Friday, September 12, 2025
22.5 C
Bengaluru
Google search engine
LIVE
ಮನೆಕ್ರೈಂ ಸ್ಟೋರಿರೂಂ ನಂ `404' ರಹಸ್ಯ ಛೇ ನೀನೆಂಥಾ ತಾಯಿ..?

ರೂಂ ನಂ `404′ ರಹಸ್ಯ ಛೇ ನೀನೆಂಥಾ ತಾಯಿ..?

ಚಿತ್ರದುರ್ಗದ ಐಮಂಗಲ ಠಾಣೆ ಪೊಲೀಸ್ರು ಸ್ಟನ್ ಆಗಿ ನಿಂತು ಬಿಟ್ರು ಪೊಲೀಸ್ರು…ಶವ ನೋಡಿ ಬೆಚ್ಚಿ ಬಿದ್ದಿದ್ರು.. ನಿದ್ದೆಯ ಮಂಪರಿನಲ್ಲಿದ್ದ ಆ ಹೆಣ್ಣು ಮಗಳನ್ನ ಠಾಣೆಯೊಳಗೆ ಕರೆದೋಯ್ದಿದ್ರು.. ಅದಾಗಲೇ ಉಸಿರು ನಿಲ್ಲಿಸಿ ತಣ್ಣಗೆ ಮಲಗಿದ್ದ ಮಗುವಿನ ಶವವನ್ನ ಮಾರ್ಚರಿಗೆ ಕಳಿಸಿಕೊಟ್ಟಿದ್ರು.. ಶವದ ಜೊತೆಗೆ ಪ್ರಯಾಣ ಮಾಡಿಕೊಂಡು ಬಂದಿದ್ದ ಆಕೆಯನ್ನ ವಿಚಾರಣೆಗೆ ಒಳಪಡಿಸುತ್ತಲೇ ತೆರೆದುಕೊಂಡಿತ್ತು ವೆಲ್ ಎಜುಕೇಟೆಡ್ ಹೆಣ್ಣು ಮಗಳೊಬ್ಬಳ ವಿಕೃತ ಮನಸ್ಥಿತಿಯ ಹಿಂದಿನ ಮುಖವಾಡ…ಗೋವಾದಲ್ಲಿ ನಡೆದ ಮಗು ಕೊಲೆಯ ಹಂತಕಿ ಚಿತ್ರದುರ್ಗದಲ್ಲಿ ಸಿಕ್ಕಿಬಿದ್ದಿದ್ಲು.


ಉತ್ತರ ಗೋವಾದ ಕ್ಯಾಂಡೋಲಿಮ್‌ನ ಸರ್ವಿಸ್ ಅಪಾರ್ಟ್‌ಮೆಂಟ್‌ ಕಂ ಹೊಟೇಲ್ಗೆ ತನ್ನ ನಾಲ್ಕು ವರ್ಷದ ಮಗನ ಜೊತೆ ಬಂದಿಳಿದಿದ್ಲು ಸುಚನಾ..ರೂಂ ನಂ 404ನ್ನ ಅಲಾಟ್ ಮಾಡಿದ ಸಿಬ್ಬಂದಿ ಆ ರಾತ್ರಿ ಊಟ ತಂದು ಕೊಟ್ಟಿದ್ರು. ಅಷ್ಟೆ ಮರುದಿನ ಬೆಳಗಿನ ಜಾವ ನಾನು ಅರ್ಜೆಂಟ್ ಹೋಗಬೇಕು…ಬೆಂಗಳೂರಿಗೆ ಟ್ಯಾಕ್ಸಿ ಬೇಕು ಅಂತ ಹೇಳಿದ್ಲು.. ಹೊಟೇಲ್ ಸಿಬ್ಬಂದಿ ಫ್ಲೈಟ್ ನಲ್ಲಿಯೇ ಹೋಗಿ ಅಂತ ಸಲಹೆ ಕೊಟ್ಟಿದ್ರು.. ಅದನ್ನ ಕೇಳದೆ ಟ್ಯಾಕ್ಸಿ ಕರೆಸಿಕೊಂಡಿದ್ದಳು.. ಬಳಿಕಾ ತರಾತುರಿಯಲ್ಲಿ ಸೂಟ್ ಕೇಸ್ ಹಿಡಿದುಕೊಂಡು GA 03 AH 5253 ನಂಬರಿನ ಇನ್ನೋವಾ ಕಾರಿನಲ್ಲಿ ಬೆಂಗಳೂರಿನತ್ತ ಹೊರಟಿದ್ಲು.

