Sportsಕ್ರಿಕೆಟ್ರಾಜ್ಯ

ಬೆಂಗಳೂರಿನಲ್ಲಿ ಮಧ್ಯಾಹ್ನ RCB ಟೀಂ ವಿಜಯಯಾತ್ರೆ..!

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಚಾಂಪಿಯನ್ RCB ತಂಡ ಇಂದು ಬೆಂಗಳೂರಿನಲ್ಲಿ ವಿಜಯಯಾತ್ರೆ ನಡೆಸಲಿದೆ. ಅಹಮದಾಬಾದ್​ನಿಂದ ಆರ್​ಸಿಬಿ ಟೀಂ ವಿಶೇಷ ವಿಮಾನದ ಮೂಲಕ ಮಧ್ಯಾಹ್ನ 1.30 ಕ್ಕೆ ಬೆಂಗಳೂರಿಗೆ ಆಗಮಿಸಲಿದೆ. ಬಳಿಕ ತಾಜ್​ ವೆಸ್ಟೆಂಡ್ ಹೋಟೆಲ್​​​​ಗೆ ತೆರಳಿ ಕೆಲ ಕಾಲ ವಿರಮಿಸಲಿದ್ದಾರೆ

ಸಂಜೆ 3.30 ಕ್ಕೆ ಬೆಂಗಳೂರಿನ ವಿಧಾನಸೌಧಕ್ಕೆ ಆಗಮಿಸಲಿರುವ ಆರ್​ಸಿಬಿ ಟೀಂ, ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲಿದ್ದಾರೆ. ಇದಾದ ಬಳಿಕ ಸಂಜೆ 4 ಗಂಟೆ ಬಳಿಕ ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೂ ತೆರೆದ ವಾಹನದಲ್ಲಿ ವಿಜಯ ಯಾತ್ರೆ ನಡೆಸಲಿದ್ದಾರೆ.

ಆರ್​ಸಿಪಿ ಟೀಂನ ಈ ವಿಕ್ಟರಿ ಪರೇಡ್​​ನಲ್ಲಿ ಲಕ್ಷಾಂತರ ಅಭಿಮಾನಿಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ. ಇದಾದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ಟೀಂ ಸಂಭ್ರಮಾಚರಣೆ ನಡೆಸಿ ಗೆದ್ದು ತಂದ ಟ್ರೋಫಿಯನ್ನ ಪ್ರದರ್ಶಿಸಲಿದ್ದಾರೆ.

Comments (0)

Your email address will not be published. Required fields are marked *

Back to top button