ಬೆಂಗಳೂರು: ಯಾರೂ ನಿರೀಕ್ಷೆ ಮಾಡದ ಸುದ್ದಿಯೊಂದು ಇಂದು ಬೆಳಗ್ಗೆ ಸ್ಫೋಟಗೊಂಡಿತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಕೊಲೆ ಕೇಸ್‌ನಲ್ಲಿ ದರ್ಶನ್ ಅರೆಸ್ಟ್ ಆಗಿದ್ದಾರೆ. ದರ್ಶನ್ ಜೊತೆ ಸಂಬಂಧ ಹೊಂದಿರುವ ಪವಿತ್ರಾ ಗೌಡ ಸಹ ಬಂಧನಕ್ಕೊಳಗಾಗಿದ್ದಾರೆ. ಅಸಲಿಗೆ, ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಪವಿತ್ರಾ ಗೌಡ ಆರೋಪಿ ನಂಬರ್ 1. ಇನ್ನೂ ದರ್ಶನ್ ಆರೋಪಿ ನಂಬರ್ 2. ಇವರಿಬ್ಬರನ್ನೂ ಸೇರಿಸಿ ಒಟ್ಟು 13 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಷ್ಟಕ್ಕೂ ಏನಿದು ಪ್ರಕರಣ? ಚಿತ್ರದುರ್ಗದ ರೇಣುಕಾ ಸ್ವಾಮಿಗೂ ನಟ ದರ್ಶನ್‌ಗೂ ಎಲ್ಲಿಗೆಲ್ಲಿಯ ಸಂಬಂಧ? ಕೊಲೆ ನಡೆದಿದ್ದು ಹೇಗೆ? ಕೊಲೆಗೂ ಮುನ್ನ ಏನೇನಾಯ್ತು? ಹತ್ಯೆ ಕೇಸ್‌ನ ಇಂಚಿಂಚೂ ಮಾಹಿತಿ ಇಲ್ಲಿದೆ ನೋಡಿ..
ಪವಿತ್ರಾ ಗೌಡಗೆ ಅಶ್ಲೀಲ ಸಂದೇಶಗಳು
ಕಳೆದ 10 ವರ್ಷಗಳಿಂದ ನಟ ದರ್ಶನ್ ಹಾಗೂ ಪವಿತ್ರಾ ಗೌಡ ನಡುವೆ ಸಂಬಂಧ ಇದೆ. ದರ್ಶನ್ – ವಿಜಯಲಕ್ಷ್ಮೀ ಮಧ್ಯೆ ಪವಿತ್ರಾ ಗೌಡ ಬಂದಿದ್ದಾರೆ ಅಂತ ಅಭಿಮಾನಿ ರೇಣುಕಾ ಸ್ವಾಮಿ ಕೆರಳಿದ್ದಾರೆ. ದರ್ಶನ್ – ವಿಜಯಲಕ್ಷ್ಮೀ ಸಂಸಾರದಲ್ಲಿ ಹುಳಿ ಹಿಂಡಿದ್ದು ಪವಿತ್ರಾ ಗೌಡ ಎಂಬ ಸಿಟ್ಟು, ಬೇಸರ ರೇಣುಕಾ ಸ್ವಾಮಿ ಅವರಲ್ಲಿತ್ತು. ಇದೇ ಕಾರಣಕ್ಕೆ ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಕೆಟ್ಟದಾಗಿ ಮೆಸೇಜ್‌ಗಳನ್ನ ಕಳುಹಿಸಿದ್ದರು. ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್‌ಗಳನ್ನು ಕಳುಹಿಸಿದ ಪರಿಣಾಮ ರೇಣುಕಾ ಸ್ವಾಮಿ ಹತ್ಯೆಯಾಗಿದೆ ಎನ್ನಲಾಗಿದೆ.
ಕೆರಳಿದ್ರಾ ದರ್ಶನ್?
ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್‌ಗಳನ್ನ ಕಳುಹಿಸಿದ ಸಲುವಾಗಿ ರೇಣುಕಾ ಸ್ವಾಮಿ ವಿರುದ್ಧ ದರ್ಶನ್ ಕೆರಳಿದ್ರಂತೆ. ಪರಿಣಾಮ, ಚಿತ್ರದುರ್ಗಕ್ಕೆ ದೂರವಾಣಿ ಕರೆ ಹೋಗಿದೆ. ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರಗೆ ರೇಣುಕಾ ಸ್ವಾಮಿ ಬಗ್ಗೆ ಪತ್ತೆ ಹಚ್ಚುವಂತೆ ಸೂಚಿಸಲಾಗಿದೆ. ರೇಣುಕಾ ಸ್ವಾಮಿ ಅವರನ್ನ ವಾಚ್ ಮಾಡಿ, ಫೋನ್ ನಂಬರ್ ಕಲೆಕ್ಟ್ ಮಾಡಿ, ಹುಡುಗಿಯಂತೆ ಕರೆ ಮಾಡಿ ಮಾತನಾಡಿ ನಿರ್ದಿಷ್ಟ ಜಾಗಕ್ಕೆ ಬರಲು ಸೂಚಿಸಲಾಗಿದೆ. ಅಲ್ಲಿಂದ ರೇಣುಕಾ ಸ್ವಾಮಿ ಅವರನ್ನ ಕಿಡ್ನ್ಯಾಪ್ ಮಾಡಲಾಗಿದೆ. ಆನಂತರ ಆಗಬಾರದ್ದು ಆಗಿಹೋಯ್ತು.
ರೇಣುಕಾ ಸ್ವಾಮಿ ಕೇಸ್ ಹಿಸ್ಟರಿ
10 AM: ರೇಣುಕಾಸ್ವಾಮಿಯನ್ನ ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆ ತಂದ ರಘು
12:20 AM : ಸ್ವಾಮಿ-ರಘು ಪಟ್ಟಣಗೆರೆ ಶೆಡ್ ಬಳಿ ಆಗಮನ
1 PM: ರೇಣುಕಾಸ್ವಾಮಿಯನ್ನು ಕೂಡಿಹಾಕಿ ಹಲ್ಲೆ ಆರಂಭ
3 PM: ರೇಣುಕಾಸ್ವಾಮಿಯಿದ್ದ ಶೆಡ್ಗೆ ದರ್ಶನ್ ಹಾಗೂ ಪವಿತ್ರಗೌಡ ಆಗಮನ
3 PM: ಸುಮಾರು 75 ನಿಮಿಷ ಶೆಡ್‌ನಲ್ಲಿದ್ದ ಪವಿತ್ರಗೌಡ ಹಾಗೂ ದರ್ಶನ್
– ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದ್ದ ದರ್ಶನ್
7 PM : ಪುನಃ ರೇಣುಕಾಸ್ವಾಮಿ ಮೇಲೆ ಹಲ್ಲೆ ಆರಂಭ
– ಮದ್ಯಪಾನ ಮಾಡುತ್ತಾ ರೇಣುಕಾಸ್ವಾಮಿಗೆ ಚಿತ್ರಹಿಂಸೆ
11 PM : ಸ್ವಾಮಿ ಸಾವು ಕುರಿತು ದರ್ಶನ್ಗೆ ಮಾಹಿತಿ
– 11 ಗಂಟೆಯಿಂದ 1 ಗಂಟೆಯವರೆಗೂ ಮೃತದೇಹ ಡಿಸ್ಪೋಸ್ ಬಗ್ಗೆ ಚಿಂತನೆ
ಭಾನುವಾರ ಏನೇನಾಯ್ತು..?
1 AM: ಶವ ಬಿಸಾಡಲು ಕಾರಿನಲ್ಲಿ ತೆರಳುವ ಆರೋಪಿಗಳು
– ಕಾಮಾಕ್ಷಿಪಾಳ್ಯದ ಮೋರಿಗೆ ಶವ ಎಸೆದು ಆರೋಪಿಗಳು ವಾಪಸ್
8 AM: ಅಪರಿಚಿತ ಶವದ ಬಗ್ಗೆ ಪೊಲೀಸರಿಗೆ ಮಾಹಿತಿ
9 AM: ಕೊಲೆ ಪ್ರಕರಣ ದಾಖಲಿಸಿ ಆರೋಪಿಯ ಪತ್ತೆಗೆ ಪ್ರಯತ್ನ
10 AM : ಆರೋಪಿಯೊಬ್ಬನಿಂದ ಹತ್ಯೆಯ ಬಗ್ಗೆ PSI ಒಬ್ಬರಿಗೆ ಮಾಹಿತಿ
11 AM : ಶರಣಾಗುವಂತೆ ಆರೋಪಿಗೆ PSI ಸೂಚನೆ
12 NOON : ಹತ್ಯೆಯಾಗಿರುವ ವ್ಯಕ್ತಿ ರೇಣುಕಾಸ್ವಾಮಿ ಎಂದು ಪತ್ತೆ
4 PM: ಮೂವರು ಕೊಲೆ ಆರೋಪಿಗಳಿಂದ ಶರಣಾಗತಿ
8 PM: ಇನ್ನೂ ನಾಲ್ವರು ಪೊಲೀಸರಿಗೆ ಶರಣಾಗತ
10 PM: ದರ್ಶನ್ ಮತ್ತು ಪವಿತ್ರಗೌಡ ಕೊಲೆಯಲ್ಲಿ ಭಾಗಿ ಮಾಹಿತಿ
ಸೋಮವಾರ ಏನೇನಾಯಿತು..?
