Thursday, May 1, 2025
25.2 C
Bengaluru
LIVE
ಮನೆಕ್ರಿಕೆಟ್RCB ತಂಡದ ಇಬ್ಬರು ಆಟಗಾರರಿಗೆ ಇಂದು ಜನುಮದಿನ

RCB ತಂಡದ ಇಬ್ಬರು ಆಟಗಾರರಿಗೆ ಇಂದು ಜನುಮದಿನ

ಆರ್​ಸಿಬಿ ತಂಡದ ಇಬ್ಬರು ಸ್ಟಾರ್ ಆಟಗಾರರು ಇಂದು ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಡಿಕೆ ಖ್ಯಾತಿಯ ಕೃಷ್ಣಕುಮಾರ್ ದಿನೇಶ್ ಕಾರ್ತಿಕ್ ಅವರು ಇಂದು 39ನೇ ವರ್ಷಕ್ಕೆ ಕಾಲಿಟ್ಟರೆ, ರಜತ್ ಪಾಟಿದಾರ್ 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1 ಜೂನ್ 1993 ರಲ್ಲಿ ರಜತ್ ಪಾಟಿದಾರ್ ಮಧ್ಯಪ್ರದೇಶದಲ್ಲಿ ಜನಿಸಿದ್ದರು. ಇನ್ನು 1985 ರಲ್ಲಿ ಡಿಕೆ ಇದೇ ದಿನಾಂಕದಂದು ಚೆನ್ನೈನಲ್ಲಿ ಹುಟ್ಟಿದ್ದರು. ಇದೀಗ ಇಬ್ಬರು ಆಟಗಾರರು ಒಂದೇ ದಿನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಆರ್​ಸಿಬಿ ಅಭಿಮಾನಿಗಳು ಜನ್ಮದಿನ ಶುಭ ಕೋರುತ್ತಿದ್ದಾರೆ

ಈ ಬಾರಿಯ ಐಪಿಎಲ್​ನಲ್ಲಿ ರಜತ್ ಪಾಟಿದಾರ್ ಹಾಗೂ ದಿನೇಶ್ ಕಾರ್ತಿಕ್ ಆರ್​ಸಿಬಿ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದರು. 15 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಪಾಟಿದಾರ್ 5 ಅರ್ಧಶತಕಗಳೊಂದಿಗೆ 395 ರನ್ ಬಾರಿಸಿ ಮಿಂಚಿದ್ದರು

ಮತ್ತೊಂದೆಡೆ ಆರ್​ಸಿಬಿ ಪರ ಫಿನಿಶರ್ ಆಗಿ ಅಬ್ಬರಿಸಿದ್ದ ದಿನೇಶ್ ಕಾರ್ತಿಕ್ 15 ಇನಿಂಗ್ಸ್​ಗಳಲ್ಲಿ 2 ಅರ್ಧಶತಕಗಳೊಂದಿಗೆ ಒಟ್ಟು 326 ರನ್ ಚಚ್ಚಿದ್ದರು. ಈ ಮೂಲಕ ಆರ್​ಸಿಬಿ ತಂಡವು ಪ್ಲೇಆಫ್​ಗೆ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

https://twitter.com/RCBTweets/status/1796730889969471564?ref_src=twsrc%5Etfw%7Ctwcamp%5Etweetembed%7Ctwterm%5E1796730889969471564%7Ctwgr%5Ef532da52d11089563008764c6fc802294e6c48ea%7Ctwcon%5Es1_&ref_url=https%3A%2F%2Ftv9kannada.com%2Fsports%2Fcricket-news%2Frcbs-dinesh-karthik-and-rajat-patidar-birthday-zp-842336.html

ದಿನೇಶ್ ಕಾರ್ತಿಕ್ ವಿದಾಯ:

ಈ ಬಾರಿಯ ಐಪಿಎಲ್​ನೊಂದಿಗೆ ದಿನೇಶ್ ಕಾರ್ತಿಕ್ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ವಿದಾಯ ಹೇಳಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದ ಬಳಿಕ ಡಿಕೆ ತಮ್ಮ ನಿವೃತ್ತಿಯನ್ನು ಘೋಷಿಸಿದ್ದು, ಹೀಗಾಗಿ ಮುಂದಿನ ಸೀಸನ್​ನಲ್ಲಿ ದಿನೇಶ್ ಕಾರ್ತಿಕ್ ಕಾಣಿಸಿಕೊಳ್ಳುವುದಿಲ್ಲ.

ಐಪಿಎಲ್​ನಲ್ಲಿ ಒಟ್ಟು 257 ಪಂದ್ಯಗಳನ್ನಾಡಿರುವ ದಿನೇಶ್ ಕಾರ್ತಿಕ್ 22 ಅರ್ಧಶತಕಗಳೊಂದಿಗೆ ಒಟ್ಟು 4842 ರನ್ ಕಲೆಹಾಕಿದ್ದಾರೆ. ಈ ವೇಳೆ 97 ರನ್ ಬಾರಿಸಿದ್ದು ಅವರ ಗರಿಷ್ಠ ಸ್ಕೋರ್. ಇದಲ್ಲದೆ ಧೋನಿ ಬಳಿಕ ಅತೀ ಹೆಚ್ಚು ಪಂದ್ಯವಾಡಿದ ವಿಕೆಟ್ ಕೀಪರ್ ಎಂಬ ದಾಖಲೆ ಕೂಡ ದಿನೇಶ್ ಕಾರ್ತಿಕ್ ಹೆಸರಿನಲ್ಲಿದೆ. ಈ ಎಲ್ಲಾ ದಾಖಲೆಗಳೊಂದಿಗೆ ಇದೀಗ ಡಿಕೆ ಐಪಿಎಲ್​ಗೆ ವಿದಾಯ ಹೇಳಿದ್ದಾರೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments