Monday, June 23, 2025
25.9 C
Bengaluru
Google search engine
LIVE
ಮನೆ#Exclusive NewsTop Newsಬಣ್ಣದ ಲೋಕಕ್ಕೆ ನಿವೃತ್ತಿ ಘೋಷಿದ ರಶ್ಮಿಕಾ ಮಂದಣ್ಣ.!

ಬಣ್ಣದ ಲೋಕಕ್ಕೆ ನಿವೃತ್ತಿ ಘೋಷಿದ ರಶ್ಮಿಕಾ ಮಂದಣ್ಣ.!

‘ಅನಿಮಲ್’, ‘ಪುಷ್ಪ 2’ ಯಶಸ್ಸಿನ ಬಳಿಕ ‘ಛಾವಾ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಿವೃತ್ತಿ ಹೊಂದುವ ಬಗ್ಗೆ ನಟಿ ಮಾತನಾಡಿದ್ದಾರೆ. ಟಾಪ್‌ ನಟಿ ಹ್ಯಾಪಿ ಟು ರಿಟೈರ್ ಎಂದಿರೋದು ಸಹಜವಾಗಿ ಶ್ರೀವಲ್ಲಿ ಫ್ಯಾನ್ಸ್‌ಗೆ ಶಾಕ್ ಆಗಿದೆ.

ರಶ್ಮಿಕಾ ಮಂದಣ್ಣ ಅವರು ಹಿಂದಿಯಲ್ಲಿ ‘ಗುಡ್​ಬೈ’ ಹಾಗೂ ‘ಮಿಷನ್ ಮಜ್ನು’ ಸಿನಿಮಾಗಳನ್ನು ಮಾಡಿದ್ದಾರೆ. ಇದು ಅವರ ಬಾಲಿವುಡ್ ಜರ್ನಿಗೆ ಸಾಕಷ್ಟು ಮೈಲೇಜ್ ನೀಡಿದೆ. ಹಿಂದಿ ನಿರ್ಮಾಪಕರು ರಶ್ಮಿಕಾ ಅವರ ಕಾಲ್​ಶೀಟ್ ಪಡೆಯಲು ರೇಸ್​ನಲ್ಲಿ ಇದ್ದಾರೆ. ಅವರು ವಿಕ್ಕಿ ಕೌಶಲ್ ಜೊತೆ ‘ಛಾವಾ’ ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ಮರಾಠ ದೊರೆ ಛತ್ರಪತಿ ಶಿವಾಜಿ ಪುತ್ರ ಸಾಂಭಾಜಿ ಮಹರಾಜನ ಪಾತ್ರದಲ್ಲಿ ವಿಕ್ಕಿ ನಟಿಸಿದ್ದಾರೆ. ನಟಿ ರಶ್ಮಿಕಾ ಅವರು ಸಾಂಭಾಜಿ ಪತ್ನಿ ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಈ ಪಾತ್ರ ಮಾಡಿ ತೃಪ್ತಿ ಆಗಿದೆ.

‘ಅದೊಂದು ಗೌರವ. ದಕ್ಷಿಣದಿಂದ ಬಂದು ಮಹಾರಾಣಿ ಯೇಸುಬಾಯಿ ಪಾತ್ರವನ್ನು ಮಾಡಿದ್ದೇನೆ. ಇದು ನನ್ನ ಜೀವಿತಾವಧಿಯಲ್ಲಿ ಮಾಡಿದ ವಿಶೇಷ ಕೆಲಸ. ಈ ಸಿನಿಮಾ ಬಳಿಕ ನಿವೃತ್ತಿ ಹೊಂದಲು ನನಗೆ ಖುಷಿ ಇದೆ ಎಂದು ನಿರ್ದೇಶಕ ಲಕ್ಷ್ಮಣ್ ಅವರಿಗೆ ಹೇಳಿದ್ದೇನೆ’ ಎಂದಿದ್ದಾರೆ ರಶ್ಮಿಕಾ.

ನಾನು ಅಳುತ್ತಾ ಕೂರುವ ವ್ಯಕ್ತಿ ಅಲ್ಲ. ಆದರೆ, ಈ ಟ್ರೇಲರ್​ನ ನನ್ನನ್ನು ಪ್ರಚೋದಿಸಿತು. ವಿಕ್ಕಿ ಕೌಶಲ್ ದೇವರ ರೀತಿ ಕಾಣುತ್ತಿದ್ದಾರೆ. ಅವರು ಛಾವಾ’ ಎಂದು ರಶ್ಮಿಕಾ ಮಂದಣ್ಣ ಅವರು ಟ್ರೇಲರ್ ಲಾಂಚ್ ಈವೆಂಟ್​ನಲ್ಲಿ ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಚಿತ್ರರಂಗದಲ್ಲಿ ಬೇಡಿಕೆ ಹೊಂದಿದ್ದಾರೆ. ಅವರಿಗೆ ಇನ್ನೂ 28 ವರ್ಷ ವಯಸ್ಸು. ಅವರು ಇಷ್ಟು ಬೇಗ ನಿವೃತ್ತಿ ಪಡೆಯೋದು ಅನುಮಾನವೇ. ಅವರು ವಿವಾಹದ ಬಳಿಕ ಈ ಬಗ್ಗೆ ಆಲೋಚಿಸಬಹುದು. ಅಲ್ಲಿಯವರೆಗೆ ಅವರು ಬಣ್ಣದ ಲೋಕದಲ್ಲಿ ತಮ್ಮ ಪ್ರಯಾಣ ಮುಂದುವರಿಸಲಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments