ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಇತ್ತಿಚಿಗೆ ಕನ್ನಡ ಚಿತ್ರರಂಗವನ್ನ ಉದ್ದೇಶಿಸಿ ನೀಡಿದ ನಟ್ಟು-ಬೋಲ್ಟು ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರು, ಡಿ.ಕೆ.ಶಿವಕುಮಾರ್ ಬಳಸಿದ ಭಾಷೆ ಸರಿಯಲ್ಲ ಮತ್ತು ಅದನ್ನೆಲ್ಲ ಮಾತನಾಡಲು ಅದು ವೇದಿಕೆಯೂ ಅಲ್ಲ, ಒಂದು ಸಭೆಯನ್ನು ಕರೆದು ಅವರು ಹೇಳಬಹುದಿತ್ತು, ಕನ್ನಡ ಯಾರ ತಾತನ ಅಸ್ತಿಯೂ ಅಲ್ಲ, ಅದಕ್ಕೆ 2000 ವರ್ಷಗಳ ಇತಿಹಾಸ ಇದೆ. ಹಿಂದೆ ಗೋಕಾಕ್ ಚಳುವಳಿ ಸಮಯದಲ್ಲಿ ಕನ್ನಡ ಚಿತ್ರರಂಗ ಹೋರಾಟಕ್ಕಿಳಿದ ಬಳೀಕ ಸರ್ಕಾರವೇ ಉರುಳಿ ಬಿದ್ದಿತ್ತು, ಆಗ ಶಿವಕುಮಾರ್ ರಾಜಕೀಯದಲ್ಲಿದ್ದರೋ ಇಲ್ಲವೋ ಗೊತ್ತಿಲ್ಲ ಎಂದು ವ್ಯಂಗವಾಡಿದರು.


