Thursday, November 20, 2025
22.5 C
Bengaluru
Google search engine
LIVE
ಮನೆಕ್ರಿಕೆಟ್ಬೆಂಗಳೂರಿಗೆ ಬಂದಿಳಿದ ಆರ್​ಸಿಬಿ ಆಟಗಾರರಿಗೆ ಭರ್ಜರಿ ಸ್ವಾಗತ

ಬೆಂಗಳೂರಿಗೆ ಬಂದಿಳಿದ ಆರ್​ಸಿಬಿ ಆಟಗಾರರಿಗೆ ಭರ್ಜರಿ ಸ್ವಾಗತ

ಬೆಂಗಳೂರು: ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು ಮಣಿಸಿ ಇಂದು ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​ಗೆ ಆಗಮಿಸಿರುವ ಆರ್​ಸಿಬಿ ಆಟಗಾರರನ್ನು ಅಭಿಮಾನಿಗಳು ಅತ್ಯುತ್ಸಾಹದಲ್ಲಿ ಸ್ವಾಗತಿಸಿದರು.

ಸಿಲಿಕಾನ್ ಸಿಟಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆರ್​ಸಿಬಿ ಆಟಗಾರರು ಬರುತ್ತಾರೆಂದು ಸಾವಿರಾರು ಅಭಿಮಾನಿಗಳು ಮೊದಲೇ ಸೇರಿದ್ದರು. ಆಟಗಾರರೆಲ್ಲಾ ವಿಮಾನ ನಿಲ್ದಾಣಕ್ಕೆ ಬಂದು ಇಳಿಯುತ್ತಿದ್ದಂತೆ ಆರ್​ಸಿಬಿ ಅಭಿಮಾನಿಗಳ ಉತ್ಸಾಹ ಹೇಳತೀರದಂತೆ ಆಗಿತ್ತು. ವಿಮಾನ ನಿಲ್ದಾಣದ ಟರ್ಮಿನಲ್- 1ಕ್ಕೆ ಆಗಮಿಸಿದ ರಜತ್ ಪಾಟಿದಾರ್ ಪಡೆಗೆ ಜೈಕಾರಗಳು ಮೊಳಗಿದವರು. ಆರ್​​ಸಿಬಿ. ಆರ್​​ಸಿಬಿ ಚಾಂಟ್ಸ್​ ಎಲ್ಲರನ್ನು ಆಕರ್ಷಿಸಿತು. ಶಿಳ್ಳೆ, ಕೇಕೆ ವಿಮಾನ ನಿಲ್ದಾಣದಲ್ಲಿ ಕೇಳಿ ಬಂದವು

ಇನ್ನು ಆರ್​ಸಿಬಿ ಅಭಿಮಾನಿಗಳ ಸಂತಸ ಕಂಡು ಬೆರಗಾದ ಎಲ್ಲ ಆಟಗಾರರು ಫ್ಯಾನ್ಸ್​ ಕಡೆಗೆ ಕೈಬೀಸಿ ಚೀಯರ್ಸ್ ಮಾಡಿದರು. ನಗುವಿನಿಂದಲೇ ಎಲ್ಲರಿಗೂ ಪ್ಲೇಯರ್ಸ್​ ಧನ್ಯವಾದ ಅರ್ಪಿಸಿದರು. ಇನ್ನು ಆರ್​ಸಿಬಿಯ ಮುಂದಿನ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಏಪ್ರಿಲ್ 2 ರಂದು ಗುಜರಾತ್ ಟೈಟನ್ಸ್​ ವಿರುದ್ಧ ನಡೆಯಲಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments