ರಾಜಕೀಯ
ಮೋದಿ ಉತ್ತರಾಧಿಕಾರಿಯನ್ನು RSS ಡಿಸೈಡ್ ಮಾಡುತ್ತೆ; ಸಂಜಯ್ ರಾವತ್

ಮುಂಬೈ: ಯುಗಾದಿ ಹಬ್ಬದಂದು ಆರ್ಎಸ್ಎಸ್ ಆದ್ಯ ಸರಸಂಘಚಾಲಕ ಡಾ. ಕೇಶವ್ ಬಲಿರಾಮ್ ಹೆಡಗೇವಾರ್ರ ಜಯಂತಿ. ಈ ಹಿನ್ನಲೆಯಲ್ಲಿ ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಅವರು ನಾಗ್ಪುರದಲ್ಲಿರುವ ಆರ್ಎಸ್ಎಸ್ ಮುಖ್ಯ ಕಚೇರಿಗೆ ಭೇಟಿ ನೀಡಿದ್ರು. ಪ್ರಧಾನಿಯೊಬ್ಬರು ಆರ್ಎಸ್ಎಸ್ ಕಚೇರಿಗೆ ಭೇಟಿ ನೀಡಿದ್ದು, ಇದೇ ಮೊದಲಿಗೆ. ಮೋದಿಯವರ ಈ ನಡೆಗೆ ವಿಪಕ್ಷಗಳು ವ್ಯಾಪಕವಾಗಿ ಟೀಕೆ ನಡೆಸುತ್ತಿದ್ದಾರೆ.
ಈ ಬಗ್ಗೆ ಶಿವಸೇನೆ ಮುಖಂಡ ಸಂಜಯ್ ರಾವತ್ ಟೀಕೆ ಮಾಡಿದ್ದಾರೆ. ಪ್ರಧಾನಿ ಮೋದಿಗೆ ಸೆಪ್ಟೆಂಬರ್ 17ಕ್ಕೆ 75 ವರ್ಷ ತುಂಬಲಿದೆ. ಅವರ ಪಕ್ಷದ ನಿಯಮದಂತೆ ನಿವೃತ್ತರಾಗಲು ಸಿದ್ಧತೆ ನಡೆಸಿದ್ದಾರೆ. ಹೀಗಾಗಿ, ತಮ್ಮ ನಿವೃತ್ತಿ ಅರ್ಜಿಯನ್ನು ಆರ್ಎಸ್ಎಸ್ ಕಚೇರಿಯಲ್ಲಿ ಸಲ್ಲಿಸಿರಬಹುದು. ಅಲ್ಲಿ ಗೌಪ್ಯವಾಗಿ ಚರ್ಚೆಯೂ ನಡೆದಿದೆ. ಅಲ್ಲದೇ ಸಂಘ ಪರಿವಾರವೂ ದೇಶದ ನಾಯಕತ್ವದಲ್ಲಿ ಬದಲಾವಣೆ ಬಯಸಿದೆ. ಪ್ರಧಾನಿ ಮೋದಿ ಕಾಲ ಮುಗಿದಿದೆ. ಅವರೂ ಕೂಡ ಬದಲಾವಣೆ ಬಯಸುತ್ತಾರೆ ಎಂದು ಸಂಜಯ್ ರಾವತ್ ಹೇಳಿದ್ದಾರೆ




