ಬೇಕಾಗುವ ಸಾಮಗ್ರಿಗಳು…
. ಹಾಲು-1 ಲೀಟರ್
. ತೊಳೆದು ನೆನೆಸಿದ ಅಕ್ಕಿ – ಅರ್ಧ ಬಟ್ಟಲು
. ಸಕ್ಕರೆ- ಅರ್ಧ ಬಟ್ಟಲು
. ಏಲಕ್ಕಿ ಪುಡಿ-ಅರ್ಧ ಚಮಚ
.ಕೇಸರಿ ದಳಗಳು – ಚಿಟಿಕೆ
. ಕತ್ತರಿಸಿದ ಬಾದಾಮಿ -2 ಚಮಚ
. ಕತ್ತರಿಸಿದ ಪಿಸ್ತಾ-2 ಚಮಚ
ಮಾಡುವ ವಿಧಾನ….
. ಮೊದಲಿಗೆ ತಳವಿರುವ ಪ್ಯಾನ್ನಲ್ಲಿ ಹಾಲನ್ನು ಕಡಿಮೆ ಉರಿಯಲ್ಲಿ ಕುದಿಸಿಕೊಳ್ಳಿ.
.ತೊಳೆದು ನೆನೆಸಿದ ಅಕ್ಕಿಯನ್ನು ಹಾಲಿಗೆ ಸೇರಿಸಿ, ಅಕ್ಕಿ ಮೃದುವಾಗುವವರೆಗೆ ಮತ್ತು ಹಾಲು ದಪ್ಪವಾಗುವವರೆಗೆ ಬೇಯಿಸಿ.
. ಹಾಲಿನ ಮಿಶ್ರಣಕ್ಕೆ ಸಕ್ಕರೆ,ಏಲಕ್ಕಿ ಪುಡಿ, ಚಿಟಿಕೆ ಕೇಸರಿ ಸೇರಿಸಿ ಚೆನ್ನಾಗಿ ಬೆರೆಸಿ.
. ಸಕ್ಕರೆ ಕರುಗುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸುವುದನ್ನು ಮುಂದುವರಿಸಿ.
. ಬಳಿಕ ಉರಿಯನ್ನು ಆಫ್ ಮಾಡಿ, ತಣ್ಣಗಾಗಲು ಬಿಡಿ.
. ಫ್ರಿಜ್ನಲ್ಲಿ 1-2 ಗಂಟೆ ಇಡಿ. ನಂತರ ಬಾದಾಮಿ ಹಾಗೂ ಪಿಸ್ತಾದಿಂದ ಅಲಂಕರಿಸಿದರೆ ರುಚಿಕರವಾದ ಅಕ್ಕಿಪಾಯಸ ಸವಿಯಲು ಸಿದ್ಧ.