ದೇಶದ ಅತ್ಯಂತ ಕಿರಿಯ ಪೈಲಟ್ ಎಂಬ ಹೆಗ್ಗಳಿಕೆಗೆ ವಿಜಯಪುರ ಜಿಲ್ಲೆಯ ಯುವತಿಯೊಬ್ಬರು ಪಾತ್ರರಾಗಿದ್ದಾರೆ..18 ವರ್ಷದ ಸಮೈರಾ ಹುಲ್ಲೂರು ಕಮರ್ಶಿಯಲ್ ಪೈಲಟ್ ಲೈಸೆನ್ಸ್ ಪಡೆಯುವ ಮೂಲಕ ಅಭೂತಪೂರ್ವ ಸಾಧನೆಗೈದಿದ್ದಾರೆ. ಇವರ ಸಾಧನೆಯಿಂದ ಕುಟುಂಬದಲ್ಲಿ ಸಂತೋಷ ಮನೆ ಮಾಡಿದೆ. ಇತಿಹಾಸ ಸೃಷ್ಟಿಸಿರುವ ಸಮೈರಾ ವಿಜಯಪುರ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಕೀರ್ತಿಯ ಪತಾಕೆಯನ್ನು ಹಾರಿಸಿದ್ದಾರೆ.
ವಿಜಯಪುರದಲ್ಲಿ ಶಿಕ್ಷಣ ಮುಗಿಸಿದ ಬಳಿಕ 6 ತಿಂಗಳ ಕಾಲ ದೆಹಲಿಯಲ್ಲಿ ಪೈಲಟ್ ಟ್ರೇನಿಂಗ್ ಮುಗಿಸಿದ್ದರು.. 18ನೇ ವಯಸ್ಸಿಗೆ ಪೈಲಟ್ ಆಗಿ ಹೊರಹೊಮ್ಮಿದ್ದಾರೆ. 25ನೇ ವಯಸ್ಸಿಗೆ ಪೈಲಟ್ ಆಗಿರುವ ಕ್ಯಾಪ್ಟನ್ ತಪೇಶ್ ಕುಮಾರ್ ಇವರ ಈ ಸಾಧನೆಗೆ ಪ್ರೇರಣೆಯಾಗಿದ್ದಾರೆ. ಸಮೈರಾಳ ಸಾಧನೆಗೆ ಜಿಲ್ಲೆ, ರಾಜ್ಯ ಹಾಗೂ ದೇಶದ ಹಲವೆಡೆಯಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.


