ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ವಂದತಿಗಳಿಗೆ ನಟಿ ರಶ್ಮಿಕಾ ಫುಲ್ ಸ್ಟಾಪ್ ಇಟ್ಟಿದ್ದಾರೆ..
ದಿ ಗರ್ಲ್‌ಫ್ರೆಂಡ್ ಚಿತ್ರದ ಪ್ರಚಾರದ ಸಮಯದಲ್ಲಿ, ರಶ್ಮಿಕಾ ಹಾನೆಸ್ಟ್ ಟೌನ್‌ಹಾಲ್ ನಲ್ಲಿ ವಿಜಯ್ ರನ್ನು ಮದುವೆ ಆಗುವುದಾಗಿ ನೇರವಾಗಿ ಒಪ್ಪಿಕೊಂಡಿದ್ದಾರೆ.. ಫ್ಯಾನ್ಸ್‌ವೊಬ್ಬರು ಕೇಳಿದ ಪ್ರಶ್ನೆಗೆ ಮುಗುಳುನಕ್ಕ ನಟಿ ನೇರವಾಗಿ ಉತ್ತರಿಸಿದ್ದಾರೆ. ಆ ರೂಮರ್ಸ್ ಎಲ್ಲರಿಗೂ ಗೊತ್ತಿದೆ, ಅದು ಸತ್ಯ ಎಂದಿದ್ದಾರೆ. ಇದೇ ವೇಳೆ ಮದುವೆ ಆಗೋದಾದ್ರೆ ಯಾರನ್ನ ಆಗ್ತೀರಾ ಎಂಬ ಫ್ಯಾನ್ ಪ್ರಶ್ನೆಗೆ ಹಿಂದೆ ಮುಂದೆ ಯೋಚನೆ ಮಾಡದೇ ವಿಜಯ್‌ನ ಮದುವೆ ಆಗ್ತೀನಿ ಎಂದಿದ್ದಾರೆ. ಹೀಗಾಗಿ ರಶ್ಮಿಕಾ ಮತ್ತು ವಿಜಯ್ ನಡುವಿನ ಪ್ರೀತಿಯ ವಿಚಾರ ಇದೀಗ ಬಹಿರಂಗ ವಾಗಿದೆ..
ಇನ್ನು ನಟಿ ರಶ್ಮಿಕಾರನ್ನು ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ನೀವು ಜೀವನ ಸಂಗಾತಿಯಲ್ಲಿ ಏನನ್ನು ಹುಡುಕುತ್ತಿದ್ದೀರಿ ಎಂದು ಕೇಳಿದಾಗ, ಅವರು ನನ್ನನ್ನು ಆಳವಾಗಿ ಅರ್ಥಮಾಡಿಕೊಳ್ಳುವ, ನನ್ನ ದೃಷ್ಟಿಕೋನದಿಂದ ಜೀವನವನ್ನು ನೋಡಬಲ್ಲ ಮತ್ತು ಪ್ರತಿಯೊಂದು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ವ್ಯಕ್ತಿಯನ್ನು ನಾನು ಬಯಸುತ್ತೇನೆ. ಸತ್ಯವಂತ, ಪ್ರಾಮಾಣಿಕ ಮತ್ತು ಪ್ರತಿಯೊಂದು ಕಷ್ಟದಲ್ಲೂ ನನ್ನೊಂದಿಗೆ ನಿಲ್ಲುವ ವ್ಯಕ್ತಿಯನ್ನು ನಾನು ಬಯಸುತ್ತೇನೆ” ಎಂದು ಹೇಳಿದರು.
ನಾಳೆ ನನ್ನ ವಿರುದ್ಧ ಯುದ್ಧ ನಡೆದರೆ, ಅವನು ನನ್ನೊಂದಿಗೆ ಅಥವಾ ನನಗಾಗಿ ಹೋರಾಡುತ್ತಾನೆ. ನಾನು ಅವನಿಗಾಗಿ ಹೋರಾಡುತ್ತೇನೆ, ಅವನಿಗಾಗಿ ಇರುತ್ತೇನೆ ಎಂದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ರಶ್ಮಿಕಾ ಮತ್ತು ವಿಜಯ್ ಫೆಬ್ರವರಿ 2026 ರಲ್ಲಿ ಮದುವೆಯಾಗುವ ನಿರೀಕ್ಷೆಯಿದೆ. ರಶ್ಮಿಕಾ ಇತ್ತೀಚೆಗೆ ಉದಯಪುರಕ್ಕೆ ಭೇಟಿ ನೀಡಿದ್ದರು, ಅಲ್ಲಿ ಅವರು ಸಂಭಾವ್ಯ ವಿವಾಹ ಸ್ಥಳಗಳನ್ನು ನೋಡಿದರು. ಅದ್ಧೂರಿ ಮದುವೆ ಯೋಜಿಸಲು ಪ್ರಾರಂಭಿಸಿದ್ದಾರೆ ಎಂದು ಮೂಲವೊಂದು ಬಹಿರಂಗಪಡಿಸಿದೆ.


