
ಕನ್ನಡದಲ್ಲಿ ಮುಂದಿನ ಸೀಸನ್‌ನಿಂದ ಬಿಗ್ ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ಕಿಚ್ಚ ಸುದೀಪ್ ಘೋಷಣೆಯ ಬೆನ್ನಲ್ಲಿ ಹಿಂದಿ ಬಿಗ್ ಬಾಸ್ ಶೋ ನಿರೂಪಣೆಯಿಂದಲೂ ಸಲ್ಮಾನ್ ಖಾನ್ ಹೊರಗುಳಿಯಲಿದ್ದಾರೆ.
ನವದೆಹಲಿ (ಅ.17): ಕನ್ನಡದ ಬಿಗ್ ಬಾಸ್ ಸೀಸನ್ 11ರ ನಿರೂಪಣೆ ಮಾಡುತ್ತಿರುವ ಕಿಚ್ಚ ಸುದೀಪ್ ಅವರು ಕೇವಲ 2 ವಾರ ವೀಕೆಂಡ್ ಪಂಚಾಯಿತಿ ನಡೆಸಿಕೊಟ್ಟಿದ್ದಾರೆ. ಇದರ ಬೆನ್ನಲ್ಲಿಯೇ ತಾನು ಮುಂದಿನ ಬಿಗ್ ಬಾಸ್ ಸೀಸನ್‌ನಿಂದ ನಿರೂಪಣೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಇದೀಗ ಬಾಲಿವುಡ್‌ನಲ್ಲಿ ಹಿಂದಿ ಬಿಗ್ ಬಾಸ್ ಸೀಸನ್ 18ರ ನಿರೂಪಣೆಯಿಂದ ಸಲ್ಮಾನ್ ಖಾನ್ ಹೊರಗುಳಿಯುತ್ತಿದ್ದಾರೆ. ಆದರೆ, ಇದಕ್ಕೆ ಮುಖ್ಯ ಕಾರಣ ಬೇರೆಯೇ ಇದೆ…
ದೇಶದಲ್ಲಿ ಬಾಬಾ ಸಿದ್ದಿಕಿ ಹತ್ಯೆಯಿಂದ ಬಾಲಿವುಡ್ ಶಾಕ್ ಆಗಿದೆ. ಲಾರೆನ್ಸ್ ಬಿಷ್ಣೋಯ್ ಈ ಹತ್ಯೆಯ ಹಿಂದೆ ತನ್ನ ಕೈವಾಡ ಇದೆ ಅಂತ ಹೇಳಿಕೊಂಡಿದ್ದಾನೆ. ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್‌ಗೆ ಈ ಹಿಂದೆ ಜೀವ ಬೆದರಿಕೆ ಹಾಕಿತ್ತು. ಈಗ ಸಲ್ಮಾನ್ ತಮ್ಮ ಮನೆಯಲ್ಲೇ ಇದ್ದಾರೆ, ಯಾರನ್ನೂ ಭೇಟಿ ಮಾಡ್ತಿಲ್ಲ. ಈ ನಡುವೆ ಬಿಗ್ ಬಾಸ್ 18 ಬಗ್ಗೆ ಒಂದು ಸುದ್ದಿ ಹೊರಬಿದ್ದಿದೆ. ಜೀವ ಬೆದರಿಕೆ ಮತ್ತು ಸೆಕ್ಯುರಿಟಿ ಕಾರಣದಿಂದ ಸಲ್ಮಾನ್ ಈ ವಾರ ವಾರಾಂತ್ಯದ ಸಂಚಿಕೆ ನಡೆಸಿಕೊಡೋದಿಲ್ಲ ಅಂತ ಗೊತ್ತಾಗಿದೆ. ಈಗ ಪ್ರಶ್ನೆ ಏನಂದ್ರೆ, ಸಲ್ಮಾನ್ ಜಾಗದಲ್ಲಿ ಯಾರು ವಾರಾಂತ್ಯದ ಸಂಚಿಕೆ ನಡೆಸಿಕೊಡ್ತಾರೆ?


