ಕನ್ನಡದ ಹಿರಿಯ ನಟಿ ಮಾಲಾಶ್ರೀ ಅವರು ಕುಟುಂಬ ಸಮೇತರಾಗಿ ಆಂಧ್ರ ಪ್ರದೇಶದಲ್ಲಿರುವ ಶ್ರೀ ಶಿರಡಿ ಬಾಬಾಗೆ ಪೂಜೆ ಸಲ್ಲಿಸಿದ್ದಾರೆ.. ಶಿರಡಿ ಸಾಯಿಬಾಬಾಗೆ ಚಿನ್ನದ ಉಡುಗೊರೆ ನೀಡಿದ್ದಾರೆ.. ಮಗಳ ಸಿನಿಮಾ ಶುರು ಮುನ್ನ ಶಿರಡಿಗೆ ಭೇಟಿ ನೀಡಿದ್ದು, ನಮ್ಮ ಕುಟುಂಬಕ್ಕೆ ಬಾಬಾ ತುಂಬಾ ನೀಡಿದ್ದಾರೆ. ನಮ್ಮಿಂದ ಚಿಕ್ಕದೊಂದು ಉಡುಗೊರೆ ನೀಡಿದ್ದೇವೆ ಅಷ್ಟೇ ಅಂತ ಮಾಲಾಶ್ರೀ ಹೇಳಿದ್ದಾರೆ.
1989ರಲ್ಲಿ ತೆರೆಕಂಡ ನಂಜುಂಡಿ ಕಲ್ಯಾಣ ಸಿನಿಮಾ ಮೂಲಕ ಮಾಲಾಶ್ರೀ ಜನಪ್ರಿಯತೆ ಗಳಿಸಿದರು. ಅವರ ಮೊದಲ ಸಿನಿಮಾ ಇದಾಗಿದ್ದು, ಆ ಸಂದರ್ಭದಲ್ಲಿಯೇ ಮೊದಲ ಬಾರಿಗೆ ಶಿರಡಿಗೆ ಮಾಲಾಶ್ರೀ ಭೇಟಿ ನೀಡಿದ್ದರಂತೆ. ಶಿರಡಿಗೆ ಸಂಬಂಧಿಸಿದಂತೆ ಮಾಲಾಶ್ರೀ ಮತ್ತು ಅವರ ಪತಿ ದಿವಂಗತ ರಾಮು ಶಿರಡಿ ಸಾಯಿಬಾಬಾ ಭಕ್ತರು. ಇಂದಿಗೂ ಕೂಡ ಮಾಲಾಶ್ರೀ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ..


