ಇದು ಡಿಸಿಎಂ ಡಿ.ಕೆ .ಶಿವಕುಮಾರ್ ಕುರಿತ ಇಂಟರೆಸ್ಟಿಂಗ್ ಸ್ಟೋರಿ ಅತ್ತ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ..ಇತ್ತ ಡಿಸಿಎಂ ಡಿಕೆಗೆ ಅಪನಿಂದೆ ದುಡಿದಿದ್ದಕ್ಕೆ ಕೂಲಿ ಇಲ್ಲ, ಆದರೆ ಹೆಜ್ಜೆ ಹೆಜ್ಜೆಗೂ ಡಿಕೆಗೆ ಮಾನಹಾನಿ ವಿರೋಧಿಗಳಿಂದ ನಿತ್ಯ ಕಿರಿಕಿರಿ…ವೈರಿ ಕುಮಾರಸ್ವಾಮಿಯಿಂದ ನಿತ್ಯ ಪ್ರಹಾರ ನೋವಿನ ಮಡುವಿನಲ್ಲಿರುವ ಡಿಕೆಶಿಗೆ ಮೋದಿ ಟೀಂ ನಿಂದ ಬಿಗ್ ಆಫರ್ ಫ್ರೀಡಂ ಟಿವಿ ಬಿಚ್ಚಿಡುತ್ತೆ ಡಿಸಿಎಂ ಡಿಕೆಗೆ ಬಂದಿರುವ ಬಿಗ್ ಆಫರ್ ನ ಸೀಕ್ರೆಟ್
ಡಿಕೆ ಶಿಗೆ ಶತೃಬಾಧೆ
ವಿರೋಧಿಗಳಿಂದ ನಿತ್ಯ ಕಿರಿಕಿರಿ…ವೈರಿ ಕುಮಾರಸ್ವಾಮಿಯಿಂದ ನಿತ್ಯ ಪ್ರಹಾರ ಪಕ್ಷಕ್ಕಾಗಿ ಸರ್ವಸ್ವ ಧಾರೆ ಎರೆದ ಡಿಕೆಗೆ ನಿತ್ಯ ವಿರೋಧಿಗಳಿಂದ ಅವಮಾನ ಪಕ್ಷ ಗೆಲ್ಲಿಸಿದರೂ ಸಿಗದ ಅಧಿಕಾರ, ಡಿಕೆಗೆ ಬರ್ತಿವೆ ಆಫರ್ ಮೇಲೆ ಆಫರ್
ನೋವಿನ ಮಡುವಿನಲ್ಲಿರುವ ಡಿಕೆಶಿಗೆ ಮೋದಿ ಟೀಂ ನಿಂದ ಬಿಗ್ ಆಫರ್ ಪಕ್ಷ ಗೆಲ್ಲಿಸಿದ್ದ ಡಿಕೆ ಸಿಎಂ ಆಗಲೇಬೆಂದು ಪಟ್ಟು ಹಾಕಿದ್ದರು ಆದರೆ ಸಿದ್ದರಾಮಯ್ಯ ರ ಪರ ಹೈಕಮಾಂಡ್ ನಿಂತಿತ್ತು ಈ ವೇಳೆ ಸೆಕೆಂಡ್ ಟರ್ಮ್ ನಿಮಗೆ ಪಟ್ಟ ಎಂದು ಹೇಳಿತ್ತು
ಈವರೆಗೆ ಎರಡೂವರೆ ವರ್ಷದ ಬಳಿಕ ಸಿಎಂ ಹುದ್ದೆ ಸಿಗುವ ವಿಶ್ವಾಸ ಇತ್ತು ಆದರೆ ಸಿದ್ದರಾಮಯ್ಯ ಮುಡಾ ಕೇಸಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಅವರು ರಾಜೀನಾಮೆ ಕೊಟ್ಟರೆ ಡಿಕೆಗೆ ಅಧಿಕಾರ ಸಿಗುತ್ತೆ ಅನ್ನೋ ಚರ್ಚೆ ಇದೆ ಆದರೆ ಈ ಹೊತ್ತಲ್ಲಿ ಡಿಕೆ ವಿರೋಧಿಗಳು ಫೀಲ್ಡಿಗೆ ಇಳಿದಿದ್ದಾರೆ.