ಅತ್ತ ಗೆಸ್ಟ್ ಆಗಿದ್ದ ಸೂಚನಾ ಸೇಠ್ ರೂಂ ವೆಕೇಟ್ ಮಾಡುತ್ತಲೇ ಹೊಟೇಲಿನ ಸಿಬ್ಬಂದಿ ರೂಂ ಸ್ವಚ್ಚ ಮಾಡೋಕೆ ಅಂತ ಹೊಟೇಲ್ ಒಳಗೆ ಬಂದಿದ್ದು.. ಆಗಲೇ ಅವರ ಕಣ್ಣಿಗೆ ರೂಮಿನಲ್ಲಿ ನೆತ್ತರ ರಂಗೋಲಿ ಕಂಡಿತ್ತು.. ಗಾಬರಿಯಾದ ಸಿಬ್ಬಂದಿ ಹೊಟೇಲ್ ಮ್ಯಾನೇಜರ್ಗೆ ತಿಳಿಸಿದ್ದ..ಇಲ್ಲೇನೋ ಅವಘಡ ನಡೆದಿದೆ ಅನ್ನೋದು ಅರಿವಾಯ್ತು.. ತಕ್ಷಣ ಕಲಾಂಗುಟೆ ಪೊಲೀಸ್ರಿಗೆ ಸುದ್ದಿ ಮುಟ್ಟಿಸಲಾಯ್ತು.. ಸ್ಪಾಟಿಗೆ ಬಂದಿತ್ತು ಪೊಲೀಸ್ ಟೀಮು..ರೂಮಿನೊಳಗೆ ಬಿದ್ದಿದ್ದ ನೆತ್ತರ ಕಲೆಯನ್ನ ನೋಡಿದ್ರು.

ಅಷ್ಟು ಸಾಕಿತ್ತು ಪೊಲೀಸ್ರಿಗೆ….ಉತ್ತರ ಗೋವಾ ಎಸ್ಪಿ ನಿಧಿನ್ ವಲ್ಸನ್ ಮಾರ್ಗದರ್ಶನದಲ್ಲಿ ತನಿಖೆಯ ಬೆನ್ನು ಬಿದ್ದ ಪರೇಶ್ ನಾಯ್ಕ್ ಚಾಲಕನಿಗೆ ಕರೆ ಮಾಡಿದ್ರು.. ಅಲ್ಲದೇ ಇಲ್ಲೇನೋ ಯಡವಟ್ಟು ಆಗಿದೆ.. ಸೋ ಆಕೆಯ ಮೇಲೆ ಅನುಮಾನವಿದೆ. ಎಲ್ಲಿದ್ದೀಯ ಅಂತ ಕೇಳಿದ್ರು. ಆತ ಚಿತ್ರದುರ್ಗ ಬಿಟ್ಟಿರೋದಾಗಿ ಮಾಹಿತಿ ಕೊಟ್ಟಿದ್ದ.. ಪೊಲೀಸ್ರು ಚಿತ್ರದುರ್ಗ ಎಸ್ಪಿಗೆ ಕರೆ ಮಾಡಿ ಕಾರಿನ ನಂಬರ್ ಕೊಟ್ಟು ತಡೆಯುವಂತೆ ಸೂಚಿಸಿದ್ರು. ಅಲ್ಲದೇ ಚಾಲಕನಿಗೆ ಮುಂದೆ ಸಿಗೋ ಪೊಲೀಸ್ ಠಾಣೆ ಮುಂದೆ ಕಾರು ನಿಲ್ಲಿಸುವಂತೆ ತಿಳಿಸಿದ್ರು.. ಅದ್ರಂತೆ ಟ್ಯಾಕ್ಸಿ ಡ್ರೈವರ್ ಐಮಂಗಲ ಪೊಲೀಸ್ ಠಾಣೆ ಮುಂದೆ ಕಾರನ್ನ ಪಾರ್ಕ ಮಾಡಿದ್ದ.


