ಬೆಂಗಳೂರು: ಕರ್ನಾಟಕದ ಹೆಮ್ಮೆಯ ನಂದಿನಿ ಬ್ರ್ಯಾಂಡ್ ಈ ವರ್ಷ ದಸರಾ ಮತ್ತು ದೀಪಾವಳಿಗೆ 1,100 ಟನ್ ಸಿಹಿತಿಂಡಿಗಳನ್ನು ಮಾರಾಟ ಮಾಡಿ ದಾಖಲೆ ಬರೆದಿದೆ.. ಇದರಿಂದಾಗಿ 46 ಕೋಟಿ ರೂಪಾಯಿ ವ್ಯವಹಾರ ನಡೆದಿದೆ ಎಂದು ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ತಿಳಿಸಿದ್ದಾರೆ.
ದಸರಾ ಮತ್ತು ದೀಪಾವಳಿಯ ಸಮಯದಲ್ಲಿ ಪ್ರತಿ ವರ್ಷ ಸಿಹಿತಿಂಡಿಗಳಿಗೆ ಭಾರಿ ಬೇಡಿಕೆ ಇರುತ್ತದೆ. ನಂದಿನಿ ಬ್ರಾಂಡ್ ಅಡಿಯಲ್ಲಿ 40 ಕ್ಕೂ ಹೆಚ್ಚು ಬಗೆಯ ಸಿಹಿತಿಂಡಿಗಳನ್ನು ಮಾರಾಟ ಮಾಡಲು ಕೆಎಂಎಫ್ ಮುಂಚಿತವಾಗಿಯೇ ಸಿದ್ಧತೆಗಳನ್ನು ಮಾಡಿಕೊಂಡಿತ್ತು ಎಂದು ವೆಂಕಟೇಶ್ ತಿಳಿಸಿದರು. 2024 ರಲ್ಲಿ, ಹಬ್ಬದ ಋತುವಿನಲ್ಲಿ 724 ಟನ್‌ಗಳಿಗೂ ಹೆಚ್ಚು ಸಿಹಿತಿಂಡಿಗಳು ಮಾರಾಟವಾಗಿದ್ದು, ಇದರ ಪರಿಣಾಮವಾಗಿ 33.48 ಕೋಟಿ ರೂಪಾಯಿ ವ್ಯವಹಾರ ನಡೆದಿದೆ.
ನಾವು 1000 ಟನ್ ಸಿಹಿತಿಂಡಿಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿ ಬಹಳ ಮೊದಲೇ ತಯಾರಿಸಲು ಪ್ರಾರಂಭಿಸಿದ್ದೆವು. ನಾವು ನಮ್ಮ ಗುರಿಯನ್ನು ದಾಟಿದ್ದೇವೆ. ಈ ವರ್ಷ, 46 ಕೋಟಿ ರೂಪಾಯಿ ಮೌಲ್ಯದ 1100 ಟನ್ ಸಿಹಿತಿಂಡಿಗಳು ಮಾರಾಟವಾಗಿವೆ, ಇದು ಹಿಂದಿನ ವರ್ಷಕ್ಕಿಂತ ಶೇಕಡಾ 38 ರಷ್ಟು ಹೆಚ್ಚಾಗಿದೆ. ಇದು ಒಂದು ದಾಖಲೆಯಾಗಿದೆ ಎಂದು ಹೇಳಿದರು.