ಡಿಕೆಗೆ ನಿತ್ಯ ಅಪನಿಂದೆ
ಸಿದ್ದುಗೆ ಬಂದಿರುವ ಸಂಕಷ್ಟಕ್ಕೆ ಡಿಕೆ ಕಾರಣ ಎಂದು ವಿರೋಧಿಗಳ ಹುಯಿಲು ಡಿಕೆಯೇ ಮಾಡಿಸಿದ್ದಾರೆಂದು HDK ನಿತ್ಯ ಆರೋಪ ಹೇಗಾದರೂ ಮಾಡಿ ಡಿಕೆಗೆ ಅಧಿಕಾರ ತಪ್ಪಿಸಲು ಕುಮಾರಸ್ವಾಮಿ ಯತ್ನ ಜತೆಗೆ ಪಕ್ಷದ ಕೆಲ ನಾಯಕರಿಂದಲೂ ಡಿಕೆ ವಿರುದ್ಧ ಷಡ್ಯಂತ್ರ ಡಿಕೆಗೆ ನ್ಯಾಯುತವಾಗಿ ಸಿಗಬೇಕಾದ ಸಿಎಂ ಗಾದಿಗೆ ಅಡ್ಡಗಾಲು ಅವಕಾಶ ಸಿಕ್ಕರೆ ತಮಗೆ ಸಿಗಲಿ ಎಂದು ಹಲವರ ಯತ್ನ ಡಿಕೆಗೆ ಡ್ಯಾಮೇಜ್ ಮಾಡಲು ಈ ನಾಯಕರ ಯತ್ನ ಯಾರಾದರೂ ಚಿಂತೆಯಿಲ್ಲ ಡಿಕೆ ಆಗಬಾರದು ಅನ್ನೋ ತಂತ್ರ.
ಮಹಾರಾಷ್ಟ್ರದಲ್ಲಿ ಹೀರೋ ಆದ ಡಿಕೆ
ಮಹಾರಾಷ್ಟ್ರ ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಾದ ದಂಗೆ ವೇಳೆ ಹೀರೋ ಆದರು ಟ್ರಬಲ್ ಶೂಟರ್ ಆಗಿ ಅಲ್ಲಿಗೆ ಎಂಟ್ರಿಕೊಟ್ಟ ಡಿಕೆ ಶಿವಕುಮಾರ್ ಸಮರ್ಥವಾಗಿ ಎದುರಿಸಿದ್ದರು ಆ ನಂತರ ಸೋನಿಯಾಜಿ ಅವರಿಗೆ ನೆಚ್ವಿನ ಯುವ ನಾಯಕ ಆಗಿ ಹೊಮ್ಮಿದರು ಆ ನಂತರ ಪಕ್ಷ ಅಧಿಕಾರಕ್ಕೆ ಬಂದ ಎಲ್ಲಾ ಸಮಯದಲ್ಲೂ ಮಂತ್ರಿಯಾಗಿದ್ದ ಡೀಕೆ ಎರಡು ಸಾವಿರದ ಹದಿನೆಂಟರಲ್ಲಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬಂತು ಆಗ ಕುಮಾರಸ್ವಾಮಿಯ ಮುಖ್ಯಮಂತ್ರಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಕುಮಾರಣ್ಣನ ವೆಸ್ಟ್ಎಂಡ್ ಹೋಟೆಲ್ ರಾಜಕಾರಣ ಅವತ್ತು ಸಮ್ಮಿಶ್ರ ಸರ್ಕಾರವನ್ನಬೀಳಿಸಿತ್ತು ಆದರೂ,ಅವತ್ತು ರಾಜ್ಯ ರಾಜಕಾರಣದಲ್ಲಿ ಡಿಕೆ ಎಚ್ ಡಿ ಕೆ ಜೋಡೆತ್ತು ಆಗಿದ್ದು ಸುಳ್ಳಲ್ಲ.
