ನಟಿ ಸಮಂತಾ ರುತ್ ಪ್ರಭು ಅವರು ಸಿನಿಮಾ ರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಅವರು ಏನಿದ್ದರೂ ಈಗ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವುದರಲ್ಲಿ ಬ್ಯುಸಿ ಆಗಿದ್ದಾರೆ. ಇದಕ್ಕೆ ಕಾರಣ ಆಗಿರೋದು ಅವರ ಕಾಯಿಲೆ. ಸಮಂತಾ ಅವರಿಗೆ ಅಪರೂಪದ ಮೈಯೋಸಿಟಿಸ್ ಕಾಯಿಲೆ ಕಾಣಿಸಿಕೊಂಡಿತು. ಇದಾದ ಬಳಿಕ ಅವರು ಸಿನಿಮಾಗಳಿಂದ ದೂರ ಆದರು. ಈಗ ಸಮಂತಾ ಅಭಿಮಾನಿಗಳಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಇದರಿಂದ ಅವರು ಅನೇಕರ ಜೀವವನ್ನು ತೊಂದರೆಗೆ ಸಿಲುಕಿಸುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.
ಇತ್ತೀಚೆಗೆ ಸಮಂತಾ ಅವರು ವೈರಲ್ ಇನ್ಫೆಕ್ಷನ್ ತಡೆಯೋದು ಹೇಗೆ ಎಂಬುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಇದರಲ್ಲಿ ‘ಹೈಡ್ರೋಜ್ ಪೆರಾಕ್ಸೈಡ್ ಹಾಗೂ ಭಟ್ಟಿ ಇಳಿಸಿದ ನೀರನ್ನು ಮಿಕ್ಸ್ ಮಾಡಿ ನೆಬ್ಯುಲೈಸರ್ ಮೂಲಕ ಅದನ್ನು ತೆಗೆದುಕೊಳ್ಳುವಂತೆ ಹೇಳಿದ್ದರು. ಇದನ್ನು ವೈದ್ಯರು ಟೀಕಿಸಿದ್ದಾರೆ. ಡಾಕ್ಟರ್ ಸೈರಿಕ್ ಅಬ್ಬಿ ಫಿಲಿಪ್ಸ್ ಅವರು ಸಮಂತಾ ಅವರ ಸಲಹೆಯನ್ನು ಟೀಕಿಸಿದ್ದಾರೆ. ‘ವಿಜ್ಞಾನ ಹಾಗೂ ವೈದ್ಯ ಲೋಕದಲ್ಲಿ ಸ್ವಲ್ಪವೂ ಜ್ಞಾನವಿಲ್ಲದ ವ್ಯಕ್ತಿ’ ಎಂದು ಕರೆದಿದ್ದಾರೆ.
https://twitter.com/theliverdr/status/1808804909783159003?ref_src=twsrc%5Etfw%7Ctwcamp%5Etweetembed%7Ctwterm%5E1808804909783159003%7Ctwgr%5E6ad8eb50efe70553be2c2431f4427fff64dd5201%7Ctwcon%5Es1_&ref_url=https%3A%2F%2Ftv9kannada.com%2Fentertainment%2Fsamantha-ruth-prabhu-is-a-health-and-science-illiterate-says-doctor-entertainment-news-in-kannada-rmd-861163.html
‘ಪ್ರಭಾವಿ ನಟಿ ಸಮಂತಾ ಅವರು ವಿಜ್ಞಾನ ಹಾಗೂ ಆರೋಗ್ಯದ ಬಗ್ಗೆ ಯಾವುದೇ ಜ್ಞಾನ ಹೊಂದಿಲ್ಲ. ಆದಾಗ್ಯೂ ತಮ್ಮ ಲಕ್ಷಾಂತರ ಅಭಿಮಾನಿಗಳಿಗೆ ಹೈಡ್ರೋಜ್ ಪೆರಾಕ್ಸೈಡ್ನ ತೆಗೆದುಕೊಂಡು ವೈರಲ್ ಇನ್ಫೆಕ್ಷನ್ನ ಕಡಿಮೆ ಮಾಡಿ ಎನ್ನುತ್ತಿದ್ದಾರೆ. ಅಮೇರಿಕದ ಸೈಂಟಿಫಿಕ್ ಸೊಸೈಟಿ ಅಸ್ತಮಾ ಮತ್ತು ಅಲರ್ಜಿ ಫೌಂಡೇಶನ್ ಅವರು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ನೆಬ್ಯುಲೈಸ್ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಇದು ಆರೋಗ್ಯಕ್ಕೆ ಅಪಾಯಕಾರಿ ಎಂದು ಹೇಳಿದ್ದಾರೆ’ ಎಂಬುದಾಗಿ ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.
‘ಪ್ರಗತಿಶೀಲ ಸಮಾಜದಲ್ಲಿ ಈ ಮಹಿಳೆಯ ಮೇಲೆ ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುವ ಆರೋಪವನ್ನು ವಿಧಿಸಿ ಜೈಲಿಗೆ ಹಾಕಬಹುದು. ಅವರಿಗೆ ತಮ್ಮ ತಂಡದಲ್ಲಿ ಉತ್ತಮ ಸಲಹೆಗಾರರ ಅಗತ್ಯವಿದೆ. ಈ ರೀತಿ ಆರೋಗ್ಯದ ಬಗ್ಗೆ ಬಿಟ್ಟಿ ಸಲಹೆ ನೀಡುವ ಇಂಥವರ ವಿರುದ್ಧ ಭಾರತದ ಆರೋಗ್ಯ ಸಚಿವಾಲಯ ಅಥವಾ ಯಾವುದೇ ಆರೋಗ್ಯ ಸಂಸ್ಥೆಯು ಕ್ರಮ ಕೈಗೊಳ್ಳುತ್ತದೆಯೇ ಅಥವಾ ಸುಮ್ಮನೆ ಇದ್ದು ಜನರನ್ನು ಸಾಯಲು ಬಿಡುತ್ತಾರೆಯೇ’ ಎಂದು ಪ್ರಶ್ನೆ ಮಾಡಿದ್ದಾರೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com