ರಾಜ್ಯಸುದ್ದಿ

ಕಗ್ಗಲೀಪುರ ಹೋಮ್ ಸ್ಟೇನಲ್ಲಿ ರೇವ್ ಪಾರ್ಟಿ ಆರೋಪ.. 130 ಜನ ಬಂಧನ

ರಾಮನಗರ: ಕಗ್ಗಲೀಪುರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿರುವ ಹೋಮ್​​​​​ ಸ್ಟೇ ಒಂದರಲ್ಲಿ ರೇವ್​ ಪಾರ್ಟಿ ನಡೆದ ಆರೋಪ ಹಿನ್ನೆಲೆಯಲ್ಲಿ ತಡರಾತ್ರಿ ಕಗ್ಗಲೀಪುರ ಪೊಲೀಸರು ದಾಳಿ ಮಾಡಿ ಯುವಕ, ಯುವತಿಯರು ಸೇರಿ 130 ಜನರನ್ನು ಬಂಧಿಸಿದ್ದಾರೆ..

ಪಾರ್ಟಿ ನಡೆಯುತ್ತಿದ್ದಾಗಲೇ ಕಗ್ಗಲೀಪುರ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಅಲ್ಲಿದ್ದ 130ಕ್ಕೂ ಹೆಚ್ಚು ಯುವಕ, ಯುವತಿಯರನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಬೆಂಗಳೂರು ಮೂಲದವರು ಎಂದು ತಿಳಿದು ಬಂದಿದೆ. ಸುಮಾರು ಮಧ್ಯರಾತ್ರಿ 3ಗಂಟೆಗೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಪಾರ್ಟಿಯಲ್ಲಿ ಮಾದಕ ವಸ್ತುಗಳ ಬಳಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಬಂಧಿತ ಆರೋಪಿಗಳಿಗೆ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಲಾಗಿದೆ. ಹೋಮ್ ಸ್ಟೇ, ಸುಹಾಸ್ ಗೌಡ ಎಂಬುವವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ.

Comments (0)

Your email address will not be published. Required fields are marked *

Back to top button