Wednesday, January 28, 2026
18.8 C
Bengaluru
Google search engine
LIVE
ಮನೆ#Exclusive NewsTop Newsಯತ್ನಾಳ್ ವಿರುದ್ಧ ಕ್ರಮಕ್ಕೆ ಹೈಕಮಾಂಡ್ ಗೆ ಸದಾನಂದ ಗೌಡ ಒತ್ತಾಯ

ಯತ್ನಾಳ್ ವಿರುದ್ಧ ಕ್ರಮಕ್ಕೆ ಹೈಕಮಾಂಡ್ ಗೆ ಸದಾನಂದ ಗೌಡ ಒತ್ತಾಯ

ಬೆಂಗಳೂರು; ಬಿಜೆಪಿ ಕಾರ್ಯವೈಖರಿ ಬಗ್ಗೆ ಮಹತ್ವದ ಸುದ್ದಿಗೋಷ್ಠಿ ನಡೆಸಿದ ಡಿ ವಿ ಸದಾನಂದಗೌಡ, ತುಂಬಾ ಬೇಸರದಿಂದ ಸುದ್ದಿ ಗೋಷ್ಠಿ ಮಾಡ್ತಿದ್ದೇನೆ ಬಿಜೆಪಿಗೆ ಯಶಸ್ಸು ಸಿಗಲಿ ಎಂದು ಮಾತನಾಡ್ತಿದ್ದೇನೆ. ಪಕ್ಷದಲ್ಲಾದ ಬೆಳವಣಿಗೆ ಬಗ್ಗೆ ನಾಯಕರು ಬಹಿರಂಗ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ ಇದನ್ನ ಸರಿ ಮಾಡಲು ಆಗುತ್ತಿಲ್ಲ ಪಕ್ಷದಲ್ಲೂ ಎಲ್ಲವೂ ಸರಿ ಇಲ್ಲ ಎಂಬ ಭಾವನೆಯಿದೆ ಕೇಂದ್ರ ವರಿಷ್ಠರು ಈ ಬಗ್ಗೆ ಯಾರು ಹೇಳ್ತಿಲ್ಲರಾಜ್ಯದಲ್ಲಿ ಹೇಳೋರು ಇಲ್ಲ,ಕೇಳೋರು ಇಲ್ಲನಮ್ಮಲ್ಲಿ ಆಂತರಿಕ ಗೊಂದಲ ಇದೆನಾವೆಲ್ಲ ಜೊತೆಯಾಗಿ ಹೋರಾಟ ಮಾಡಬೇಕೆಂದು ಪಕ್ಷದ ಬಗ್ಗೆ ಕಳವ ವ್ಯಕ್ತ ಪಡಿಸಿದ್ದಾರೆ.

ಪಕ್ಷದ ಏಳಿಗೆಗಾಗಿ ಆತ್ಮಾವಲೋಕನ ಸಭೆ ಮಾಡಿ ಬದಲಾವಣೆ ಬಗ್ಗೆ ಕಾರ್ಯಕರ್ತರಿಗೆ ಉತ್ತರ ಬೇಕಿದೆ. ಪದಾಧಿಕಾರಿಗಳ ನೇಮಕದ ಮುನ್ನ ಸಭೆ ನಡೆಸ ಬೇಕಿತ್ತು. ಪದಾಧಿಕಾರಿಗಳ ನೇಮಕ ವಿಚಾರದಲ್ಲಿ ಅಧ್ಯಕ್ಷರಿಗೆ ಸುಪ್ರೀಂ ಪವರ್ ಇರುತ್ತೆ. ಪಕ್ಷದ ಉತ್ತಮ ಬೆಳವಣಿಗೆ ಕೇಂದ್ರ ನಾಯಕರು ರಾಜ್ಯಕ್ಕೆ ಬಂದರೇ ನಾಯಕರ ಮನಸ್ಥಿತಿಯನ್ನು ಸರಿದೂಗಿಸಬಹುದು ಎಂದು ಸುದ್ದಿಗೋಷ್ಠಿ ವೇಳೆ ಸಲಹೆ ನಿಡಿದರು.

ಕೆಲ ದಿನಗಳಿಂದ ಬಿಜೆಪಿಯಲ್ಲಾಗುತ್ತಿರುವ ಬಗ್ಗೆ ಕೆಲವರು ತಮಗಿಷ್ಟ ಬಂದಂತೆ ನಡೆದು ಕೊಳ್ಳುತ್ತಿದ್ದವರಿಗೆ ಅಶಿಸ್ತನ್ನು ತೋರುವವರ ವಿರುದ್ದ ಹೈಕಮಾಂಡ್ ಕ್ರಮ ತೆದುಕೊಳ್ಳಬೇಕೆಂದು ಡಿವಿಎಸ್ ಸದಾನಂದ ಗೌಡರು ಒತ್ತಾಯ ಮಾಡಿದ್ದಾರೆ.

ಯತ್ನಾಳ್ ಬಗ್ಗೆ ಅಸಮಾಧಾನ ಹೊರ ಹಾಕಿರುವ ಡಿವಿ ಎಸ್ , ನಾನು ಪಕ್ಷದ ರಾಜ್ಯಾಧ್ಯಕ್ಷನಾಗಿದ್ದಾಗ ಜನಾರ್ಧನ ರೆಡ್ಡಿ ನೋಟಿಸ್ ನೀಡಿದ್ದೆ ಯತ್ನಾಳ್, ರೇಣುಕಾಚಾರ್ಯರನ್ನ ಉಚ್ಛಾಟನೆ ಮಾಡಿದ್ದೆ ಎಂದು ಯತ್ನಳ್ ವಿರುದ್ದ ಕಿಡಿಕಾರಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments