ವಿಚಾರಿಸಿಕೊಂಡಿದ್ದಾರೆ.

ಸರಿಗಮಪ ಮಹಾ ಮನರಂಜನೆ’ ಎಂದು ಜೀ ಕನ್ನಡ ವಾಹಿನಿ ಇದಕ್ಕೆ ಟೈಟಲ್ ನೀಡಿದೆ. ಈ ಎಪಿಸೋಡ್ ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಪ್ರಸಾರ ಕಾಣಲಿದೆ. ಈ ಎಪಿಸೋಡ್​ ನೋಡಲು ವೀಕ್ಷಕರು ಕಾದಿದ್ದಾರೆ. ಶಿವರಾಜ್​ಕುಮಾರ್ ಅವರು ಕ್ಯಾನ್ಸರ್ ಗೆದ್ದು ಬಂದ ರೀತಿಯನ್ನು ವಿವರಿಸುವ ಸಾಧ್ಯತೆ ಇದೆ. ಈ ಮೂಲಕ ಅನೇಕರಿಗೆ ಸ್ಫೂರ್ತಿ ಆಗುವ ನಿರೀಕ್ಷೆ ಇದೆ.

Comments (0)

Your email address will not be published. Required fields are marked *

Back to top button