#Exclusive NewsTop Newsದೇಶ/ವಿದೇಶಸುದ್ದಿ

ದೆಹಲಿಯ 40 ಶಾಲೆಗಳಿಗೆ ಇಮೇಲ್​ ಮೂಲಕ ಬಾಂಬ್​​ ಬೆದರಿಕೆ

ದೆಹಲಿ ಪೊಲೀಸರ ಪ್ರಕಾರ, 40 ಕ್ಕೂ ಹೆಚ್ಚು ಶಾಲೆಗಳಿಗೆ ಬೆದರಿಕೆ ಬಂದಿವೆ. ಇಮೇಲ್ ಮೂಲಕ ಬೆದರಿಕೆಗಳನ್ನು ಕಳುಹಿಸಲಾಗಿದೆ. ಇನ್ನು ಮುಂದೆ ಬೆದರಿಕೆ ಬರಬಾರದು ಎಂದಾದರೆ 30 ಸಾವಿರ ಡಾಲರ್ ಹಣ ನೀಡಬೇಕು ಇಲ್ಲದಿದ್ದರೆ ಶಾಲಾ ಕಟ್ಟಡಗಳ ಒಳಗೆ ಹಾಕಲಾದ ಸ್ಫೋಟಕಗಳನ್ನು ಸ್ಫೋಟಿಸುವುದಾಗಿ ಭೀತಿ ಹುಟ್ಟಿಸಲಾಗಿದೆ.

‘ನಾನು ಅನೇಕ ಕಡೆ ಶಾಲಾ ಕಟ್ಟಡದೊಳಗೆ ಅಜೈಡ್​, ಡಿಟೋನೆಟರ್​ನಲ್ಲಿರುವ ಸ್ಪೋಟಕ ಸಾಮಾಗ್ರಿಗಳನ್ನು ಅಳವಡಿಸಿದ್ದೇನೆ. ಕಟ್ಟಡದೊಳಗೆ ಸಣ್ಣ ಮತ್ತು ಕಣ್ಣಿಗೆ ಕಾಣದಂತೆ ಬಾಂಬ್​ಗಳನ್ನು ಅಡಗಿಸಿಡಲಾಗಿದೆ. ನಾನು ದೊಡ್ಡ ಅನಾಹುತವನ್ನು ಮಾಡುವುದಿಲ್ಲ. ಆದರೆ, ಬಾಂಬ್​ ಸ್ಫೋಟಿಸಿದಾಗ ಹಲವು ಜನರು ಗಾಯಗೊಳ್ಳುತ್ತಾರೆ. ನೀವು ಎಲ್ಲರೂ ಹಾನಿಯಿಂದ ನಷ್ಟಕ್ಕೆ ಒಳಗಾಗುತ್ತೀರ. 30,000 ಡಾಲರ್​ ಹಣ ನೀಡದಿದ್ದಲ್ಲಿ, ಬಾಂಬ್​ ಸ್ಫೋಟಿಸಲಾಗುವುದು’ ಎಂದು ಬೆದರಿಕೆ ಸಂದೇಶವನ್ನು ಇಮೇಲ್​ ಮೂಲಕ ಕಳುಹಿಸಲಾಗಿದೆ.

ಕಳುಹಿಸಲಾಗಿರುವ ಬೆದರಿಕೆ ಮೇಲ್‌ನಲ್ಲಿ, ನಾನು ಶಾಲೆಗಳ ಕಟ್ಟಡಗಳ ಒಳಗೆ ಅನೇಕ ಬಾಂಬ್‌ಗಳನ್ನು ಇಟ್ಟಿದ್ದೇನೆ. ಬಾಂಬ್‌ಗಳು ಚಿಕ್ಕದಾಗಿದ್ದು ಅಡಗಿಸಿ ಇಡಲಾಗಿದೆ. ಇದರಿಂದ ಕಟ್ಟಡಕ್ಕೆ ಹೆಚ್ಚಿನ ಹಾನಿಯಾಗುವುದಿಲ್ಲ, ಆದರೆ ಬಾಂಬ್‌ಗಳನ್ನು ಸ್ಫೋಟಿಸುವಾಗ ಅನೇಕ ಜನರು ಗಾಯಗೊಳ್ಳಬಹುದು. ನನಗೆ 30 ಸಾವಿರ ಡಾಲರ್ ಹಣ ಬರದಿದ್ದರೆ ಬಾಂಬ್ ಸ್ಫೋಟಿಸುತ್ತೇನೆ ಎಂದು ಬೆದರಿಕೆ ಹಾಕಲಾಗಿದೆ.

ಈ ಇಮೇಲ್ ನಿನ್ನೆ ಡಿಸೆಂಬರ್ 8 ರಂದು ರಾತ್ರಿ 11:38 ರ ಸುಮಾರಿಗೆ ಬಂದಿದೆ. ದೆಹಲಿ ಪೊಲೀಸರು, ಬಾಂಬ್ ನಿಷ್ಕ್ರಿಯ ದಳಗಳು ಮತ್ತು ಇತರ ತುರ್ತು ಸೇವೆಗಳ ಸಹಯೋಗದೊಂದಿಗೆ ತಕ್ಷಣದ ತನಿಖೆಗಳು ಮತ್ತು ಶೋಧ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗಿದೆ.

 

Comments (0)

Your email address will not be published. Required fields are marked *

Back to top button