ಒಕ್ಕಲಿಗರ ಮನಗೆದ್ದು-136 ಸೀಟು
ಮುಂದೆ ಸಮ್ಮಿಶ್ರ ಸರ್ಕಾರ ಹೋಗಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದರು ಕೂಡಲೇ ಕಾಂಗ್ರೆಸ್ ಅಧ್ಯಕ್ಷ ಗಿರಿ ಒಲಿದುಬಂದಿದ್ದು ಒನ್ಸ್ ಎಗೈನ್ ಡಿಕೆಯವರ ಬಳಿಗೆ ನಿಜ! ಅವತ್ತು ಕಷ್ಟ ಕಾಲದಲ್ಲಿದ್ದ ಪಕ್ಷಕ್ಕೆ ಉಸಿರು ತುಂಬಿದವರೇ ಡಿಕೆ
ಸಿದ್ಧರಾಮಯ್ಯ ಇದ್ದರು ಅವರ ಜೊತೆ ಕೈ ಜೋಡಿಸಿ ಪಕ್ಷ ಸಂಘಟಿಸಿದ್ದರು. ರಾಜ್ಯದ್ಯಾಂತ ಪ್ರತಿ ಕ್ಷೇತ್ರದಲ್ಲೂ ಗೆಲ್ಲುವ ಅಭ್ಯರ್ಥಿಗಳದೊಂದು ಪಟ್ಟಿ ತಯಾರಿಸಿದ್ದರು ಅವರಿಗೆ ಟಾಸ್ಕ್ ಕೊಟ್ಟು ಗುರಿ ಮುಟ್ಟಿದವರಿಗೆ ಮಾತ್ರ ಟಿಕೆಟ್ ಎಂದು ಘೋಷಿಸಿದ್ದರು ಯಾರಿಗೆ ಟಿಕೆಟ್ ಕೊಟ್ಟರು ಒಟ್ಟಾಗಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯವನ್ನು ಸುತ್ತಿದರು ಹಣ ಖರ್ಚು ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು ಹಳೇ ಮೈಸೂರು ಭಾಗದ ಬಹುಸಂಖ್ಯಾತ ಒಕ್ಕಲಿಗರಮುಂದೆ ಶಿರಬಾಗಿ ನಿಂತರು ನನಗೊಮ್ಮೆ ಸಿಎಂ ಆಗಲು ಅವಕಾಶ ಕೊಡಿ ತನ್ನ ಸಮುದಾಯಕ್ಕೆ ಕೋರಿದರು ಈ ಶಿವಕುಮಾರ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸುತ್ತಾನೆ
ಅಧಿಕಾರ ಸಿಕ್ಕ ತಕ್ಷಣ ನಾನು ಫೈವ್ ಸ್ಟಾರ್ ಹೋಟೆಲ್ ನಲ್ಲಿರುವುದಿಲ್ಲ ನಿಮ್ಮ ಮಧ್ಯೆ ಇರುತ್ತೇನೆ ಎಂದಿದ್ದರು ಶಿವಕುಮಾರ ಎಂಬ ಕನಕಪುರದ ಬಂಡೆ ಈಗ ಉಳಿ ಏಟು ತಿಂದು ಪೂಜಿಸುವ ಮೂರ್ತಿಯಾಗಿದೆ ಇಡಿ ಚಕ್ರಸುಳಿಯಲ್ಲಿ ಸಿಲುಕಿ ತಿಹಾರ್ ಜೈಲಿನ ಕಷ್ಟದ ದಿನಗಳ ಬಗ್ಗೆ ಹೇಳಿ ಒಕ್ಕಲಿಗರ ಮನಗೆದ್ದರು ಶಿವಕುಮಾರರ ಇಂಥ ಮಾತಿನಿಂದಲೇ ಹಳೇ ಮೈಸೂರಿನ ಒಕ್ಕಲಿಗರು ಕಾಂಗ್ರೆಸ್ ಕೈ ಹಿಡಿದಿದ್ದರು 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ನೂರಾ ಮೂವತ್ತಾರು ಸೀಟುಗಳು ಈ ಮೂಲಕ ನಿರಾಯಾಸವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು.
