ಬೆಳಗಾವಿ: ಮೋದಿಯವರನ್ನ ಪ್ರಧಾನಮಂತ್ರಿ ಸ್ಥಾನದಿಂದ ಕೆಳಗಡೆ ಇಳಿಸಿ ಎಂದು ನೇರವಾಗಿಯೇ ಬಿಜೆಪಿ ನಾಯಕರಿಗೆ ಸಚಿವ ಸಂತೋಷ ಲಾಡ್ ತಿರುಗೇಟು ನೀಡಿದ್ದಾರೆ. ಚಂದ್ರಬಾಬು ನಾಯ್ಡು ಅಥವಾ ನಿತಿನ್ ಗಡ್ಕರಿ ಪ್ರಧಾನಮಂತ್ರಿ ಆಗಲಿ ಎಂದೂ ಅವರು ಹೇಳಿದ್ದಾರೆ.
ಬೆಳಗಾವಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಎರಡು ವರ್ಷ ಆಯ್ತು ಈ ಮಾತು ಕೇಳುತ್ತಿದ್ದೇನೆ. ಸರ್ಕಾರ ಬಂದ ಮೂರನೇ ತಿಂಗಳಿನಿಂದ ಈ ಮಾತು ಆರಂಭವಾಗಿದೆ. ಈಗ ಎರಡು ವರ್ಷ ಅಂತೂ ಏನು ಆಗಿಲ್ಲ. ಪ್ರಧಾನಿ ನರೇಂದ್ರ ಮೋದಿ ವಿರುದ್ದ ಸಚಿವರು ಬೇಸರಗೊಂಡಿದ್ದಾರೆ. ನಮಗಿರುವ ಮಾಹಿತಿ ಪ್ರಕಾರ ಮುಂದೆ ಚಂದ್ರಬಾಬು ನಾಯ್ಡು ಅಥವಾ ನಿತೀನ್ ಗಡ್ಕರಿ ಪ್ರಧಾನಮಂತ್ರಿ ಅಗಬಹುದು ಎಂದು ಹೇಳಿದರು.