ಹೌದು…ಸುಚನಾ ಸೇಠ್..ಮೂಲತಃ ಪಶ್ಚಿಮ ಬಂಗಾಳದ ಕೊಲ್ಕತ್ತ ಮೂಲದ ಹುಡುಗಿ..ಸಾಕಷ್ಟು ಓದಿಕೊಂಡಿದ್ಲು.. ವಿದ್ಯಾವಂತೆ.. ಕಲ್ಕತ್ತಾ ವಿವಿಯಲ್ಲಿ ಖಗೋಳ ಭೌತಶಾಸ್ತ್ರ ಅಧ್ಯಯನ ಮಾಡಿದ್ಲು.. ರಾಮಕೃಷ್ಣ ಮಿಷನ್ ಇನ್‌ಸ್ಟಿಟ್ಯೂಟ್ ಆಫ್ ಕಲ್ಚರ್‌ ನಲ್ಲಿ ಸಂಸ್ಕೃತ ಸ್ನಾತಕೋತ್ತರ ಡಿಪ್ಲೊಮಾ ಮುಗಿಸಿದ್ಲು.. ಬೆಂಗಳೂರಿನ ಬೂಮರಾಂಗ್ ಕಾಮರ್ಸ್‌ನಲ್ಲಿ ಹಿರಿಯ ಡೇಟಾ ವಿಜ್ಞಾನಿಯಾಗಿ ಒಂದಷ್ಟು ದಿನ ಸೇವೆ ಸಲ್ಲಿಸಿದ್ಲು.. ಲಂಡನ್ ನಿನ ಬೋಸ್ಟನ್ ಕಂಪನಿಯಲ್ಲೂ ಕೆಲಸ ಮಾಡಿದ್ಲು.. ಇದು ಎಐ ಯುಗ..ಇದೇ ಎಐ ಸಂಶೋಧನೆಗಳಲ್ಲಿ ತನ್ನನ್ನ ತಾನು ತೊಡಗಿಸಿಕೊಂಡಿದ್ಲು..ಇದಕ್ಕಾಗಿಯೇ ದಿ ಮೈಂಡ್ ಫುಲ್ ಎಐ ಲ್ಯಾಬ್ ಎಂಬ ಸ್ವಂತ ಉದ್ಯಮ ಆರಂಭಿಸಿದ್ಲು.. ಬೆಂಗಳೂರಿನ ರೆಸಿಡೆನ್ಸಿ ರೋಡಿನಲ್ಲಿ ಕಛೇರಿ ಮಾಡಿಕೊಂಡಿದ್ಲು.. ಇಷ್ಟೆಲ್ಲಾ ಗೆದ್ದವಳ ಸಂಸಾರದಲ್ಲಿ ದೊಡ್ಡ ಕಂದಕವಿತ್ತು.


ಹೌದು ಸುಚನಾ ಸೇಠ್ ತಮಿಳುನಾಡು ಮೂಲದ ಟೆಕ್ಕಿ ವೆಂಕಟರಮಣ ಎಂಬಾತನನ್ನ ಮದುವೆಯಾಗಿದ್ಲು… ಒಂದಷ್ಟು ದಿನ ಚೆಂದದ ಸಂಸಾರ..ಒಂದು ಕಡೆ ಕೆಲಸದ ಒತ್ತಡ.. ಅದೇನಾಯ್ತೋ ಏನೋ..ಎರಡು ವರ್ಷಗಳಿಂದ ಗಂಡನಿಂದ ದೂರವಾಗಿದ್ಲು.. ಈ ವೇಳೆಗಾಗಲೇ ಒಂದು ಮಗುವಾಗಿತ್ತು…ಇತ್ತ ದಂಪತಿಗಳ ನಡುವೆ ಬಿರುಕು ಉಂಟಾಗಿ ಡಿವೋರ್ಸ್ ತನಕ ಬಂದಿತ್ತು… ನ್ಯಾಯಾಲಯ ಮಗುವನ್ನ ಪ್ರತಿ ಭಾನುವಾರ ನೋಡೋಕೆ ಅನುಮತಿ ನೀಡಿತ್ತು.. ಅದ್ರಂತೆ ಆತ ಸಮಯ ಸಿಕ್ಕಾಗ ಬರ್ತಿದ್ದ..ಇಲ್ಲವೇ ವಿಡಿಯೋ ಕಾಲ್ ಮಾಡಿ ಮಗುವನ್ನ ಮಾತಾಡಿಸುತ್ತಿದ್ದ. ಇದು ಆಕೆಗೆ ಹಿಂಸೆ ಅನ್ನಿಸಿಬಿಟ್ಟಿದೆ. ಮಗುವಿನ ನೆಪ ಮಾಡ್ಕೊಂಡು ವೆಂಕಟರಮಣ ಬರೋದು ಆಕೆಗೆ ಇಷ್ಟವಾಗಲಿಲ್ಲವೋ ಏನೋ..? ಈ ಮಗು ಇದ್ರೆ ತಾನೇ ಅನ್ನೋ ನಿರ್ಧಾರಕ್ಕೆ ಬಂದು ಬಿಟ್ಲಾ ಗೊತ್ತಿಲ್ಲ..ಅದೇ ಮಗುವಿನ ಸಾವಿಗೆ ಕಾರಣವಾಯ್ತಾ..? ಗೊತ್ತಿಲ್ಲ…ತನಿಖೆ ಮುಗಿಬೇಕು..ಸತ್ಯ ಹೊರಬರಬೇಕು..ಅಷ್ಟೆ.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments