Top Newsರಾಜ್ಯ

ಕೊಡಗಿನ ಸಂಪತ್ ಶವವಾಗಿ ಪತ್ತೆ

ಕೊಡಗಿನ ಸಂಪತ್ ಆಲಿಯಾಸ್ ಶಂಭು ನಿಗೂಢವಾಗಿ ಸಾವನ್ನಪ್ಪಿದ್ದಾನೆ.

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಯಸಳೂರು ಹೋಬಳಿ ಮಾಗೇರಿಯ ಸಮೀಪದ ಕಲ್ಲಹಳ್ಳಿ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಸಂಪತ್ ಶವ ಪತ್ತೆಯಾಗಿದೆ.

ಕಲ್ಲಹಳ್ಳಿಯ ತೋಟದ ಕೆಲಸಕ್ಕೆ ಜನರನ್ನು ಕರೆತಂದ ಕಾರಿನ ಚಾಲಕರೊಬ್ಬರು, ಈ ಅಪರಿಚಿತ ಕಾರನ್ನು ನೋಡಿ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದ. ವಿಷಯ ತಿಳಿದ ಯಸಳೂರು ಪೋಲಿಸರು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದಾಗ ಸಂಪತ್ ಆಲಿಯಾಸ್ ಶಂಭು ಶವ ಪತ್ತೆಯಾಗಿದೆ.

ಕಾರಿನ ಮೇಲ್ಭಾಗ ಮತ್ತು ಒಳಭಾಗದಲ್ಲಿ ರಕ್ತದ ಕಲೆ ಕಂಡುಬಂದಿದ್ದು, ಮೇಲ್ನೋಟಕ್ಕೆ ಇದನ್ನು ಕೊಲೆ ಎಂದು ಪೊಲೀಸರು ಪರಿಗಣಿಸಿದ್ದಾರೆ. ಸ್ಥಳದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಮತ್ತು ಯಸಲೂರು ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಹಾಗೂ ಸಿಬ್ಬಂದಿ ಬೀಡುಬಿಟ್ಟಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಮಹಜರ್ ಮಾಡಿದ್ದಾರೆ

ಪೊಲೀಸರ ಮಾಹಿತಿ ಪ್ರಕಾರ ಸಂಪತ್ ಆಲಿಯಾಸ್ ಶಂಭು ಶವ ಇದ್ದ ಈ ಕಾರು ಕೊಡಗಿನ ಕುಶಾಲನಗರದ ಉದ್ಯಮಿ ಜಾನ್ ಗೆ ಸೇರಿದ್ದಾಗಿದೆ. ಜಾನ್ ಅವರ ಕಾರನ್ನು ಕುಶಾಲನಗರದಲ್ಲಿ ವಾಸವಿರುವ ಸೋಮವಾರಪೇಟೆ ತಾಲ್ಲೂಕು ಕಕ್ಕೆ ಹೊಳೆ ಜಂಕ್ಷನ್ ನಿವಾಸಿ ಸಂಪತ್ ಆಲಿಯಾಸ್ ಶಂಭು ಶನಿವಾರ ತೆಗೆದುಕೊಂಡು ಹೋಗಿದ್ರು.

ಸಂಪತ್ ಮೊಬೈಲ್ ಸ್ವಿಚ್ ಆಫ್ ಅಗಿದೆ. ಮೊಬೈಲ್​ ಗೆ ಬಂದಿರುವ ಬಂದಿರುವ ಕೊನೆಯ ಕರೆಗಳ ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ

ಈ ಹಿಂದೆ ನಡೆದ ಹಲವು ಗಲಾಟೆ ಘರ್ಷಣೆಯ ಪ್ರಕರಣಗಳಲ್ಲಿ ಪೊಲೀಸರಿಗೆ ಸಂಪತ್ ಬೇಕಾಗಿದ್ದ. ಸಂಪತ್ ವೈರಿಗಳನ್ನು, ಎದುರಾಳಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ

Comments (0)

Your email address will not be published. Required fields are marked *

Back to top button