Friday, September 12, 2025
20.8 C
Bengaluru
Google search engine
LIVE
ಮನೆರಾಜ್ಯಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಸಿದ್ದತೆ ರೆಸಾರ್ಟ್‌, ಹೋಟೆಲ್‌ಗಳು ಸಂಪೂರ್ಣ ಭರ್ತಿ

ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಸಿದ್ದತೆ ರೆಸಾರ್ಟ್‌, ಹೋಟೆಲ್‌ಗಳು ಸಂಪೂರ್ಣ ಭರ್ತಿ

ಮೈಸೂರು ; ಹೊಸ ವರ್ಷ ಸಮೀಪಿಸುತ್ತಿದ್ದು ಸಾಂಸ್ಕೃತಿಕ ನಗರಿ ಮೈಸೂರು 2024 ರ ಹೊಸ ವರ್ಷವನ್ನು ಸಂಭ್ರಮ, ಸಡಗರದಿಂದ ಸ್ವಾಗತಿಸಲು ಸಜ್ಜಾಗಿದೆ. ಕೋವಿಡ್‌ ಮುಂಜಾಗ್ರತೆಯೊಂದಿಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮೈಸೂರು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಅರಮನೆ ಆವರಣದಲ್ಲಿ ನಡೆಯುತ್ತಿರುವ ಮಾಗಿ ಉತ್ಸವ ಕೂಡ ಹೊಸ ವರ್ಷಕ್ಕೆ ಮೆರುಗು ನೀಡಿದ್ದು, ಅಂಬಾ ವಿಲಾಸ ಆವರಣದಲ್ಲಿ ಸಾರ್ವಜನಿಕರು ಹೊಸ ವರ್ಷವನ್ನು ಸ್ವಾಗತಿಸಬಹುದಾಗಿದೆ.

ನಗರದಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಹೊಟೇಲ್‌ಗಳಿದ್ದು, 20ಕ್ಕೂ ಹೆಚ್ಚು ಐಷಾರಾಮಿ ಹೊಟೇಲ್‌ಗಳಲ್ಲಿ ಹೊಸ ವರ್ಷದ ಸಂಭ್ರಮದ ಪಾರ್ಟಿ ಆಯೋಜಿಸಲಾಗಿದೆ. ಇದರೊಂದಿಗೆ ಹೊರ ವಲಯದಲ್ಲಿ ಹಲವು ಸಣ್ಣ ಪುಟ್ಟ ರೆಸಾರ್ಟ್‌ಗಳು ಈಗಾಗಲೇ ಬುಕ್‌ ಆಗಿವೆ.

ವರ್ಷಾಚರಣೆಗೆ ಸಾಕಷ್ಟು ಮಂದಿ ರಾತ್ರಿ ವೇಳೆ ಬೆಟ್ಟಕ್ಕೆ ತೆರಳಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ರಾತ್ರಿ 8 ಗಂಟೆಯಿಂದಲೇ ಬೆಟ್ಟಕ್ಕೆ ಪ್ರವೇಶವನ್ನು ನಿರ್ಬಂಧಿಸಲು ಪೊಲೀಸರು ನಿರ್ಧರಿಸಿದ್ದಾರೆ. ಹಿನಕಲ್‌ ಫ್ಲೈ ಓವರ್‌ನಲ್ಲಿಯೂ ಸಂಚಾರ ನಿರ್ಬಂಧ ವಿಧಿಸಲಾಗಿದೆ.

ಮಾಗಿ ಉತ್ಸವದ ಪ್ರಯುಕ್ತ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ಡಿಸೆಂಬರ್. 31 ರ ರಾತ್ರಿ 9 ಗಂಟೆ ಹೊತ್ತಿಗೆ ಅಂತ್ಯಗೊಳ್ಳಲಿದ್ದು, ಅರಮನೆ ಗೇಟ್‌ ಬಂದ್‌ ಆಗಲಿದೆ. ಮತ್ತೆ ಹೊಸ ವರ್ಷದ ಆಚರಣೆಗೆ ಅರಮನೆಯ ಪ್ರವೇಶ ದ್ವಾರವನ್ನು ರಾತ್ರಿ 10 ಗಂಟೆಗೆ ತೆರೆಯಲಿದ್ದು, ಇಡೀ ಅರಮನೆ ವಿದ್ಯುತ್‌ ದೀಪಗಳಿಂದ ಝಗಮಗಿಸಲಿವೆ. 11 ಗಂಟೆಯಿಂದ ಕರ್ನಾಟಕ ಪೊಲೀಸ್‌ ವಾದ್ಯವೃಂದದಿಂದ ಪೊಲೀಸ್‌ ಬ್ಯಾಂಡ್‌ ಒಂದು ಗಂಟೆ ನಡೆಯಲಿದ್ದು, 12ರ ಹೊತ್ತಿಗೆ ಬಾಣ ಬಿರುಸುಗಳ ಪ್ರದರ್ಶನ ಇರಲಿದೆ ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ ತಿಳಿಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments