Tuesday, June 24, 2025
25.9 C
Bengaluru
Google search engine
LIVE
ಮನೆರಾಜ್ಯಬೆಂಗಳೂರಿನಲ್ಲಿ ಇನ್ಮುಂದೆ ಕಸಕ್ಕೂ ಸೇವಾ ಶುಲ್ಕ ಕಡ್ಡಾಯ

ಬೆಂಗಳೂರಿನಲ್ಲಿ ಇನ್ಮುಂದೆ ಕಸಕ್ಕೂ ಸೇವಾ ಶುಲ್ಕ ಕಡ್ಡಾಯ

ಬಸ್ ದರ, ಮೆಟ್ರೋ ದರ, ಏರಿಕೆಯಿಂದ ಬೇಸತ್ತಿರುವ ಬೆಂಗಳೂರಿಗರಿಗೆ ಈಗ ಮತ್ತೊಂದು ಶಾಕ್.

ಮನೆಮನೆಯಿಂದ ಸಂಗ್ರಹಿಸುವ ತ್ಯಾಜ್ಯಕ್ಕೆ ಏಪ್ರಿಲ್ 1ರಿಂದ ಸೇವಾ ಶುಲ್ಕ ವಿಧಿಸಲು ಸರ್ಕಾರ ಮುಂದಾಗಿದೆ.

ಈ ಹಿಂದಿನಿಂದ ಬೆಂಗಳೂರಿನಲ್ಲಿ ತ್ಯಾಜ್ಯಕ್ಕೆ ಶುಲ್ಕ ವಿಧಿಸುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆದ್ರೀಗ ಬಿಬಿಎಂಪಿ ಈಗ ಕಾರ್ಯರೂಪಕ್ಕೆ ತರಲು ಮುಂದಾಗಿದೆ

ಈ ವಿಚಾರದ ಬಗ್ಗೆ ಮಾಧ್ಯಮಗಳಿಗೆ ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ಪ್ರತಿಕ್ರಿಯಿಸಿ, ಇದು ತೆರಿಗೆ ಅಲ್ಲ. ಇದು ಸರ್ವಿಸ್ ಚಾರ್ಜ್ ಆಗಿದ್ದು, ಪ್ರಾಪಾರ್ಟಿ ಟ್ಯಾಕ್ಸ್ ಜೊತೆಗೆ ವರ್ಷಕ್ಕೆ ಎರಡು ಬಾರಿ ಹಣ ಕಟ್ಟಬಹುದು ಎಂದು ತಿಳಿಸಿದರು.

ವಸತಿ ಕಟ್ಟಡಗಳಿಗೆ (ಮಾಸಿಕ)

  •  600 ಚದರಡಿವರೆಗೆ – 10 ರೂ.
  •  601-1000 ಚದರಡಿ – 50 ರೂ.
  •  1001-2000 ಚದರಡಿ – 100 ರೂ.
  •  2001-3000 ಚದರಡಿ – 150 ರೂ.
  •  3001-4000 ಚದರಡಿ – 200 ರೂ.
  •  4000 ಚದರಡಿ ಮೇಲ್ಪಟ್ಟು – 400 ರೂ.
  •  ನಿವೇಶನ ಪ್ರತಿ ಚದರಡಿಗೆ – 20 ಪೈಸೆ

ವಾಣಿಜ್ಯ ಕಟ್ಟಡಗಳಿಗೆ (ಮಾಸಿಕ)

  •  ನಿತ್ಯ 5 ಕೆಜಿವರೆಗೆ – 500 ರೂ.
  •  ನಿತ್ಯ 10 ಕೆಜಿವರೆಗೆ – 1400 ರೂ.
  • ನಿತ್ಯ 25 ಕೆಜಿವರೆಗೆ – 3500 ರೂ.
  • ನಿತ್ಯ 50 ಕೆಜಿವರೆಗೆ – 7000 ರೂ.
  •  ನಿತ್ಯ 100 ಕೆಜಿವರೆಗೆ – 14000 ರೂ.
+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments