Wednesday, April 30, 2025
29.2 C
Bengaluru
LIVE
ಮನೆ#Exclusive Newsಓಲಾ, ಊಬರ್, ರ್‍ಯಾಪಿಡೋಗೆ ಸೆಡ್ಡು: ನಗರ ಮೀಟರ್ ಆ್ಯಪ್ ಮೂಲಕ ಕಡಿಮೆ ಬೆಲೆಗೆ ಪ್ರಯಾಣ

ಓಲಾ, ಊಬರ್, ರ್‍ಯಾಪಿಡೋಗೆ ಸೆಡ್ಡು: ನಗರ ಮೀಟರ್ ಆ್ಯಪ್ ಮೂಲಕ ಕಡಿಮೆ ಬೆಲೆಗೆ ಪ್ರಯಾಣ

ಬೆಂಗಳೂರಿನಲ್ಲಿ ಓಲಾ ಮತ್ತು ಉಬರ್‌ನ ಆಟೋಗಳಲ್ಲಿ ಹೆಚ್ಚುವರಿ ದರ ವಿಧಿಸುವುದನ್ನು ತಡೆಯಲು “ನಗರ ಮೀಟರ್” ಎಂಬ ಹೊಸ ಆ್ಯಪ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಆ್ಯಪ್ ಆರ್‌ಟಿಒ ನಿಯಮಗಳ ಪ್ರಕಾರ ದರವನ್ನು ನಿಗದಿಪಡಿಸುತ್ತದೆ ಮತ್ತು ಸಾವಿರಾರು ಆಟೋ ಚಾಲಕರು ಈಗಾಗಲೇ ಇದನ್ನು ಬಳಸುತ್ತಿದ್ದಾರೆ. ಪ್ರಯಾಣಿಕರು ಮತ್ತು ಚಾಲಕರಿಬ್ಬರಿಗೂ ನ್ಯಾಯಯುತ ದರವನ್ನು ಒದಗಿಸುವುದು ಆ್ಯಪ್‌ನ ಉದ್ದೇಶ.

ಬೆಂಗಳೂರು, ಡಿಸೆಂಬರ್​ 02: ಕಿಮೀಗೆ ಇಂತಿಷ್ಟೇ ದರವನ್ನು ಪ್ರಯಾಣಿಕರಿಂದ ತೆಗೆದುಕೊಳ್ಳಬೇಕೆಂದು ಕರ್ನಾಟಕ ಸಾರಿಗೆ ಇಲಾಖೆ (Karnataka Transport) ಓಲಾ (Ola), ಊಬರ್ (Ubar)​ ಆಟೋಗಳಿಗೆ ದರ ನಿಗದಿ ಮಾಡಿದೆ. ಆದರೆ, ಈ ನಿಯಮವನ್ನು ಮೀರಿ ಓಲಾ, ಊಬರ್ ಕಂಪನಿಗಳು ಮಳೆ ಬಂದಾಗ ಒಂದು ದರ, ಪೀಕ್ ಅವರ್​ನಲ್ಲಿ ಒಂದು ದರ ಎಂದು ದುಪ್ಪಟ್ಟು ಹಣವನ್ನು ವಸೂಲಿ ಮಾಡಿ ಪ್ರಯಾಣಿಕರಿಗೆ ತೊಂದರೆ ನೀಡುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಇಬ್ಬರು ಯುವಕರು ನಗರ ಮೀಟರ್ ಆ್ಯಪ್ ಬಿಡುಗಡೆ ಮಾಡಿದ್ದಾರೆ.

ಅಗ್ರಿಗೇಟರ್ ಲೈಸೆನ್ಸ್ ಪಡೆದ ಕಂಪನಿಗಳು ಆರ್​ಟಿಒ ರೂಲ್ಸ್ ಪ್ರಕಾರ ಆಟೋದಲ್ಲಿ ಎರಡು ಕಿಮೀಗೆ ಮಿನಿಮಮ್ ಚಾರ್ಜ್ 30 ರುಪಾಯಿ ನಂತರದ ಕಿಮೀಗೆ 15 ರೂಪಾಯಿ ಪಡೆದುಕೊಳ್ಳಬೇಕು. ಆದರೆ, ಈ ಅಗ್ರಿಗೇಟರ್ ಕಂಪನಿಗಳು ಮಳೆ ಬರುತ್ತಿರುವ ಸಮಯದಲ್ಲಿ ಒಂದು ದರ, ಪೀಕ್ ಅವರ್​ನಲ್ಲಿ ಒಂದು ದರ ಎಂದು ಒನ್ ಟು ಡಬಲ್ ಹಣವನ್ನು ಪ್ರಯಾಣಿಕರಿಂದ ವಸೂಲಿ ಮಾಡಲು ಮುಂದಾಗಿವೆ. ಇದಕ್ಕೆ ಬ್ರೇಕ್ ಹಾಕಲು ನಿರಂಜನ್ ಮತ್ತು ಶಿವು ಎಂಬ ಇಬ್ಬರು ಯುವಕರು ಸೇರಿ ಮೀಟರ್ ಆ್ಯಪ್ ಸೃಷ್ಟಿಸಿದ್ದಾರೆ. ಆಟೋ ಮತ್ತು ಕ್ಯಾಬ್​ ಚಾಲಕರು ಮೀಟರ್ ಹಾಕಿಕೊಂಡು ಡ್ಯೂಟಿ ಮಾಡಬಹದು.

ಇದರಿಂದ ಅಗ್ರಿಗೇಟರ್ ಕಂಪನಿಗಳ ಕಳ್ಳಾಟಕ್ಕೆ ಇನ್ಮುಂದೆ ಬ್ರೇಕ್ ಬೀಳಬಹುದು. ಆರ್​ಟಿಒ ನಿಯಮದ ಪ್ರಕಾರವೇ ನಗರ ಮೀಟರ್ ಆ್ಯಪ್ ಪ್ರಯಾಣಿಕರಿಂದ ದರವನ್ನು ಪಡೆದುಕೊಳ್ಳುತ್ತದೆ. ನಗರದ ಆರೂವರೆ ಸಾವಿರ ಆಟೋದವರು ಈ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments