ನವದೆಹಲಿ; ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷರಾಗಿ ಸಂಜಯ್ ಸಿಂಗ್ ಆಯ್ಕೆ ವಿರೋಧಿಸಿ ಈಗಾಗಲೇ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಕ್ರೀಡೆಗೆ ವಿದಾಯ ಘೋಷಣೆ ಮಾಡಿದ್ದರು ಹಾಗೂ ಭಜರಂಗ್ ಪುನಿಯಾ ಅವರ ಪದ್ಮಶ್ರೀಯನ್ನು ಹಿಂದಿರುಗಿಸಿದ್ದಾರೆ.
ಇದೀಗ ವಿನೇಶ್ ಫೋಗಟ್ ಅವರು ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನು ಹಿಂದಿರುಗಿಸುವ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆವ ಬೇಸರ ವ್ಯಕ್ತ ಪಡಿಸಿರುವ ವಿನೇಶ್ ಫೋಗಟ್, ನನ್ನನ್ನು ಈ ಪರಿಸ್ಥಿಗೆ ತಂದಿರುವ ಪ್ರಭಾವಿ ವ್ಯಕ್ತಿಗಳಿಗೆ ರಾಜಕಾರಣಿಗಳು ಧನ್ಯವಾದಗಳು ಎಂದು ಆಡಳಿತ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಕೆಲ ತಿಂಗಳುಗಳಿಂದ ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ನಡುವೆ ವಿವಾದಗಳು ನಡೆಯುತ್ತಲೇ ಇತ್ತು. ಅದರ ಬೆನ್ನಲೇ ಅಧ್ಯಕ್ಷರಾಗಿ ಸಂಜಯ್ ಸಿಂಗ್ ರನ್ನು ಆಯ್ಕೆ ಮಾಡಿರುವುದು ಇನ್ನಷ್ಟು ಕುಸ್ತಿ ಪಟುಗಳನ್ನು ಇನ್ನಷ್ಟು ಕೆರಳಿಸಿದೆ.
ಕುಸ್ತಿಗಳ ಅನ್ಯಾಯ ಖಂಡಿಸಿ, ಸಾಮಾಜಿಕ ತಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕುಸ್ತಿಪಟುಗಳನ್ನು ದೇಶದ ಆಸ್ತಿ ಎನ್ನುತ್ತಾರೆ. ಅದರಲ್ಲಿ ಈ ರೀತಿಯಾಗಿ ಕ್ರೀಡಾಪಟುಗಳು ಪ್ರಶಸ್ತಿ ಹಿಂತಿರುಗಿಸುತ್ತಿರುವುದು ನಿಜಕ್ಕೂ ಶೋಷನೀಯ.