Thursday, November 20, 2025
19.9 C
Bengaluru
Google search engine
LIVE
ಮನೆಮನರಂಜನೆಕಲರ್ಸ್ ಕನ್ನಡದ ‘ಗಂಧದ ಗುಡಿ’ ಧಾರವಾಹಿಯಲ್ಲಿ ರವಿ ಕಾಳೆ

ಕಲರ್ಸ್ ಕನ್ನಡದ ‘ಗಂಧದ ಗುಡಿ’ ಧಾರವಾಹಿಯಲ್ಲಿ ರವಿ ಕಾಳೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಶ್ರೀ ಗಂಧದ ಗುಡಿ’ ಧಾರವಾಹಿಯಲ್ಲಿ ಶಿಶಿರ್ ಶಾಸ್ತ್ರಿ, ಭವಿಷ್ ಗೌಡ, ಸಂಜನಾ ಬುರ್ಲಿ ಸೇರಿದಂತೆ ದೊಡ್ಡ ತಾರಾಬಳಗ ಹೊಂದಿದೆ. ‘ಶ್ರೀ ಗಂಧದ ಗುಡಿ’ ಸೀರಿಯಲ್​​ ಗೆ ಇದೀಗ ಭಾರತೀಯ ಚಿತ್ರರಂಗದ ಪ್ರಸಿದ್ಧ ಪೋಷಕ ನಟ ರವಿ ಕಾಳೆ ಸೇರ್ಪಡೆಯಾಗಿದ್ದಾರೆ.

ಭಾರತೀಯ ಚಿತ್ರರಂಗದ ಪ್ರಸಿದ್ಧ ಪೋಷಕ ನಟ ರವಿ ಕಾಳೆ ‘ಶ್ರೀಗಂಧದಗುಡಿ’ ಧಾರಾವಾಹಿಯಲ್ಲಿ ಗೌರವ ನಟರಾಗಿ ಕಾಣಿಸಿಕೊಳ್ಳಲಿದ್ದಾರೆ. ‘ಶ್ರೀಗಂಧದಗುಡಿ’ ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದ್ದು ಪ್ರತಿದಿನ ರಾತ್ರಿ 8ಕ್ಕೆ ಪ್ರಸಾರವಾಗುತ್ತಿದೆ.

ಟರ್ನಿಂಗ್ ಪಾಯಿಂಟ್ ಕಾಳೆ

ಶ್ರೀ ಗಂಧದ ಗುಡಿ ಧಾರಾವಾಹಿಯ ಕತೆಯು ಅತ್ಯಂತ ಕುತೂಹಲದ ಘಟ್ಟ ತಲುಪಿದೆ. ಚಂದನಾ ಹರಿಗೆ ತಾನು ಈ ಮನೆಯಲ್ಲಿ ಇರಲಾಗುವುದಿಲ್ಲ ಮತ್ತು ತನ್ನ ಗುರಿಗಳನ್ನು ಸಾಧಿಸಲು ಬೆಂಗಳೂರಿಗೆ ಹೋಗಬೇಕೆಂದು ಹೇಳುತ್ತಾಳೆ. ಆಕೆ ಹರಿಯ ಸಹಾಯ ಕೇಳುತ್ತಾಳೆ. ಹರಿ ಆಕೆಗೆ ರಾತ್ರಿ ಹೋಗುವಂತೆ ಹೇಳುತ್ತಾನೆ. ಮತ್ತು ತಾನೇ ಕರೆದುಕೊಂಡು ಹೋಗುವುದಾಗಿ ಹೇಳುತ್ತಾನೆ. ಆದರೆ ಬೆಂಗಳೂರಿಗೆ ಹೊರಡುವ ಮಾರ್ಗದಲ್ಲಿ ಚಂದನಾ ಮಾಡಿದ ಒಂದು ತಪ್ಪಿನಿಂದ ಕುಟುಂಬಕ್ಕೆ ಆಕೆ ಮನೆ ಬಿಟ್ಟಿರುವುದು ಗೊತ್ತಾಗುತ್ತದೆ. ಇದರಿಂದ ಚಂದನಾರ ಹುಡುಕಾಟ ಆರಂಭವಾಗುತ್ತದೆ. ಚಂದನಾ ಅವರ ತಂದೆ ಮಹಾಬಲ ತನ್ನ ಸಂಪರ್ಕ ಬಳಸಿ ದಾಳಿ ಮಾಡುತ್ತಾನೆ. ತನ್ನನ್ನು ರಕ್ಷಿಸಿಕೊಳ್ಳಲು ಹರಿ ಪೊಲೀಸ್ ಠಾಣೆಗೆ ಶರಣಾಗುತ್ತಾನೆ. ಅಲ್ಲಿ ಇನ್‌ಸ್ಪೆಕ್ಟರ್ ಕಾಳೆ ಪ್ರತ್ಯಕ್ಷ ಆಗುತ್ತಾರೆ. ಕಾಳೆ ಈ ಧಾರಾವಾಹಿಯ ಕತೆಗೆ ಟರ್ನಿಂಗ್ ಪಾಯಿಂಟ್ ಆಗುತ್ತಾರೆ. ಕಾಳೆ

ಹೇಳುವುದು ಏನೆಂದರೆ, ಹರಿಯನ್ನೂ ಚಂದನಾಳನ್ನೂ ಉಳಿಸುವ ಏಕೈಕ ಮಾರ್ಗ ಎಂದರೆ ಅವರಿಬ್ಬರೂ ಮದುವೆಯಾಗಬೇಕು. ಈ ಪರಿಸ್ಥಿತಿಯನ್ನು ಹರಿ ತನ್ನ ಪ್ರಯೋಜನಕ್ಕೆ ಬಳಸಿಕೊಳ್ಳುತ್ತಾನೆ ಮತ್ತು ಹೇಗೆ ಅವರ ಮದುವೆ ನಡೆಯುತ್ತದೆ ಎಂಬುದು ಅತ್ಯಂತ ಆಸಕ್ತಿಕರ ವಿಷಯವಾಗಿದೆ. ಈ ಕುತೂಹಲಕರ ರೋಮಾಂಚಕ ಎಪಿಸೋಡ್ ಗಳನ್ನು ತಪ್ಪದೇ ನೋಡಿ ಕಲರ್ಸ್ ಕನ್ನಡದಲ್ಲಿ. ವಾರದ ಏಳೂ ದಿನ ರಾತ್ರಿ 8ಕ್ಕೆ ಪ್ರಸಾರವಾಗುತ್ತದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments