Thursday, November 20, 2025
19.9 C
Bengaluru
Google search engine
LIVE
ಮನೆಕ್ರೈಂ ಸ್ಟೋರಿಮೂಡಬಿದ್ರೆ ಪ್ರತಿಷ್ಠಿತ ಕಾಲೇಜಿನ ಉಪನ್ಯಾಸಕರಿಂದ ಅ*ತ್ಯಾಚಾರ..!

ಮೂಡಬಿದ್ರೆ ಪ್ರತಿಷ್ಠಿತ ಕಾಲೇಜಿನ ಉಪನ್ಯಾಸಕರಿಂದ ಅ*ತ್ಯಾಚಾರ..!

ಬೆಂಗಳೂರು: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಪ್ರತಿಷ್ಠಿತ ಕಾಲೇಜಿನ ಇಬ್ಬರು ಉಪನ್ಯಾಸಕರು ಮತ್ತು ಆ ಉಪನ್ಯಾಸಕರ ಗೆಳೆಯನನ್ನು ಬಂಧಿಸಲಾಗಿದೆ.

ಬೆಂಗಳೂರು ನಗರ ಮಾರತಹಳ್ಳಿ ಠಾಣೆ ಪೊಲೀಸರು ಮೂಡಬಿದ್ರೆಯ ಪ್ರತಿಷ್ಠಿತ ಕಾಲೇಜಿನ ಜೀವವಿಜ್ಞಾನ ವಿಭಾಗದ ಉಪನ್ಯಾಸಕ ಸಂದೀಪ್​, ಭೌತ ವಿಜ್ಞಾನ ವಿಭಾಗದ ಉಪನ್ಯಾಸಕ ನರೇಂದ್ರ ಮತ್ತು ಇವರಿಬ್ಬರ ಸ್ನೇಹಿತ ಅನೂಪ್​ನನ್ನು ಬಂಧಿಸಿದ್ದಾರೆ.

ನೋಟ್​ ಬುಕ್​ ಕೊಡುವ ನೆಪದಲ್ಲಿ ಉಪನ್ಯಾಸಕ ನರೇಂದ್ರ 19 ವರ್ಷದ ವಿದ್ಯಾರ್ಥಿನಿ ಜೊತೆಗೆ ವಾಟ್ಸಾಪ್​ ಮೂಲಕ ಸಂಪರ್ಕ ಬೆಳೆಸಿದ್ದ. ಬಳಿಕ ಆ ಯುವತಿ ಬೆಂಗಳೂರಿಗೆ ಹೋಗಿ ನೆಲೆಸಿದ್ದಳು. ನಂತರ ಮಾರತಹಳ್ಳಿಯ ತನ್ನ ಸ್ನೇಹಿತ ಅನೂಪನ ಕೊಠಡಿಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದ. ಈ ವಿಷಯ ಗೊತ್ತಾಗಿದ್ದ ಉಪನ್ಯಾಸಕ ಸಂದೀಪ ನಿನ್ನ ಮತ್ತು ನರೇಂದ್ರನ ವೀಡಿಯೋ, ಫೋಟೋ ಇದೆ, ಅದನ್ನು ಬಹಿರಂಗಪಡಿಸ್ತೀನಿ ಎಂದು ಯುವತಿಯನ್ನು ಬ್ಲ್ಯಾಕ್​ಮೇಲ್​ ಮಾಡಿದ್ದ. ನೀನು ನನ್ನ ರೂಂಗೆ ಬಂದು ಹೋಗಿರುವ ವೀಡಿಯೋ ಸಿಸಿಟಿವಿಯಲ್ಲಿ ರೆಕಾರ್ಡ್​ ಆಗಿದೆ ಎಂದು ಬೆದರಿಸಿ ಅನೂಪ ಕೂಡಾ ಅತ್ಯಾಚಾರ ಎಸಗಿದ್ದ.

ಈ ಮೂವರ ನಿರಂತರ ಅತ್ಯಾಚಾರ, ಬೆದರಿಕೆಯಿಂದ ಬೇಸತ್ತಿದ್ದ ಯುವತಿ ತನ್ನ ಪೋಷಕರೊಂದಿಗೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಳು. ಆ ದೂರನ್ನು ವೈಟ್​ಫೀಲ್ಡ್​ ವಿಭಾಗದ ಡಿಸಿಪಿಗೆ ವರ್ಗಾವಣೆ ಮಾಡಲಾಗಿತ್ತು. ಆ ದೂರಿನ ಆಧಾರದಲ್ಲಿ ಮಾರತಹಳ್ಳಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments