ಕಾಗವಾಡ: ಪಾಕಿಸ್ತಾನವನ್ನು ಭೂಪಟದಿಂದಲೇ ಕಿತ್ತಾಕಬೇಕೆಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಗುಡುಗಿದ್ದಾರೆ..
ಉಗ್ರಗಾಮಿಗಳ ಅಟ್ಟಹಾಸಕ್ಕೆ ಪಹಲ್ಗಾಂನಲ್ಲಿ 27 ಪ್ರವಾಸಿಗರು ಸಾವನ್ನಪ್ಪಿದ್ದು, ಇದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಪಾಕಿಸ್ತಾನ ಮೇಲಿಂದ ಮೇಲೆ ಭಾರೀತಿಯರ ಸಹನೆಯನ್ನ ಪರೀಕ್ಷಿಸುತ್ತಿದೆ.ಅವರ ಈ ದುಷ್ಕೃತ್ಯಕ್ಕೆ ಪಾಕಿಸ್ತಾನಕ್ಕೆ ನಮ್ಮ ಭಾರತೀಯ ಸೈನಿಕರು ತಕ್ಕ ಪಾಠ ಕಲಿಸುತ್ತಾರೆ ಎಂದು ರಾಜು ಕಾಗೆ ಹೇಳಿದ್ದಾರೆ..
ಈಗಾಗಲೇ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ರಾಜ ತಾಂತ್ರಿಕ ನಿಲುವುಗಳಿಂದಲೇ ಪಾಕಿಸ್ತಾನ ತತ್ತರಿಸಿ ಹೋಗಿದೆ. ಮನುಷ್ಯ ಮನುಷ್ಯರನ್ನು ಕೊಲ್ಲುವುದು ಎಷ್ಟು ಸರಿ ಆದ್ದರಿಂದ ನಾವೆಲ್ಲ ಭಾರತೀಯರು ಒಗ್ಗಟ್ಟಾಗಿ ಇರಬೇಕು ಇದರಲ್ಲಿ ರಾಜಕೀಯ ಮಾಡಬಾರದು.ಅವಶ್ಯಕತೆ ಬಿದ್ದಲ್ಲಿ ನಾವು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಲು ಸಿದ್ದರಾಗಬೇಕು ಎಂದರು..
ಸಿಎಂ ಮಾತು ಟಂಗ್ ಸ್ಲಿಪ್ ಎಂದ ರಾಜು ಕಾಗೆ:
ಉಗ್ರರ ದಾಳಿ ಹಿನ್ನೆಲೆ ಪಾಕಿಸ್ತಾನದ ಜೊತೆ ಯುದ್ಧ ಬೇಡ ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ದೇಶದಲ್ಲಿ ಸುದ್ದಿಯಾಗಿತ್ತು. ಅವರ ಈ ಮಾತಿನಿಂದ ಸಾಕಷ್ಟು ಭಾರತೀಯರು ಅವರ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದರು ಇದನ್ನು ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ ನಾನು ಹಾಗೆ ಹೇಳಿಲ್ಲ ಎಂದು ಯು ಟರ್ನ್ ಹೊಡೆದಿದ್ದರು..
ಇದೇ ವಿಚಾರವಾಗಿ ಕೈ ಶಾಸಕ ರಾಜು ಕಾಗೆ ಮಾತನಾಡಿದ್ದು ಅದು ಸಿಎಂ ಟಂಗ್ ಸ್ಲಿಪ್ ನಿಂದ ಆದ ಮಾತು ಇದನ್ನು ಯಾರು ತಿರುಚುವ ಅವಶ್ಯಕತೆ ಇಲ್ಲ ನಾವೆಲ್ಲ ಭಾರತೀಯರು. ಉಗ್ರರ ಅಟ್ಟಹಾಸದಲ್ಲಿ ಮಡಿದ 27 ಜನ ಭಾರತೀಯರು ನಮ್ಮವರೇ, ನಮ್ಮ ಕುಟುಂಬ ಸದಸ್ಯರಿಗೆ ಈ ರೀತಿಯ ಗೆದ್ದರೆ ಯಾರು ಸಹಿಸುತ್ತಿರಲಿಲ್ಲ ಸಿಎಂ ಕೂಡ ಭಾರತೀಯರೇ ಅವರು ಬಾಯಿ ತಪ್ಪಿ ಅಂದ ಮಾತಿನಿಂದ ಎಲ್ಲಾ ಅವಾಂತರಗಳಾಗಿವೆ ಎಂದರು…