Top Newsರಾಜಕೀಯಸುದ್ದಿ

ಸಿಂಘ್ವಿ ಆಸನದಲ್ಲಿ ನೋಟಿನ ಕಂತೆ ಪತ್ತೆ – ಕಾಂಗ್ರೆಸ್‌ ಸಂಸದ ಮನುಸಿಂಘ್ವಿ ವಿರುದ್ಧ ತನಿಖೆಗೆ ಆದೇಶ

ನವದೆಹಲಿ: ರಾಜ್ಯಸಭೆಯ ಸದಸ್ಯರ ಸೀಟಿನಲ್ಲಿ ಹಣ ಪತ್ತೆಯಾಗಿದೆ. ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಮೀಸಲಾಗಿದ್ದ ಆಸನದಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿದೆ.

ರಾಜ್ಯಸಭೆಯ ಸೀಟ್ ನಂಬರ್ 222 ರಲ್ಲಿ ನೋಟುಗಳು ಪತ್ತೆಯಾಗಿವೆ. ನಿನ್ನೆ ಸದನ ಮುಕ್ತಾಯದ ಬಳಿಕ ರೊಟೀನ್ ಚೆಕಪ್ ವೇಳೆ‌ ಹಣ ಕಂಡುಬಂದಿದೆ. ಹಣ ಪತ್ತೆಯಾಗಿರುವ ಬಗ್ಗೆ ರಾಜ್ಯಸಭೆ ಸಭಾಧ್ಯಕ್ಷರು ಇಂದು ಸದನದಲ್ಲಿ ಮಾಹಿತಿ ನೀಡಿದರು.

ಅಭಿಷೇಕ್ ಮನುಸಿಂಘ್ವಿ ಹೆಸರು ಉಲ್ಲೇಖಿಸಿ ಜಗದೀಪ್ ಧನ್ಕರ್ ಮಾತನಾಡಿದರು. ಅಭಿಷೇಕ್ ಮನುಸಿಂಘ್ವಿ ಹೆಸರು ಉಲ್ಲೇಖಿಸಿದ್ದಕ್ಕೆ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದರು. ತನಿಖೆಗೂ ಮೊದಲೇ ಸದಸ್ಯರ ಹೆಸರು ಉಲ್ಲೇಖಿಸಿದ್ದನ್ನು ಖಂಡಿಸಿದರು.

ಆದರೆ, ಈ ಆರೋಪಗಳನ್ನು ಮನುಸಿಂಘ್ವಿ ಅವರು ಅಲ್ಲಗಳೆದಿದ್ದಾರೆ. ನಾನು ರಾಜ್ಯಸಭೆಗೆ ಹೋಗುವಾಗ 500 ರೂ. ನೋಟು ಮಾತ್ರ ನನ್ನ ಬಳಿ ಇತ್ತು. ಕಲಾಪದ ಬಳಿಕ 1:30ಕ್ಕೆ‌ ಕಲಾಪಕ್ಕೆ ಬಂದಿದ್ದೇನೆ. ಬಳಿಕ ಸಂಸತ್‌ನಿಂದ ನಿರ್ಗಮಿಸಿದ್ದೇನೆ. ಆರೋಪಕ್ಕೂ ನನಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

Comments (0)

Your email address will not be published. Required fields are marked *

Back to top button