ನೋವು ನುಂಗಿದ ಡಿಕೆ
ಅತನ್ನ ಅಧ್ಯಕ್ಷತೆಯಲ್ಲಿ ಪಕ್ಷ ಗೆದ್ದಾಗ ತಾನು ಸಿಎಂ ಆಗ್ತೇನೆ ಎಂದುಕೊಂಡಿದ್ದ ಡಿಕೆ ಆದರೆ ಅವತ್ತು ಮುಖ್ಯಮಂತ್ರಿಯಾಗಿದ್ದು once again ಸಿದ್ದರಾಮಯ್ಯನವರೇ ಅವತ್ತು ಕೂಡ ಶಿವಕುಮಾರ್ ತ್ಯಾಗ ಜೀವಿಯಾಗಿ ನೋವು ನುಂಗಿಕೊಂಡರು
ಹೈಕಮಾಂಡ್ ಆಡಿದ ಸಾಂತ್ವನದ ಮಾತಿಗೆ ಸಿಎಂ ಪಟ್ಟ ಒಲಿದು ಬರಬಹುದೆಂದು ಸುಮ್ಮನಾದರು. ಎರಡುವರೆ ವರ್ಷ ಆಡುತ್ತಾ ಬರುತ್ತದೆ ಎಂದು ಕಾಯಲು ತೊಡಗಿದರು ಈಗ ಪಕ್ಷದ ಕೆಲವರು ಶಿವಕುಮಾರರಿಗೆ ಸಿಎಂ ಕುರ್ಚಿ ದಕ್ಕದಂತೆ ಮಸಲತ್ತು ನಡೆಸುತ್ತಿದ್ದಾರೆ ಒಂದೆಡೆ ಕಡೆ ಸಿದ್ದರಾಮಯ್ಯರನ್ನು ಮುಡಾ ಚಕ್ರಸುಳಿಯಿಂದ ಹೊರತರಲು ಶಿವಕುಮಾರ್ ಹೋರಾಡುತ್ತಿದ್ದರೆ ಕಾಂಗ್ರೆಸ್ ಸಚಿವರು ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎನ್ನುತ್ತಿದ್ದಾರೆ
ಅಲ್ಲಿಗೆ ಶಿವಕುಮಾರರಿಗೆ ಸಿಎಂ ಕುರ್ಚಿ ಕನಸಿನ ಮಾತು ಎನ್ನುತ್ತಿದ್ದಾರೆ ಇದು ಶಿವಕುಮಾರರ ಹಿಂದೆ ಇರುವ ಲಕ್ಷಾಂತರ ಕಾರ್ಯಕರ್ತರ ನಿದ್ದೆಗೆಡಿಸಿದೆ ಈ ಬಾರಿ ಇಲ್ಲದಿದ್ದರೆ ಇನ್ಯಾವತ್ತು ಅಣ್ಣ ಅವರು ಮುಖ್ಯಮಂತ್ರಿಯಾಗಲಾರರು ಎಂಬುದು ಅವರ ನಂಬಿಕೆ ಹಾಗಾಗಿ ಅವರೆಲ್ಲಾ ಶಿವಕುಮಾರರ ಮೇಲೆ ಒತ್ತಡ ಹಾಕಲು ಶುರು ಮಾಡಿದ್ದಾರೆ ಶಿವಕುಮಾರ್ ಸಾಹೇಬರಿಗೆ ಈಗ ಅತ್ತ ದರಿ ಇತ್ತ ಪುಲಿ ಎನ್ನು ವ ಕಾಲ