freedom tv desk : ಸಿಗರೇಟಿನಲ್ಲಿರುವ ನಿಕೋಟಿನ್ ಮತ್ತು ಇತರ ಹಾನಿಕರಕ ವಸ್ತುಗಳು ಅಂಡಾಶಯಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಮತ್ತು ಹಾರ್ಮೋನುಗಳ ಸಮತೋಲನಕ್ಕೆ ಅಡ್ಡಿಯಾಗಬಹುದು, ಇದು ಗರ್ಭಧಾರಣೆಯನ್ನು ಹೆಚ್ಚು ಸವಾಲಾಗಿಸುತ್ತದೆ.
ಇತ್ತಿಚಿನ ದಿನಗಳಲ್ಲಿ , ಧೂಮಪಾನ ಮಾಡುವ ಯುವತಿಯಲ್ಲಿ ಸಂತಾನೋತ್ವತ್ತಿ ಅರೋಗ್ಯ ಸಮಸ್ಯೆಗಳಲ್ಲಿ ಅತಿಯಾದ ಹೆಚ್ಚಳ ಕಂಡುಬಂದಿದೆ. ಇದರಲ್ಲಿ ಹದಿಹರೆಯದವರು ಮತ್ತು 20 ರಿಂದ 40 ವರ್ಷದೊಳಗಿನ ವೃತ್ತಿಪರ ಮಹಿಳೆಯರು ಸೇರಿದ್ದಾರೆ. ಕೆಳಗೆ ವಿವರಿಸಲಾದಂತೆ ಧೂಮಪಾನ ಅನೇಕ ಸಂಭಾವ್ಯ ಸಂತಾನೋತ್ವತ್ತಿ ಆರೋಗ್ಯ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿದೆ. ಧೂಮಪಾನವು ವಿಶೇಷವಾಗಿ ಪಾಲಿಸಿಸ್ಟಿಕ್ ಓವರಿ ಸಿಂಡದೋಮ್ ಹೊಂದಿರುವವರ ಋತುಚಕ್ರದಲ್ಲಿನ ತೊಂದರೆಗಳೊಂದಿಗೆ ಸಂಬಂಧ ಹೊಂದಿದೆ.
ಧೂಮಪಾನವು ಗರ್ಭಧಾರಣೆಯಲ್ಲಿನ ತೊಂದರೆಗಳೊಂದಿಗೆ ಸಂಬಂಧ ಹೊಂದಿದೆ. ಸಿಗರೇಟಿನಲ್ಲಿರುವ ನಿಕೋಟಿನ್ ಮತ್ತು ಇತರ ಹಾನಿಕಾರಕ ವಸ್ತುಗಳು ಅಂಡಾಶಯಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಮತ್ತು ಹಾರ್ಮೋನುಗಳ ಸಮತೋಲನಕ್ಕೆ ಅಡ್ಡಿಯಾಗಬಹುದು.
ಧೂಮಪಾನಿಗಳಲ್ಲದವರಿಗೆ ಹೋಲಿಸಿದರೆ ಮಹಿಳಾ ಧೂಮಪಾನಿಗಳು ಗರ್ಭಪಾತವನ್ನು ಅನುಭವಿಸುವ ಹೆಚ್ಚಿನ ಸಾಧ್ಯತೆಯನ್ನು ಹೊಂದಿರುತ್ತಾರೆ. ಸಿಗರೇಟುಗಳ ವಿಷಕಾರಿ ಅಂಶಗಳು ಬೆಳೆಯುತ್ತಿರುವ ಗರ್ಭದ ಕಾರ್ಯಸಾಧ್ಯತೆಗೆ ತೊಡಕುಂಟು ಮಾಡಬಹುದು.
ಧೂಮಪಾನ ಮಾಡುವ ಯುವತಿಯರಲ್ಲಿ ಸಂತಾನೋತ್ವತ್ತಿ ಆರೋಗ್ಯ ಸಮಸ್ಯೆಗಳಲ್ಲಿ ಗಮನಾರ್ಹ ಏರಿಕೆಯನ್ನು ನಾವು ಗಮನಿಸುತ್ತಿದ್ದೇವೆ ಮತ್ತು ಈ ಪ್ರವೃತ್ತಿಯನ್ನು ನಾವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ವಿವಿಧ ಸಂತಾನೋತ್ವತ್ತಿ ಅಸ್ವತ್ಥತೆಗಳನ್ನು ಹೊಂದಿರುವ ಸುಮಾರು10% ಕ್ಕಿಂತ ಹೆಚ್ಚು ಮಹಿಳೆಯರು ನಿರಂತರ ಧೂಮಪಾನಿಗಳಾಗಿದ್ದಾರೆ. ಅನೇಕ ಮಹಿಳೆಯರು ಧೂಮಪಾನ ಮತ್ತು ಮದ್ಯಪಾನವನ್ನು ಒತ್ತಡ ನಿವಾರಕಗಳು ಎಂದು ಅಳವಡಿಸಿಕೊಳ್ಳುತ್ತಾರೆ. ಯುವತಿಯರಲ್ಲಿ ಧೂಮಪಾನವು ಅವರ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುವುದಲ್ಲದೆ, ಅವರ ಒಟ್ಟಾರೆ ಯೋಗಕ್ಷೇಮಕ್ಕೆ ನಿರ್ದೀಷ್ಟ ಮತ್ತು ಅಪಾಯಕಾರಿ ತೊಂದರೆಗಳನ್ನು ಉಂಟುಮಾಡುತ್ತದೆ.