ಧರ್ಮಸ್ಥಳದ ವಿರುದ್ಧ ಮಾಡ್ತಿರೋ ಅಪಪ್ರಚಾರದ ವಿರುದ್ಧ ಬಿಜೆಪಿ ಸಿಡಿದೆದ್ದಿದೆ. ಧರ್ಮಸ್ಥಳ ಚಲೋ ಮಾಡಿ ಬುರುಡೆ ಷಡ್ಯಂತ್ರದ ವಿರುದ್ಧ ಕಿಡಿಕಾರುತ್ತಲೇ ಇದೆ. ಇದ್ರ ಮಧ್ಯೆ ರಾಜ್ಯ ಬಿಜೆಪಿ ನಿಯೋಗ ನಿನ್ನೆ ದೆಹಲಿಯಾತ್ರೆ ಮಾಡಿದೆ. ಬಿಜೆಪಿ ನಿಯೋಗ ಮುಂದೆ ಷಡ್ಯಂತ್ರದ ವರದಿ ಒಪ್ಪಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನ ಭೇಟಿ ಮಾಡಿದೆ. ಧರ್ಮಸ್ಥಳದ ಪ್ರಕರಣವನ್ನ ಹೈ ನಾಯಕರಿಗೆ ಮಾಹಿತಿ ನೀಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದ ನಿಯೋಗ ‘ಹೈ ಕಮಾಂಡ್ ನಾಯಕರನ್ನ ಭೇಟಿ ಮಾಡಿ ವರದಿ ಸಲ್ಲಿಕೆ ಮಾಡಿದೆ. ಸಂಪೂರ್ಣ ವರದಿಯನ್ನ ಗೃಹ ಸಚಿವ ಅಮಿತ್ ಶಾಗೆ ಸಲ್ಲಿಸಿ ವಿವರಣೆ ನೀಡಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರೋ ಬೆಳವಣಿಗೆ ಹಾಗೂ ಧರ್ಮಸ್ಥಳ ಪ್ರಕರಣದ ಬಗ್ಗೆ ಬಿಜೆಪಿ ನಿಯೋಗ ಗೃಹ ಸಚಿವ ಅಮಿತ್ ಶಾಗೆ ಮಾಹಿತಿ ನೀಡಿದೆ. ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿರೋ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರವಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿರೋ ಬಗ್ಗೆ ಅಮಿತ್ ಶಾರಿಗೆ ಮಾಹಿತಿ ನೀಡಿದ್ದೇವೆ ಅಂತ ತಿಳಿಸಿದ್ದಾರೆ.