1 AM : ಸಿಸಿಟಿವಿ ಹಾಗೂ ಟವರ್ ಡಂಪ್ ಸಂಗ್ರಹ
3 AM : ದರ್ಶನ್ ಮೊಬೈಲ್ ನಂಬರ್ ಆ ನೆಟ್‌ವರ್ಕ್ ಪತ್ತೆ
ಮಂಗಳವಾರ ಏನೇನಾಯಿತು..?
ಸಮಯ 4 AM: ಮೂವರು ಇಸ್‌ಪೆಕ್ಟರ್‌ಗಳ ತಂಡ ಮೈಸೂರಿಗೆ ಆಗಮನ
6.30 AM: ಮೈಸೂರಿನ ಹೋಟೆಲ್‌ನಲ್ಲಿ ದರ್ಶನ್ ಇರುವುದು ಪತ್ತೆ
7.30 AM: ದರ್ಶನ್ ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ
7:40 AM: ಜಿಮ್ ಮುಗಿಸಿ ಹೊಟೇಲ್‌ಗೆ ಬರುತ್ತಿದ್ದಾಗ ವಶಕ್ಕೆ
10.30 AM: ಮೈಸೂರಿಂದ ಅನ್ನಪೂರ್ಣೇಶ್ವರಿನಗರ ಠಾಣೆಗೆ ಕರೆತಂದ ಪೊಲೀಸರು
10.40 AM: ಡಿಸಿಪಿ ಗಿರೀಶ್ ಸ್ಟೇಷನ್‌ಗೆ ಅಗಮನ, ವಿಚಾರಣೆ ಆರಂಭ
11 AM: ಅಧಿಕೃತವಾಗಿ ನಟ ದರ್ಶನ್ ಬಂಧನ, FIR ದಾಖಲು
2 PM: ಪೊಲೀಸ್ ಸ್ಟೇಷನ್‌ಗೆ ಸರ್ಕಾರಿ ವೈದ್ಯರು ಆಗಮನ
3 PM: ಠಾಣೆಯಲ್ಲೇ ಸಾಂದರ್ಭಿಕ ಮೆಡಿಕಲ್ ಟೆಸ್ಟ್
4 PM: ಠಾಣೆಯಲ್ಲಿ 9 ಆರೋಪಿಗಳಿಗೆ ಮೆಡಿಕಲ್ ಟೆಸ್ಟ್
5.20 PM: ಬೌರಿಂಗ್ ಆಸ್ಪತ್ರೆಗೆ ದರ್ಶನ್ ಕರೆತಂದ ಪೊಲೀಸ್
5.50 PM: ಬೌರಿಂಗ್ ಆಸ್ಪತ್ರೆಯಲ್ಲಿ ವಿವಿಧ ವೈದ್ಯಕೀಯ ಪರೀಕ್ಷೆ
6.20 PM: ಕೋರ್ಟ್ ಮುಂದೆ ದರ್ಶನ್ & ಗ್ಯಾಂಗ್ ಹಾಜರು
6.30 PM: 14 ದಿನ ಕಸ್ಟಡಿಗೆ ಕೇಳಿದ ಪೊಲೀಸರು
7PM : 6ದಿನ ಪೊಲೀಸ್ ಕಸ್ಟಡಿಗೆ ವಹಿಸಿದ ನ್ಯಾಯಾಲಯ
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com


