Top Newsರಾಜಕೀಯ

Rajyasabha poll: ಕುಪೇಂದ್ರ ರೆಡ್ಡಿ ಸೋಲುವ ಸುಳಿವು ಕೊಟ್ಟ ಹೆಚ್​ಡಿಕೆ – ಯುದ್ಧಭೂಮಿಯಲ್ಲೇ ಶಸ್ತ್ರತ್ಯಾಗ?

ಕರ್ನಾಟಕ ರಾಜ್ಯಸಭೆ ಚುನಾವಣೆ ರಂಗೇರಿದೆ. ಸಂಖ್ಯಾಬಲ ಇಲ್ಲದಿದ್ದರೂ ಹೆಚ್ಚುವರಿ ಅಭ್ಯರ್ಥಿ ಕಣಕ್ಕಿಳಿಸಿದ್ದ ಎನ್​ಡಿಎಗೆ ಸೋಲಿನ ಮುಖಭಂಗ ಎದುರಾಗುವುದು ಹೆಚ್ಚುಕಡಿಮೆ ಖಚಿತವಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರ ಮಾತುಗಳು ಕುಪೇಂದ್ರ ರೆಡ್ಡಿ ಸೋಲಿನ ಮುನ್ಸೂಚನೆಯನ್ನು ನೀಡಿವೆ.

ರಾಜ್ಯಸಭೆ ಚುನಾವಣೆ ಮತದಾನ ಬೆಳಗ್ಗೆ 9 ಗಂಟೆಗೆ ಶುರುವಾಗಿದ್ದು, ವೋಟಿಂಗ್​ ನಡೆದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ,

ನಮ್ಮ ಪಕ್ಷದ 19 ಶಾಸಕರ ಒಗ್ಗಟ್ಟನ್ನು ಕಾಪಾಡಿಕೊಳ್ಳಲು ಕುಪೇಂದ್ರ ರೆಡ್ಡಿಯನ್ನು ಕಣಕ್ಕೆ ಇಳಿಸಿದ್ದೆವು. ಸೋಲು-ಗೆಲುವಿಗಾಗಿ ಅಲ್ಲ

ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಮತದಾನ ಪೂರ್ಣಗೊಳ್ಳುವ ಮೊದಲೇ ಕುಪೇಂದ್ರ ರೆಡ್ಡಿ ಸೋಲುವ ಮುನ್ಸೂಚನೆಯನ್ನು ಕುಮಾರಸ್ವಾಮಿ ನೀಡಿದ್ದಾರೆ.

ವಿರೋಧ ಪಕ್ಷದ ನಾಯಕ ಅಶೋಕ್ ಮಾತುಗಳು ಸಹ ಪರೋಕ್ಷವಾಗಿ ಅದನ್ನೇ ಧ್ವನಿಸಿವೆ.

ನಮ್ಮ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ. ಜೆಡಿಎಸ್​ ಅಭ್ಯರ್ಥಿ ಗೆಲ್ತಾರೆ ಅನ್ನೋದನ್ನು ನಿರೀಕ್ಷಿಸೋಣ

ಎಂದು ಅಶೋಕ್ ಹೇಳಿಕೆ ನೀಡಿದ್ದಾರೆ. ಅವರ ಮಾತುಗಳಲ್ಲಿ ಇಬ್ಬರು ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂಬ ವಿಶ್ವಾಸ ಕಂಡುಬರಲಿಲ್ಲ.

Comments (0)

Your email address will not be published. Required fields are marked *

Back to top button