ಸೌತ್ ಬ್ಯೂಟಿ ಶ್ರುತಿ ಹಾಸನ್ ಸಿನಿಮಾಗಿಂತ ಹೆಚ್ಚು ಖಾಸಗಿ ವಿಚಾರವಾಗಿಯೇ ಸುದ್ದಿಯಲ್ಲಿದ್ದಾರೆ. ಇದೀಗ ಅಭಿಮಾನಿಯೊಬ್ಬ, ನಿಮ್ಮ ಮದುವೆ ಯಾವಾಗ ಎಂದಿದ್ದಕ್ಕೆ ನಟಿ ಗರಂ ಆಗಿದ್ದಾರೆ. ಖಡಕ್ ಆಗಿ ಶ್ರುತಿ ಉತ್ತರ ನೀಡಿದ್ದಾರೆ.
ಇತ್ತೀಚೆಗೆ ಬಹುಕಾಲದ ಗೆಳೆಯ ಶಾಂತನು ಜೊತೆಗಿನ ಸಂಬಂಧಕ್ಕೆ ನಟಿ ಬ್ರೇಕ್ ಹಾಕಿದ್ದರು. ಸದ್ಯ ಸಿಂಗಲ್ ಇರುವ ಶ್ರುತಿಗೆ ಮದುವೆ ಕುರಿತು ಪ್ರಶ್ನೆ ಎದುರಾಗ್ತಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ನಟಿ ಚಾಟ್ ಸೆಷನ್ ಮಾಡಿದ್ದಾರೆ.
ಆಗ ಅಭಿಮಾನಿಯೊಬ್ಬ, ನೀವು ಯಾವ ರೀತಿಯ ವ್ಯಕ್ತಿಯನ್ನು ಮದುವೆಯಾಗುತ್ತೀರಿ? ಎಂದು ಕೇಳಿದ್ದಾರೆ. ಅದಕ್ಕೆ ನಟಿ, ಇದು 2024 ಹುಡುಗಿಯರಿಗೆ ಇಂತಹ ಸಿಲ್ಲಿ ಪ್ರಶ್ನೆಗಳನ್ನು ಕೇಳಬೇಡಿ ಎಂದು ಖಾರವಾಗಿಯೇ ಉತ್ತರಿಸಿದ್ದಾರೆ. ಮತ್ತೊಬ್ಬ ಅಭಿಮಾನಿ, ನೀವು ಮದುವೆ ಯಾವಾಗ ಆಗ್ತೀರಾ ಎಂದು ಕೇಳಿದ್ದಾರೆ. ನಾನು ಮದುವೆ ಆಗುವುದಿಲ್ಲ ಎಂದು ಖಡಕ್ ಆಗಿ ಕಮಲ್ ಹಾಸನ್ ಪುತ್ರಿ ಉತ್ತರಿಸಿದ್ದಾರೆ. ಈ ಮೂಲಕ ನಾನು ಸಿಂಗಲ್ ಆಗಿಯೇ ಇರುತ್ತೇನೆ ಎಂದಿದ್ದಾರೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com
Phone Number : +91-9164072277
Email id : salesatfreedomtv@gmail.com