ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಪಹಲ್ಗಾಮ್ ಉಗ್ರ ದಾಳಿ ಪ್ರಕರಣ, 2019ರಲ್ಲಿ ನಡೆದಿದ್ದ ಪುಲ್ವಾಮಾ ದಾಳಿ ನಂತರ ನಡೆದ ಅತಿ ದೊಡ್ಡ ದಾಳಿಯಾಗಿದೆ. ಇದುವರೆಗೆ ಸುಮಾರು 26 ಮಂದಿ ಹಿಂದೂಗಳು ಮೃತಪಟ್ಟಿದ್ದಾರೆ.
ಲಷ್ಕರ್ ಎ ತೊಯ್ಬಾ ಸಂಘಟನೆಯ ದಿ ರೆಸಿಸ್ಟೆನ್ಸ್ ಫ್ರಂಟ್ ದಾಳಿಯ ಹೊಣೆ ಹೊತ್ತಿದೆ. ಈ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್ ಮತ್ತು ಟಿಆರ್‌ಎಫ್‌ನ ಭಯೋತ್ಪಾದಕ ಸೈಫುಲ್ಲಾ ಖಾಲಿದ್.
ಸೈಫುಲ್ಲಾ ಖಾಲಿದ್ನನ್ನು ಸೈಫುಲ್ಲಾ ಕಸೂರಿ ಅಂತಲೂ ಕರೆಯುತ್ತಾರೆ. ಈತ ಅಂತಾರಾಷ್ಟ್ರೀಯ ಭಯೋತ್ಪಾದಕ ಹಫೀಜ್ ಸಯೀದ್‌ಗೆ ಪರಮಾಪ್ತ.
ಭಾರತದ ಪ್ರಧಾನಿಗಿಂತಲೂ ಅತಿ ಹೆಚ್ಚು ಭದ್ರತೆ ಈತನಿಗೆ ನೀಡಲಾಗುತ್ತಿದೆ. ಈತ ಪಾಕಿಸ್ತಾನದಲ್ಲಿ ತುಂಬಾ ಪ್ರಭಾವ ಹೊಂದಿರುವ ವ್ಯಕ್ತಿ. ಪಾಕ್ ಸೇನಾಧಿಕಾರಿಗಳು ಕೂಡ ಈತನಿಗೆ ಭಾರೀ ಗೌರವ ಕೊಡುತ್ತಾರೆ. ಪಾಕಿಸ್ತಾನದಲ್ಲಿ ಥೇಟ್ ವಿಐಪಿ ರೀತಿ ಸೈಫುಲ್ಲಾ ಖಾಲಿದ್ ಓಡಾಡುತ್ತಿದ್ದಾನೆ.
ಗುಪ್ತಚರ ಸಂಸ್ಥೆ “ರಾ” ಮತ್ತು ಭಾರತೀಯ ಸೇನೆಯ ಗುಪ್ತಚರ ಸಂಸ್ಥೆಗಳ ಪ್ರಕಾರ, ಸೈಫುಲ್ಲಾ ಖಾಲಿದ್ ಪಾಕಿಸ್ತಾನಿ ಸೇನೆಯ ವಿಶೇಷ ವ್ಯಕ್ತಿಯಾಗಿದ್ದಾನೆ.
ಜೊತೆಗೆ ಭಾರತದ ನಂಬರ್ 1 ಶತ್ರು ಹಫೀಜ್ ಸಯೀದ್‌ನ ಬಲಗೈಬಂಟ ಸೈಫುಲ್ ಖಾಲಿದ್ ಅನ್ನುವ ಬಗ್ಗೆಯೂ ಮಾಹಿತಿ ನೀಡಿದೆ.
ಲಷ್ಕರ್ ಉಗ್ರ ಸೈಫುಲ್ಲಾ ಖಾಲಿದ್ಗೆ ಐಷಾರಾಮಿ ಕಾರುಗಳು ಅಂದ್ರೆ ಇಷ್ಟ.