ರಾಜಕೀಯರಾಜ್ಯ

ಸಂಪುಟ ಸರ್ಜರಿಯಲ್ಲಿ ಸತೀಶ್ ಜಾರಕಿಹೊಳಿ ಮೇಲುಗೈ

ಸಚಿವ ಸಂಪುಟ ಸರ್ಜರಿಯಲ್ಲಿ ಈ ಬಾರಿ ಎಸ್​​ಟಿ ಸಮುದಾಯಕ್ಕೆ ಬಂಪರ್ ಗಿಫ್ಟ್ ಸಿಗುವ ಸಾಧ್ಯತೆ ಇದೆ. ಎಸ್​ಟಿ ಸಮುದಾಯದ ಮತ್ತಿಬ್ಬರಿಗೆ ಸಿದ್ದು ಸರ್ಕಾರದಲ್ಲಿ ಮಣೆ ಹಾಕುವ ಸಾಧ್ಯತೆ ಇದೆ..

ಈ ಹಿಂದೆ ವಾಲ್ಮೀಕಿ ಹಗರಣದಿಂದ ಮಂತ್ರಿಗಿರಿ ಕಳೆದುಕೊಂಡಿದ್ದ ನಾಗೇಂದ್ರಗೆ ಮತ್ತೆ ಲಕ್ ಕೂಡಿಬಂದಿದೆ. ನಾಗೇಂದ್ರಗೆ ಮಂತ್ರಿಗಿರಿ ನೀಡಿ ಸಹಕಾರ ಖಾತೆ ನೀಡುವ ಬಗ್ಗೆ ಚರ್ಚೆ ನಡೆದಿದೆ. ಎಸ್​​ಟಿ ಸಮುದಾಯದವರೇ ಆದ ಕೆ.ಎನ್.ರಾಜಣ್ಣ ಅವರನ್ನ ಕೈಬಿಟ್ಟು ನಾಗೇಂದ್ರರನ್ನ ಮತ್ತೆ ಕುರ್ಚಿಗೆ ಕೂರಿಸುವ ಪ್ರಯತ್ನ ನಡೆದಿದೆ..

ಅದೇ ರೀತಿ ಮೊಳಕಾಲ್ಮೂರಿನಲ್ಲಿ ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಸ್ಪರ್ಧಿಸಿ  ಗೆದ್ದಿದ್ದ ಎನ್​.ವೈ.ಗೋಪಾಲಕೃಷ್ಣಗೂ ಮಂತ್ರಿ ಭಾಗ್ಯ ಸಿಗುವ ಸಾಧ್ಯತೆಗಳಿವೆ. ಎಸ್​​ಟಿ ಸಮುದಾಯದ ಶಾಸಕರಾಗಿರುವ ಎನ್.ವೈ.ಗೋಪಾಲಕೃಷ್ಣಗೆ ಅದೃಷ್ಟ ಕೂಡಿಬರುವ ಸಾಧ್ಯತೆಯಿದೆ..

ಸಚಿವ ಸಂಪುಟ ಪುನಾರಚನೆಯಲ್ಲಿ ಸತೀಶ್ ಜಾರಕಿಹೊಳಿ ಮೇಲುಗೈ

ಎಸ್​​ಟಿ ಸಮುದಾಯದ ಹೆಚ್ಚು ಶಾಸಕರಿಗೆ ಈ ಬಾರಿ ಮಂತ್ರಿಗಿರಿ ಚಾನ್ಸ್ ಸಿಗುವ ಸಾಧ್ಯತೆ ಇದೆ. ಎಸ್​​ಟಿ ಸಮುದಾಯಕ್ಕೆ ಹೆಚ್ಚಿನ ಸ್ಥಾನ ಸಿಗುವ ಸಾಧ್ಯತೆ ಇದೆ. ತನ್ನ ಸಮುದಾಯಕ್ಕೆ ಹೆಚ್ಚು ಮಂತ್ರಿಗಿರಿ ದಕ್ಕಿಸಿಕೊಳ್ಳೋಕೆ ಸಚಿವ ಸತೀಶ್ ಜಾರಕಿಹೊಳಿ ಅವರೇ ಸಾಕಷ್ಟು ಹರಸಾಹಸ ಪಡುತ್ತಿದ್ದಾರೆ ಎನ್ನಲಾಗಿದೆ..

Comments (0)

Your email address will not be published. Required fields are marked *

Back to top button