Saturday, December 6, 2025
25.2 C
Bengaluru
Google search engine
LIVE
ಮನೆ#Exclusive Newsನಿರ್ದೇಶಕ ರಾಜ್​​​ ನಿಡಿಮೋರು ಜೋತೆ ಸಮಂತಾ ರುತ್​​​​ ಪ್ರಭು ಮದುವೆ

ನಿರ್ದೇಶಕ ರಾಜ್​​​ ನಿಡಿಮೋರು ಜೋತೆ ಸಮಂತಾ ರುತ್​​​​ ಪ್ರಭು ಮದುವೆ

ನಟಿ ಸಮಂತಾ ರುತ್​​​​ ಪ್ರಭು ಮತ್ತು ನಿರ್ದೇಶಕ ರಾಜ್​​​ ನಿಡಿಮೋರು ಅವರ ಮದುವೆ ಇಂದು ಸರಳವಾಗಿ ನಡೆದಿದೆ.. ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಈಶಾ ಫೌಂಡೇಶನ್​​​​​​ನ ಲಿಂಗ ಭೈರವಿ ದೇವಸ್ಥಾನದಲ್ಲಿ ರಾಜ್​​, ಸಮಂತಾ ವಿವಾಹ ಆಗಿದ್ದಾರೆ..

instagram 20251201T082134

ಹಲವು ದಿನಗಳಿಂದಿ ಇವರಿಬ್ಬರು ಡೇಟಿಂಗ್​​​​​​​​​​​​​​ನಲ್ಲಿ ಇರುವ ವಿಷಯ ಸುದ್ದಿಯಾಗುತ್ತಲೇ ಇತ್ತು ಇಂದು ಅಧಿಕೃತವಾಗಿ ರಾಜ್​​​​ ನಿಡಿಮೋರು, ಸಮಂತಾ ಜೋಡಿ ಒಂದಾಗಿದೆ.. ಈ ಜೋಡಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶುಭಕೋರಿದ್ದಾರೆ..

instagram 20251201T082136

ಸಮಂತಾ ಅವರು ವಿವಾಹದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಕ್ಯಾಪ್ಶನ್​ನಲ್ಲಿ ವಿವಾಹದ ಡೇಟ್ ಹಾಕಿದ್ದಾರೆ. ಪೂಜಾ ವಿಧಿ-ವಿಧಾನದ ಫೋಟೋ ಜೊತೆಗೆ ರಾಜ್ ಜೊತೆ ಇರುವ ಫೋಟೋಗಳನ್ನು ಸಮಂತಾ ಹಂಚಿಕೊಂಡಿದ್ದಾರೆ.

instagram 20251201T082132

ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೋರು ಇಬ್ಬರಿಗೂ ಇದು ಎರಡನೇ ಮದುವೆ. ಸಮಂತಾ ಈ ಹಿಂದೆ ನಟ ನಾಗ ಚೈತನ್ಯ ಅವರನ್ನು ವಿವಾಹವಾಗಿದ್ದರು ಮತ್ತು 2021 ರಲ್ಲಿ ವಿಚ್ಛೇದನ ಪಡೆದರು. ರಾಜ್ ನಿಡಿಮೋರು 2015 ರಲ್ಲಿ ಶ್ಯಾಮಲಿ ದೇ ಅವರನ್ನು ವಿವಾಹವಾಗಿದ್ದರು.

ದಿ ಫ್ಯಾಮಿಲಿ ಮ್ಯಾನ್ 2 ಸರಣಿಯಲ್ಲಿ ಸಮಂತಾ ನಟಿಸಿದ್ದರು. ಈ ಸರಣಿಗೆ ರಾಜ್ ಅವರ ನಿರ್ದೇಶನ ಇತ್ತು.ಸಿಟಾಡೆಲ್ ಸರಣಿಯಲ್ಲೂ ಇವರು ಒಟ್ಟಾಗಿ ಕೆಲಸ ಮಾಡಿದ್ದರು. ಇಬ್ಬರ ನಡುವೆ ಪರಿಚಯ ಆಗುವಾಗ ರಾಜ್​ಗೆ ಆಗಲೇ ವಿವಾಹ ಆಗಿತ್ತು. ಅವರು ಶ್ಯಾಮಲಿ ಜೊತೆ ದಾಂಪತ್ಯ ಜೀವನ ನಡೆಸುತ್ತಿದ್ದರು. ಈಗ ಸಮಂತಾ ಅವರು ರಾಜ್ ಜೊತೆಯೇ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments