ಎಸ್ಬಿಐ ಬ್ಯಾಂಕ್ ಒಂದರ ಮ್ಯಾನೇಜರ್ ಕನ್ನಡದಲ್ಲಿ ಮಾತಾಡಲ್ಲ ಅಂತ ಗಾಂಚಲಿ ತೋರಿದ್ದು, ಈ ವಿಡಿಯೋ ವೈರಲ್ ಆದ ಬಳಿಕ ಸರ್ಕಾರ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ..
ಆನೇಕಲ್ ಹೊರವಲಯದ ಚಂದಾಪುರದ ಎಸ್ಬಿಐ ಬ್ಯಾಂಕ್ನ ಮಹಿಳಾ ಮ್ಯಾನೇಜರ್ ನಾನು ಯಾವತ್ತೂ ಕನ್ನಡ ಮಾತಾಡಲ್ಲ, ಏನಿವಾಗ ಅಂತ ದರ್ಪ ತೋರಿದ್ದಾರೆ. ಈ ಮೂಲಕ ಕನ್ನಡಿಗರನ್ನು ಕೆಣಕುವ ಕೆಲಸ ಮಾಡಿದ್ದಾರೆ..
ಚಂದಾಪುರದ ಎಸ್ಬಿಐ ಬ್ಯಾಂಕ್ಗೆ ಗ್ರಾಹಕರೊಬ್ಬರು ಹೋಗಿದ್ದರು. ಆಗ ಬ್ಯಾಂಕ್ ಮ್ಯಾನೇಜರ್ ಪ್ರಿಯಾಂಕಾ, ಗ್ರಾಹಕರ ಜೊತೆ ಹಿಂದಿಯಲ್ಲಿ ಮಾತನಾಡಿದ್ದಾರೆ. ಇದಕ್ಕೆ, ಗ್ರಾಹಕ, ನನಗೆ ಹಿಂದಿ ಬರಲ್ಲ ಕನ್ನಡದಲ್ಲಿ ಮಾತನಾಡಿ ಎಂದಿದ್ದಾರೆ. ಆಗ, ಬ್ಯಾಂಕ್ ಮ್ಯಾನೇಜರ್ ಪ್ರಿಯಾಂಕಾ ನೀವೇ ಹಿಂದಿ ಕಲಿಯಬೇಕು, ಹಿಂದಿಯಲ್ಲಿ ಕಲಿತು ಮಾತಾಡಿ ಅಂದಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಮ್ಯಾನೇಜರ್ ಪ್ರಿಯಾಂಕಾ, ಎಸ್ಬಿಐ ಆಗಲಿ, ಆರ್ಬಿಐ ಆಗಲಿ, ಎಲ್ಲೂ ಕನ್ನಡದಲ್ಲಿ ಮಾತನಾಡಿ ಅಂತ ನಮಗೆ ಹೇಳಿಲ್ಲ, ನಾನು ಹಿಂದಿಯಲ್ಲೇ ಮಾತಾಡೋದು, ನೀನು ಬೇಕಿದ್ರೆ ಹಿಂದಿಯಲ್ಲೇ ಮಾತಾಡು ಅಂತ ದರ್ಪ ತೋರಿದ್ದಾರೆ. ಇದು ಭಾರತ.. ಬರೀ ನಿಮ್ಮ ಕರ್ನಾಟಕ ಮಾತ್ರ ಅಲ್ಲ. ನಾನು ಯಾವತ್ತೂ ಕನ್ನಡ ಮಾತಾಡಲ್ಲ ಏನ್ ಮಾಡ್ಕೋತೀಯ ಅಂತೆಲ್ಲಾ ಹೇಳಿದ್ದು ಕನ್ನಡಿಗರನ್ನು ಕೆರಳಿಸಿದೆ..
ಬ್ಯಾಂಕ್ ಮ್ಯಾನೇಜರ್ ದರ್ಪ ತೋರಿರುವ ದೃಶ್ಯವನ್ನು ಗ್ರಾಹಕ ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕನ್ನಡಪರ ಸಂಘಟನೆ ಕಾರ್ಯಕರ್ತರು ಚಂದಾಪುರ SBI ಬ್ಯಾಂಕ್ ಶಾಖೆಗೆ ತೆರಳಿ ಪ್ರತಿಭಟನೆ ನಡೆಸಿದರು. ಕನ್ನಡಿಗರ ಪ್ರತಿಭಟನೆಯ ಭೀತಿಯಿಂದ ಬ್ಯಾಂಕ್ ಮ್ಯಾನೇಜರ್ ಕ್ಷಮೆ ಕೇಳಿದ್ದಾರೆ.
https://twitter.com/i/status/1925074672208777238
ಕನ್ನಡಿಗರ ಆಕ್ರೋಶ ಹೆಚ್ಚಾದ ಬೆನ್ನಲ್ಲೇ ಬ್ಯಾಂಕ್ನ ಮಹಿಳಾ ಮ್ಯಾನೇಜರ್ರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಕರ್ನಾಟಕದ ಬಗ್ಗೆ ಹಗುರವಾಗಿ ಮಾತಾಡಿದ ಹಿಂದಿ ಲೇಡಿ ಪ್ರಿಯಾಂಕಾಳನ್ನ ಸರ್ಕಾರವೇ ಹೊರರಾಜ್ಯಕ್ಕೆ ಎತ್ತಂಗಡಿ ಮಾಡಿದೆ.


