Tuesday, June 24, 2025
26.6 C
Bengaluru
Google search engine
LIVE
ಮನೆ#Exclusive NewsTop Newsಅನಂತ್ ಅಂಬಾನಿ ಸಂಗೀತ ಕಾರ್ಯಕ್ರಮದಲ್ಲಿ ಬ್ಯಾಕ್ ಡ್ಯಾನ್ಸರ್ಸ್​ ಆದ ಬಾಲಿವುಡ್ ಹೀರೋಗಳು

ಅನಂತ್ ಅಂಬಾನಿ ಸಂಗೀತ ಕಾರ್ಯಕ್ರಮದಲ್ಲಿ ಬ್ಯಾಕ್ ಡ್ಯಾನ್ಸರ್ಸ್​ ಆದ ಬಾಲಿವುಡ್ ಹೀರೋಗಳು

ಅಂಬಾನಿ ಮನೆಯ ಮದುವೆ ಕಾರ್ಯಕ್ರಮ ಎಂದರೆ ಅಲ್ಲಿ ಅದ್ದೂರಿತನ ಇರಲೇಬೇಕು. ಅದೆಷ್ಟು ಅದ್ದೂರಿತನ ಎಂದರೆ ಬಂದ ಅತಿಥಿಗಳಿಗೆ ಬಾಲಿವುಡ್ ಸೆಲೆಬ್ರಿಟಿಗಳು ಅಡುಗೆ ಬಡಿಸುತ್ತಾರೆ. ಬಂದ ಅತಿಥಿಗಳನ್ನು ನಟಿಯರು ಸ್ವಾಗತಿಸಲು ಮನೆಯ ಬಾಗಿಲಲ್ಲಿ ನಿಲ್ಲುತ್ತಾರೆ. ಅಂಬಾನಿ ಕುಟುಂಬದವರು ಡ್ಯಾನ್ಸ್ ಮಾಡುವಾಗ ಹೀರೋಗಳು ಬ್ಯಾಕ್ ಡ್ಯಾನ್ಸರ್​ಗಳಾಗುತ್ತಾರೆ. ಈಗ ಹಾಗೆಯೇ ಆಗಿದೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಸಂಗೀತ ಕಾರ್ಯಕ್ರಮದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಬ್ಯಾಕ್ ಡ್ಯಾನ್ಸರ್​ಗಳಾಗಿದ್ದಾರೆ. ಈ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗುತ್ತಿದೆ.

 

ವೀರಲ್ ಭಯಾನಿ ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸಲ್ಮಾನ್ ಖಾನ್ ಹಾಗೂ ಅನಂತ್ ಅಂಬಾನಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಇದೆ. ಇದರಲ್ಲಿ ಅನಂತ್ ಅವರು ಸಲ್ಮಾನ್ ಹುಕ್ ಸ್ಟೆಪ್​ನ ಪ್ರಯತ್ನಿಸಿದ್ದಾರೆ. ರಣವೀರ್ ಸಿಂಗ್ ಅವರು ಕೂಡ ಡ್ಯಾನ್ಸ್ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಕೂಡ ಸಂಗೀತ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ, ಪ್ರೆಗ್ನೆಂಟ್ ಅನ್ನೋ ಕಾರಣಕ್ಕೆ ಅವರು ಡ್ಯಾನ್ಸ್ ಮಾಡಿಲ್ಲ.  ಜಸ್ಟಿನ್ ಬೀಬರ್ ಕೂಡ ಅಂಬಾನಿ ಮನೆಯ ಮದುವೆ ಕಾರ್ಯಕ್ರಮದಲ್ಲಿ ಹಾಡಲು ಮುಂಬೈಗೆ ಬಂದಿದ್ದಾರೆ.

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಜುಲೈ 12ರಂದು ಮದುವೆ ಆಗಲಿದ್ದಾರೆ. ಮುಂಬೈನಲ್ಲಿ ಅದ್ದೂರಿಯಾಗಿ ಈ ವಿವಾಹ ನಡೆಯಲಿದೆ. ಅನೇಕ ಸೆಲೆಬ್ರಿಟಿಗಳು ಈ ವಿವಾಹ ಕಾರ್ಯಕ್ರಮದಲ್ಲಿ ಭಾಗಿ ಆಗೋ ಸಾಧ್ಯತೆ ಇದೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments