ಬೆಳಗಾವಿ : ಇದೇ 21 ರಂದು ಬೆಳಗಾವಿಯಲ್ಲಿ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್’ ಬೃಹತ್ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ಬೆಳಗಾವಿಯಲ್ಲಿಂದು ಇದರ ಪೂರ್ವ ಸಿದ್ಧತೆ ಸಭೆ ಕರೆಯಲಾಗಿದೆ.ಹೀಗಾಗಿ ರಾತ್ರಿಯೇ ಬೆಂಗಳೂರಿನಿಂದ ವಿಮಾನ ಹತ್ತಿದ್ದ ಸತೀಶ್, ಡಿಕೆ ಸುರೇಶ್ ಜೊತೆಯಾಗಿಯೇ ಬೆಳಗಾವಿ ಬಂದಿಳಿದರು. ಇಬ್ಬರು ಮಾತನಾಡುತ್ತಾ ನಗುತ್ತಾ ಹೊರಬಂದಿದ್ದು ಗಮನ ಸೆಳೆಯಿತು.
ಬೆಂಗಳೂರಿನಲ್ಲಿದ್ದ ಸತೀಶ್‌ಗೆ ಗುರುವಾರವೇ ಬೆಳಗಾವಿಗೆ ಬರುವಂತೆ ಸುರ್ಜೇವಾಲ ಕಚೇರಿಯಿಂದ ಸೂಚನೆ ಹೋಗಿತ್ತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಇಂದು ಬೆಳಗಾವಿಗೆ ಆಗಮಿಸುತ್ತಿದ್ದಾರೆ.


