ಕ್ರೈಂ ಸ್ಟೋರಿ

ಸ್ಯಾಂಡಲ್​ವುಡ್​ ನಿರ್ಮಾಪಕ ಎಂ.ಎನ್​.ಕುಮಾರ್​ ಅರೆಸ್ಟ್​

ಬೆಂಗಳೂರು: ಚೆಕ್‌ಬೌನ್ಸ್ ಕೇಸ್​​ನಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ ಎಂ.ಎನ್ ಕುಮಾರ್ ಅವರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ

ಕನ್ನಡದ ಮಾಣಿಕ್ಯ, ಅಂಜನಿಪುತ್ರ, ಕಿರಿಕ್ ಶಂಕರ, ಮುಕುಂದ ಮುರಾರಿ, ಶಂಕರಗುರು, ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಿಸಿರುವ ಎಂ.ಎನ್ ಕುಮಾರ್ ಅವರನ್ನು ಕೋರ್ಟ್ ಸೂಚನೆ ಮೇರೆಗೆ ಬುಧವಾರ ತಡರಾತ್ರಿ 2ಗಂಟೆ ಸುಮಾರಿಗೆ ಹಾಸನದಲ್ಲಿ  ಬಂಧಿಸಿದ್ದಾರೆ.

1.25 ಕೋಟಿ ರೂ. ವಂಚಿಸಿರುವ ವಿಚಾರವಾಗಿ ಕೇಸ್ ದಾಖಲಾಗಿದ್ದು, ಸದ್ಯ ಎಂ. ಎನ್ ಕುಮಾರ್ ಅವರನ್ನು ಮೆಡಿಕಲ್ ಟೆಸ್ಟ್‌ಗೆ ಕರೆದುಕೊಂಡು ಹೋಗಲಾಗಿದೆ ಎಂದು ಮೂಲಗಳು ತಿಳಿಸಿವೆ.

Comments (0)

Your email address will not be published. Required fields are marked *

Back to top button